#ಮೀಟೂ: ಕ್ರೇಜಿ ಸ್ಟಾರ್ ರವಿಚಂದ್ರನ್ ಬಗ್ಗೆ ಖುಷ್ಬೂ ಮಾಡಿದ ಕಾಮೆಂಟ್ ಏನು.?

Recommended Video

#metoo : ನಟ ರವಿಚಂದ್ರನ್ ಬಗ್ಗೆ ಕಾಮೆಂಟ್ ಮಾಡಿದ ನಟಿ ಖುಷ್ಬೂ | FILMIBEAT KANNADA

ಭಾರತದ ಮೂಲೆ ಮೂಲೆಯಲ್ಲೂ #ಮೀಟೂ ಅಭಿಯಾನ ಪ್ರಾಮುಖ್ಯತೆ ಪಡೆಯುತ್ತಿದೆ. ಇದೇ #ಮೀಟೂ ಮೂಲಕ ಖ್ಯಾತನಾಮರ ಮುಖವಾಡ ಕಳಚಿ ಬೀಳುತ್ತಿದೆ. ಚಿತ್ರರಂಗದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತಿದೆ.

ಕಿರುಕುಳ ಅನುಭವಿಸಿ ಇಲ್ಲಿಯವರೆಗೂ ನೋವು ನುಂಗಿದ್ದ ಮಹಿಳೆಯರು ಇದೀಗ #ಮೀಟೂ ಎನ್ನುತ್ತಾ ತಮ್ಮ ಸಂಕಷ್ಟವನ್ನ ಹೊರ ಹಾಕುತ್ತಿದ್ದಾರೆ. #ಮೀಟೂ ಮೂಲಕ ಸುಭಾಷ್ ಘಾಯ್, ಸಾಜಿದ್ ಖಾನ್, ನಾನಾ ಪಾಟೇಕರ್, ಕೈಲಾಶ್ ಕೇರ್, ಅಲೋಕ್ ನಾಥ್, ವಿಕಾಸ್ ಬಾಹ್ಲ್ ಬಂಡವಾಳ ಬಯಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ನಟಿ ಖುಷ್ಬೂ ಈಗ #ಮೀಟೂ ಬಗ್ಗೆ ಮಾತನಾಡಿದ್ದಾರೆ. ಸಾಲದಕ್ಕೆ ಕ್ರೇಜಿ ಸ್ಟಾರ್ ರವಿಚಂದ್ರನ್ ಬಗ್ಗೆಯೂ ಕಾಮೆಂಟ್ ಮಾಡಿದ್ದಾರೆ. ಟ್ವಿಟ್ಟರ್ ನಲ್ಲಿ ಖುಷ್ಬೂ ಏನು ಹೇಳಿದ್ದಾರೆ ಅಂತ ನೀವೇ ನೋಡಿ ಫೋಟೋ ಸ್ಲೈಡ್ ಗಳಲ್ಲಿ...

#ಮೀಟೂ ಸನ್ನಿವೇಶ ಎದುರಿಸಿಲ್ಲ

#ಮೀಟೂ ಸನ್ನಿವೇಶ ಎದುರಿಸಿಲ್ಲ

''40 ವರ್ಷಗಳ ವೃತ್ತಿ ಜೀವನದಲ್ಲಿ #ಮೀಟೂ ಸನ್ನಿವೇಶವನ್ನ ನೀವು ಎಂದಾದರೂ ಎದುರಿಸಿದ್ದೀರಾ ಅಂತ ಅನೇಕರು ಕೇಳುತ್ತಿದ್ದಾರೆ. ಅಂಥವರಿಗೆ ನಿರಾಸೆಯಾದರೆ ನನ್ನ ಕ್ಷಮೆ ಇರಲಿ. ಯಾಕಂದ್ರೆ, ಅಂತಹ ಸನ್ನಿವೇಶ ನನಗೆ ಎದುರಾಗಿಲ್ಲ'' ಎಂದು ನಟಿ ಖುಷ್ಬೂ ಟ್ವಿಟ್ಟರ್ ನಲ್ಲಿ ಸ್ಪಷ್ಟ ಪಡಿಸಿದ್ದಾರೆ.

ರವಿಚಂದ್ರನ್ ಬಗ್ಗೆ ತೂರಿಬಂದ ಪ್ರಶ್ನೆ

ರವಿಚಂದ್ರನ್ ಬಗ್ಗೆ ತೂರಿಬಂದ ಪ್ರಶ್ನೆ

ರವಿಚಂದ್ರನ್ ಬಗ್ಗೆ ಟ್ವೀಟಿಗರೊಬ್ಬರು ಪ್ರಶ್ನೆ ಮಾಡಿದಾಗ, ''ರವಿಚಂದ್ರನ್ ಬಗ್ಗೆ ನಿಮಗೇನು ಗೊತ್ತು.? ನೀವು ನೊಂದ ಮಹಿಳೆನಾ.? ಇಲ್ಲ ಅಂದ್ರೆ ಇನ್ನೊಬ್ಬರ ಹೆಸರಿಗೆ ಮಸಿ ಬಳಿಯುವುದನ್ನು ನಿಲ್ಲಿಸಿ. ಪಬ್ಲಿಸಿಟಿಗಾಗಿ ಮಾತನಾಡಬೇಡಿ'' ಎಂದು ಖುಷ್ಬೂ ತಿರುಗೇಟು ಕೊಟ್ಟಿದ್ದಾರೆ.

ಟ್ವೀಟಿಗರ ಬಾಯಿಗೆ ಬೀಗ ಜಡಿದ ರವಿಚಂದ್ರನ್

ಟ್ವೀಟಿಗರ ಬಾಯಿಗೆ ಬೀಗ ಜಡಿದ ರವಿಚಂದ್ರನ್

''ನಿಮಗೆ ರವಿಚಂದ್ರನ್ ಬಗ್ಗೆ ಏನೂ ಗೊತ್ತಿಲ್ಲ. ಅವರ ಕಾಲದ ಬಗ್ಗೆಯೂ ಗೊತ್ತಿಲ್ಲ'' ಎನ್ನುತ್ತಾ ಲಕ್ಷ್ಮಿ ಎಂಬುವರ ಬಾಯಿಗೆ ಬೀಗ ಹಾಕಿದ್ದಾರೆ ನಟಿ ಖುಷ್ಬೂ.

ರವಿಚಂದ್ರನ್-ಖುಷ್ಬೂ ಸ್ನೇಹ

ರವಿಚಂದ್ರನ್-ಖುಷ್ಬೂ ಸ್ನೇಹ

ರವಿಚಂದ್ರನ್ ಜೊತೆಗೆ ಖುಷ್ಬೂ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಈಗಲೂ ರವಿಚಂದ್ರನ್ ಹಾಗೂ ಖುಷ್ಬೂ ನಡುವೆ ಆತ್ಮೀಯ ಅನುಬಂಧ ಇದೆ. ಬೆಂಗಳೂರಿಗೆ ಬಂದಾಗೆಲ್ಲಾ ನಟಿ ಖುಷ್ಬೂ ತಪ್ಪದೇ ರವಿಚಂದ್ರನ್ ಮನೆಗೆ ಭೇಟಿ ಕೊಡ್ತಾರೆ.

More from Filmibeat

English summary
Check out Kannada Actress Khushboo's tweet on #Metoo and Ravichandran.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X