ಈ ಚೋಟ 'ಪೈಲ್ವಾನ್'ನನ್ನು ಕಿಚ್ಚನೇ ಮೆಚ್ಚಿಕೊಂಡಿದ್ದಾರೆ

ನಟ ಸುದೀಪ್ ಅಭಿನಯದ 'ಪೈಲ್ವಾನ್' ಟೀಸರ್ ಸೂಪರ್ ಹಿಟ್ ಆಗಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬಾಲಿವುಡ್, ಕಾಲಿವುಟ್, ಟಾಲಿವುಡ್ ನಲ್ಲಿಯೂ ಸಿನಿಮಾದ ಸೌಂಡ್ ಜೋರಾಗಿದೆ.

ಆದರೆ, ಇದೀಗ ಒಬ್ಬ ಚೋಟ 'ಪೈಲ್ವಾನ್' ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾನೆ. ಈ ಪೈಲ್ವಾನ್ ನೋಡಿ ಸ್ವತಃ ಕಿಚ್ಚನೇ ಮೆಚ್ಚಿಕೊಂಡಿದ್ದಾರೆ.

'ಪೈಲ್ವಾನ್' ರೀತಿಯೇ ಒಬ್ಬ ಸಣ್ಣ ಹುಡುಗನ ಫೋಟೋವನ್ನು ಕರುನಾಡ ಕಿಚ್ಚ ಸುದೀಪ್ ಫ್ಯಾನ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸುದೀಪ್ ಸ್ಟೈಲ್ ನಲ್ಲಿಯೇ ಈ ಹುಡುಗನ್ನು ಅಖಾಡಕ್ಕೆ ಇಳಿದಿದ್ದು, ಫೋಟೋ ತುಂಬ ಕ್ಯೂಟ್ ಆಗಿದೆ. ಈ ಫೋಟೋ ನೋಡಿ ಸುದೀಪ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

check out the chhota pailwan poster

ಸುದೀಪ್ ಮಾತ್ರವಲ್ಲದೆ 'ಕೆಜಿಎಫ್' ನಿರ್ಮಾಪಕ ಕಾರ್ತಿಕ್ ಗೌಡ ಕೂಡ ಟ್ವಿಟ್ಟರ್ ನಲ್ಲಿ ಚೋಟ ಪೈಲ್ವಾನ್ ನನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಹುಡುಗನ ಹೆಸರು, ಊರು ಯಾವುದನ್ನು ಇಲ್ಲಿ ಹಂಚಿಕೊಂಡಿಲ್ಲ.

'ಪೈಲ್ವಾನ್' ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ. ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಆಕಾಂಕ್ಷ ಸಿಂಗ್ ಸಿನಿಮಾದ ನಾಯಕಿಯಾಗಿದ್ದಾರೆ. 'ಪೈಲ್ವಾನ್' ಟೀಸರ್ ಗೆ ನಟ ಸಲ್ಮಾನ್ ಖಾನ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ನಟರು ಟ್ವೀಟ್ ಮಾಡಿದ್ದಾರೆ.

More from Filmibeat

English summary
Check out the chhota pailwan poster. Kiccha Sudeep's 'Pailwan' movie is directed by krishna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X