twitter
    For Quick Alerts
    ALLOW NOTIFICATIONS  
    For Daily Alerts

    ಈ ಚೋಟ 'ಪೈಲ್ವಾನ್'ನನ್ನು ಕಿಚ್ಚನೇ ಮೆಚ್ಚಿಕೊಂಡಿದ್ದಾರೆ

    |

    ನಟ ಸುದೀಪ್ ಅಭಿನಯದ 'ಪೈಲ್ವಾನ್' ಟೀಸರ್ ಸೂಪರ್ ಹಿಟ್ ಆಗಿದೆ. ಸ್ಯಾಂಡಲ್ ವುಡ್ ಮಾತ್ರವಲ್ಲದೆ ಬಾಲಿವುಡ್, ಕಾಲಿವುಟ್, ಟಾಲಿವುಡ್ ನಲ್ಲಿಯೂ ಸಿನಿಮಾದ ಸೌಂಡ್ ಜೋರಾಗಿದೆ.

    ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್ ಅಬ್ಬಾ.. ಸುದೀಪ್ 'ಪೈಲ್ವಾನ್' ಬಗ್ಗೆ 'ಸುಲ್ತಾನ್' ಸಲ್ಮಾನ್ ಟ್ವೀಟ್

    ಆದರೆ, ಇದೀಗ ಒಬ್ಬ ಚೋಟ 'ಪೈಲ್ವಾನ್' ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದ್ದಾನೆ. ಈ ಪೈಲ್ವಾನ್ ನೋಡಿ ಸ್ವತಃ ಕಿಚ್ಚನೇ ಮೆಚ್ಚಿಕೊಂಡಿದ್ದಾರೆ.

    'ಪೈಲ್ವಾನ್' ಟೀಸರ್ ನೋಡಿ ಬೆರಗಾದ ಕುಮಾರ್ ಬಂಗಾರಪ್ಪ 'ಪೈಲ್ವಾನ್' ಟೀಸರ್ ನೋಡಿ ಬೆರಗಾದ ಕುಮಾರ್ ಬಂಗಾರಪ್ಪ

    'ಪೈಲ್ವಾನ್' ರೀತಿಯೇ ಒಬ್ಬ ಸಣ್ಣ ಹುಡುಗನ ಫೋಟೋವನ್ನು ಕರುನಾಡ ಕಿಚ್ಚ ಸುದೀಪ್ ಫ್ಯಾನ್ಸ್ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಸುದೀಪ್ ಸ್ಟೈಲ್ ನಲ್ಲಿಯೇ ಈ ಹುಡುಗನ್ನು ಅಖಾಡಕ್ಕೆ ಇಳಿದಿದ್ದು, ಫೋಟೋ ತುಂಬ ಕ್ಯೂಟ್ ಆಗಿದೆ. ಈ ಫೋಟೋ ನೋಡಿ ಸುದೀಪ್ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    check out the chhota pailwan poster

    ಸುದೀಪ್ ಮಾತ್ರವಲ್ಲದೆ 'ಕೆಜಿಎಫ್' ನಿರ್ಮಾಪಕ ಕಾರ್ತಿಕ್ ಗೌಡ ಕೂಡ ಟ್ವಿಟ್ಟರ್ ನಲ್ಲಿ ಚೋಟ ಪೈಲ್ವಾನ್ ನನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಈ ಹುಡುಗನ ಹೆಸರು, ಊರು ಯಾವುದನ್ನು ಇಲ್ಲಿ ಹಂಚಿಕೊಂಡಿಲ್ಲ.

    'ಪೈಲ್ವಾನ್' ಸಿನಿಮಾ ಈ ವರ್ಷದ ಬಹುನಿರೀಕ್ಷಿತ ಸಿನಿಮಾವಾಗಿದೆ. ಕೃಷ್ಣ ಚಿತ್ರದ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಆಕಾಂಕ್ಷ ಸಿಂಗ್ ಸಿನಿಮಾದ ನಾಯಕಿಯಾಗಿದ್ದಾರೆ. 'ಪೈಲ್ವಾನ್' ಟೀಸರ್ ಗೆ ನಟ ಸಲ್ಮಾನ್ ಖಾನ್ ಸೇರಿದಂತೆ ಅನೇಕ ದೊಡ್ಡ ದೊಡ್ಡ ನಟರು ಟ್ವೀಟ್ ಮಾಡಿದ್ದಾರೆ.

    English summary
    Check out the chhota pailwan poster. Kiccha Sudeep's 'Pailwan' movie is directed by krishna.
    Wednesday, January 23, 2019, 9:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X