ಸುದೀಪ್ ಮತ್ತು ರಕ್ಷಿತ್ ಶೆಟ್ಟಿ ಸಿನಿಮಾದಿಂದ ಬಂತು ಹೊಸ ಸುದ್ದಿ!
ಕನ್ನಡ ಚಿತ್ರ ರಂಗದಲ್ಲಿ ಸಾಕಷ್ಟು ಸಿನಿಮಾಗಳು ರಿಲೀಸ್‌ಗಾಗಿ ಕಾಯುತ್ತಿವೆ. ಅದರಲ್ಲಿ ನಟ ಸುದೀಪ್ ಅಭಿನಯದ ಸಿನಿಮಾ ವಿಕ್ರಾಂತ್ ರೋಣ ಕೂಡ ಒಂದು. ಅತ್ತ ನಟ ರಕ್ಷಿತ್ ಶೆಟ್ಟಿ ಅಭಿನಯದ 777 ಚಾರ್ಲಿ ರಿಲೀಸ್‌ಗೆ ರೆಡಿಯಾಗಿದೆ. ಆದರೆ ಅದಕ್ಕೂ ಮುನ್ನ ರಕ್ಷಿತ್ ಶೆಟ್ಟಿ ಕಡೆಯಿಂದ ಸಪ್ತ ಸಾಗರದಾಚೆ ಚಿತ್ರದ ಅಪ್ಡೇಟ್ ಬಂದಿದೆ.
ವಿಕ್ರಾಂತ್ ರೋಣ ಚಿತ್ರದ ಕೆಲವೊಂದು ಮೇಕಿಂಗ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹಾರಿದಾಡುತ್ತಲಿವೆ. ಈ ಮೇಕಿಂಗ್ ಫೊಟೋಗಳು ಚಿತ್ರದ ಮೇಲೆ ಕುತೂಹಲ ಮೂಡಿಸುವಂತೆ ಇದೆ. ಯಾಕೆಂದರೆ. ಫೊಟೋಗಳಲ್ಲಿ ಹೆಚ್ಚಿನ ಮಕ್ಕಳು ಇದ್ದಾರೆ. ವಿಕ್ರಾಂತ್ ರೋಣ ಸೆಟ್‌ನಲ್ಲಿ ಇಷ್ಟೊಂದು ಮಕ್ಕಳು ಅಭಿನಯಿಸಿದ್ದಾರೆ. ಅಂದರೆ ಅಲ್ಲಿ ವಿಶೇಷವಾದ ಸನ್ನಿವೇಷಗಳು ಮಕ್ಕಳಿಗಾಗಿ ಇರುತ್ತವೆ ಎನ್ನಲಾಗಿದೆ. ಜೊತೆಗೆ ಚಿತ್ರದಲ್ಲಿ ನಟ ಸುದೀಪ್ ಅವರು ಈ ಮಕ್ಕಳನ್ನು ಕಾಪಾಡುವಂತಹ ಸನ್ನಿವೇಷಗಳು ಇರಬಹುದು ಎಂದು ಕೆಲವರು ಊಹಿಸಿದ್ದಾರೆ.
ಇದಿಷ್ಟೇ ಅಲ್ಲಾ ವಿಕ್ರಾಂತ್ ರೋಣ ಚಿತ್ರದ ಪ್ರಮೋಷನಲ್ ಹಾಡಿಗೆ ಸಮಯ ನಿಗದಿ ಆಗಿದೆ. ಜನವರಿ 21ರಂದು ಸಂಜೆ ವಿಕ್ರಾಂತ್ ರೋಣ ಚಿತ್ರದ 'ಗಡಂಗ್ ರಕ್ಕಮ್ಮ' ಹಾಡು ರಿಲೀಸ್ ಆಗುತ್ತಿದೆ. ಈ ಹಾಡಿನಲ್ಲಿ ಕಿಚ್ಚ ಸುದೀಪ್ ಜೊತೆಗೆ ಬಾಲಿವುಡ್ ನಟಿ ಜಾಕ್ವೆಲಿನ್ ಹೆಜ್ಜೆ ಹಾಕಿದ್ದಾರೆ.

ಕೊರೊನಾ ನಿಯಂತ್ರಕ್ಕೆ ಬಂದು, ಲಾಕ್ ಡೌನ್, ಕರ್ಫ್ಯೂ ತೆರವಾದರೆ ವಿಕ್ರಾಂತ್ ರೋಣ ಫೆಬ್ರವರಿ 24ಕ್ಕೆ ತಪ್ಪದೇ ರಿಲೀಸ್ ಆಗುತ್ತದೆ. ಆದರೆ ಕೊರೊನಾ ಹಾವಳಿ ಹೆಚ್ಚಾದರೆ ಸಿನಿಮಾ ರಿಲೀಸ್ ಆಗುವುದಿಲ್ಲವಂತೆ. ಈ ಬಗ್ಗೆ ಚಿತ್ರ ತಂಡ ಚಿಂತನೆ ನಡೆಸಿದೆ.
ಇನ್ನು ನಟ ರಕ್ಷಿತ್ ಶೆಟ್ಟಿ 'ಸಪ್ತ ಸಾಗರದಾಕೆ' ಚಿತ್ರದ ಶೂಟಿಂಗ್ ಮುಗಿಸಿದ್ದಾರೆ. ಒಂದು ಹಂತದ ಶೂಟಿಂಗ್ ಮುಕ್ತಾಯ ಆಗಿದ್ದು, ಈ ಬಗ್ಗೆ ನಟ ರಕ್ಷಿತ್ ಶೆಟ್ಟಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಚಿತ್ರದ ಮೇಕಿಂಗ್ ಫೊಟೋಗಳನ್ನು ಕೂಡ ಹಂಚಿಕೊಂಡಿದ್ದಾರೆ. ಆದರೆ ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ರಕ್ಷಿತ್ ಅವರ ಯಾವುದೇ ಸಿನಿಮಾ ರಿಲೀಸ್ ಆಗಿಲ್ಲ. ಹಾಗಾಗಿ ಅವರ ಅಭಿಮಾನಿಗಳು ಚಾರ್ಲಿ ರಿಲೀಸ್‌ಗಾಗಿ ಕಾಯುತ್ತಲಿದ್ದಾರೆ.


Click it and Unblock the Notifications











