twitter
    For Quick Alerts
    ALLOW NOTIFICATIONS  
    For Daily Alerts

    'ರಾಬರ್ಟ್' ಹೆಸರಲ್ಲಿ ನಡೆಯುತ್ತಿದೆ ಮೋಸ: ಎಚ್ಚರ ಎಂದ ನಿರ್ಮಾಪಕ

    |

    ಗುರುವಾರ ಬಿಡುಗಡೆ ಆಗಿರುವ ದರ್ಶನ್ ಅಭಿನಯದ 'ರಾಬರ್ಟ್' ಸಿನಿಮಾ ಮೊದಲ ದಿನವೇ ಅದ್ಭುತ ಗಳಿಕೆ ಮಾಡಿಕೊಂಡು ಮುಂದೆ ಸಾಗುತ್ತಿದೆ. ಆದರೆ ಬಿಡುಗಡೆ ಆಗಿ ಒಂದೇ ದಿನಕ್ಕೆ ಸಿನಿಮಾಕ್ಕೆ ಪೈರಸಿ ಕಾಟ ಪ್ರಾರಂಭವಾಗಿದೆ.

    'ರಾಬರ್ಟ್' ಸಿನಿಮಾ ಹೆಸರಲ್ಲಿ ಸಾವಿರಾರು ಲಿಂಕ್‌ಗಳು ಅಂತರ್ಜಾಲದಲ್ಲಿ ಹುಟ್ಟಿಕೊಂಡಿವೆ. ಪೈರಸಿ ಕಾಟವನ್ನು ಮೊದಲೇ ಊಹಿಸಿದ್ದ ಸಿನಿಮಾದ ನಿರ್ಮಾಪಕ ಉಮಾಪತಿ ಗೌಡ ಅವರು ಪೈರಸಿ ತಡೆಗೆಂದೇ ಪ್ರತ್ಯೇಕ ತಂಡವನ್ನು ಮಾಡಿಕೊಂಡು ಲಿಂಕ್‌ಗಳನ್ನು ಡಿಲೀಟ್ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.

    'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್'ರಾಬರ್ಟ್'ಗೆ ಪೈರಸಿ ಕಾಟ: 3 ಸಾವಿರಕ್ಕೂ ಅಧಿಕ ಲಿಂಕ್ ಡಿಲೀಟ್

    ಶುಕ್ರವಾರ ಒಂದೇ ದಿನ 'ರಾಬರ್ಟ್' ಹೆಸರಿನಲ್ಲಿದ್ದ ಮೂರು ಸಾವಿರಕ್ಕೂ ಹೆಚ್ಚು ಲಿಂಕ್‌ಗಳನ್ನು ಅಂತರ್ಜಾಲದಿಂದ ಡಿಲೀಟ್ ಮಾಡಿರುವುದಾಗಿ ಉಮಾಪತಿ ಅವರು ಮಾಹಿತಿ ನೀಡಿದ್ದಾರೆ. ಪೈರಸಿ ಲಿಂಕ್‌ಗಳನ್ನು ಡಿಲೀಟ್ ಮಾಡುವ ಪ್ರಕ್ರಿಯೆಯ ನಡುವೆಯೇ 'ರಾಬರ್ಟ್' ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿರುವ ಪ್ರಯತ್ನವೊಂದು ಉಮಾಪತಿ ಅವರ ಕಣ್ಣಿಗೆ ಬಿದ್ದಿದೆ.

     'ರಾಬರ್ಟ್' ಸಿನಿಮಾ ಹೆಸರಲ್ಲಿ ಮೋಸ: ಉಮಾಪತಿ ಶ್ರೀನಿವಾಸ್‌ಗೌಡ

    'ರಾಬರ್ಟ್' ಸಿನಿಮಾ ಹೆಸರಲ್ಲಿ ಮೋಸ: ಉಮಾಪತಿ ಶ್ರೀನಿವಾಸ್‌ಗೌಡ

    'ರಾಬರ್ಟ್ ಸಿನಿಮಾ' ಹೆಸರಿನಲ್ಲಿ ಅಂತರ್ಜಾಲದಲ್ಲಿ ಸಾವಿರಾರು ಲಿಂಕ್‌ಗಳಿವೆ ಆದರೆ ಬಹುತೇಕ ಲಿಂಕ್‌ಗಳ ಒಳಗೆ ಸಿನಿಮಾ ಇಲ್ಲ ಬದಲಿಗೆ ಗೂಗಲ್‌ ಪೇ, ಫೋನ್‌ ಪೇನ ವಿಳಾಸ ಅಥವಾ ಕ್ಯುಆರ್‌ ಕೋಡ್‌ಗಳಿವೆ. ಒಂದು ವೇಳೆ ಸಿನಿಮಾ ನೋಡಲು ಲಿಂಕ್‌ ಮಾಡಿದರೆ ಕ್ಯೂಆರ್‌ ಕೋಡ್ ಪ್ರಕಟಗೊಳ್ಳುತ್ತದೆ ಅಥವಾ ಅನಾಮಿಕರ ಗೂಗಲ್‌ ಪೇ, ಫೋನ್‌ ಪೇ ವಿಳಾಸ ಕಾಣುತ್ತದೆ, ಬಳಕೆದಾರನು ಸಿನಿಮಾ ನೋಡಲೆಂದು ಅವುಗಳ ಮೇಲೆ ಕ್ಲಿಕ್‌ ಮಾಡಿದರೆ ಹಣ ಕಳೆದುಕೊಳ್ಳುವುದು ಪಕ್ಕಾ. ಹಾಗಾಗಿ ಎಚ್ಚರದಿಂದಿರಿ ಎಂದಿದ್ದಾರೆ ಉಮಾಪತಿ ಶ್ರೀನಿವಾಸ ಗೌಡ.

    ಅಂತರ್ಜಾಲದಲ್ಲಿ ಮೋಸ ನಡೆಯುತ್ತಿರುತ್ತದೆ

    ಅಂತರ್ಜಾಲದಲ್ಲಿ ಮೋಸ ನಡೆಯುತ್ತಿರುತ್ತದೆ

    ಉಮಾಪತಿ ಅವರು ಹೇಳಿದಂತೆಯೆ ಅಂತರ್ಜಾಲದಲ್ಲಿ ಹಲವರು ಸಿನಿಮಾ, ಐಫೋನ್‌ ಅಥವಾ ಯಾವುದೋ ವಸ್ತುವಿನ ಹೆಸರಿನಲ್ಲಿ ಲಿಂಕ್ ತೆರೆದಿರುತ್ತಾರೆ. ಐಫೋನ್‌ ಅನ್ನು ಕಡಿಮೆ ಬೆಲೆಗೆ ಕೊಳ್ಳಲೊ ಅಥವಾ ಸಿನಿಮಾ ನೋಡಲೋ ಲಿಂಕ್ ಕ್ಲಿಕ್‌ ಮಾಡಿದರೆ ಅದು ಮತ್ತೊಂದು ಲಿಂಕ್‌ಗೆ ಕರೆದುಕೊಂಡು ಹೋಗಿ ಕ್ಯೂಆರ್‌ ಕೋಡ್ ಪ್ರದರ್ಶಿತವಾಗುತ್ತದೆ. ಒಂದೊಮ್ಮೆ ಬಳಕೆದಾರರು ಕ್ಯುಆರ್‌ ಕೋಡ್ ಸ್ಕ್ಯಾನ್ ಮಾಡಿದರೆ ಖಾತೆಯಲ್ಲಿದ್ದ ಹಣವೆಲ್ಲಾ ಮೋಸಗಾರರ ಪಾಲಾಗುತ್ತದೆ. ಇಂಥ ಮೋಸಗಳು ಅಂತರ್ಜಾಲದಲ್ಲಿ ಹೆಚ್ಚು.

    ವೀಕೆಂಡ್‌ನಲ್ಲಿ ಹೆಚ್ಚಿನ ಗಳಿಕೆ ಸಾಧ್ಯತೆ

    ವೀಕೆಂಡ್‌ನಲ್ಲಿ ಹೆಚ್ಚಿನ ಗಳಿಕೆ ಸಾಧ್ಯತೆ

    ಇನ್ನು 'ರಾಬರ್ಟ್' ವಿಷಯಕ್ಕೆ ಮರಳುವುದಾದರೆ ಸಿನಿಮಾವು ಮೊದಲ ದಿನ ಭರ್ಜರಿ ಓಪನಿಂಗ್ ಕಂಡು ಎರಡನೇ ದಿನವೂ ಮೊದಲ ದಿನದ ಓಘವನ್ನೇ ಮುಂದುವರೆಸಿದೆ. ವೀಕೆಂಡ್‌ನಲ್ಲಿ ಇನ್ನೂ ಹೆಚ್ಚಿನ ಗಳಿಕೆ ಆಗಬಹುದೆಂಬ ನಿರೀಕ್ಷೆಯಲ್ಲಿ ಚಿತ್ರತಂಡ ಇದೆ.

    Recommended Video

    ರಾಬರ್ಟ್ ಸಿನಿಮಾವನ್ನು ದಯವಿಟ್ಟು ಪೈರಸಿ ಮಾಡಬೇಡಿ ಎಂದ ಕಿಚ್ಚ | Filmibeat Kannada
    ಮೊದಲ ದಿನ 17.24 ಕೋಟಿ ಗಳಿಕೆ

    ಮೊದಲ ದಿನ 17.24 ಕೋಟಿ ಗಳಿಕೆ

    'ರಾಬರ್ಟ್' ಸಿನಿಮಾ ಬಿಡುಗಡೆ ಆದ ಮೊದಲ ದಿನ ಭರ್ಜರಿ ಕಲೆಕ್ಷನ್ ಮಾಡಿದೆ. ರಾಜ್ಯದಲ್ಲಿ 'ರಾಬರ್ಟ್' ಬರೋಬ್ಬರಿ 17.24 ಕೋಟಿ ರೂ. ಕಲೆಕ್ಷನ್ ಮಾಡಿದೆ. ಇನ್ನು ಆಂಧ್ರ ಪ್ರದೇಶದಲ್ಲೂ ರಾಬರ್ಟ್ 3.12 ಕೋಟಿ ರುಪಾಯಿ ಬಾಚಿಕೊಂಡಿದೆ. ಎರಡನೇ ದಿನವು ರಾಬರ್ಟ್ ವಿಜಯ ಯಾತ್ರೆ ಮುಂದುವರೆಸಿದೆ.

    English summary
    Cheating going on Internet in the name of Roberrt piracy said Umapathi Shrinivas.
    Saturday, March 13, 2021, 9:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X