ಸ್ಟಾರ್ ನಟರ ಜೊತೆ ಅಂಬಿ ಬರ್ತಡೇ ಪಾರ್ಟಿ: ಯಾರೆಲ್ಲಾ ಇದ್ದರು.?

By Bharath Kumar

ಮೇ ತಿಂಗಳಲ್ಲಿ ಇಬ್ಬರು ಸ್ಯಾಂಡಲ್ ವುಡ್ ದಿಗ್ಗಜರು ಬರ್ತಡೇ. ಮೇ 29 ರೆಬಲ್ ಸ್ಟಾರ್ ಅಂಬರೀಶ್, ಮೇ 30 ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹುಟ್ಟುಹಬ್ಬ.

ನಿನ್ನೆಯಷ್ಟೇ ನಡೆದ ಅಂಬಿ ಬರ್ತಡೇಯನ್ನ ಅಭಿಮಾನಿಗಳು, ಕುಟುಂಬದವರು, ಸ್ನೇಹಿತರು, ಆತ್ಮೀಯರು ಎಲ್ಲರೂ ಸೇರಿ ಜೆಪಿ ನಗರದ ನಿವಾಸದ ಬಳಿ ಆಚರಿಸಿದರು. ನಂತರ ಸಂಜೆ ವೇಳೆಗೆ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದಲ್ಲಿ ಅಂಬಿಯ ಬರ್ತಡೇ ಪಾರ್ಟಿ ಹಮ್ಮಿಕೊಳ್ಳಲಾಗಿತ್ತು.

ಪ್ರತಿವರ್ಷವೂ ಅಂಬಿ ಬರ್ತಡೇಯನ್ನ ಸ್ಯಾಂಡಲ್ ವುಡ್ ತಾರೆಯರು ಒಟ್ಟಾಗಿ ಆಚರಣೆ ಮಾಡ್ತಾರೆ. ಈ ವರ್ಷವೂ ಅದು ನಡೆದಿದ್ದು, ಬಹುತೇಕ ಎಲ್ಲ ನಟ-ನಟಿಯರು, ತಂತ್ರಜ್ಞರು, ನಿರ್ದೇಶಕರು ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಕೆಲವು ಸ್ಟಾರ್ ಗಳು ಕಾಣಿಸಿಕೊಳ್ಳಲಿಲ್ಲ. ಹಾಗಿದ್ರೆ, ಅಂಬಿ ಬರ್ತಡೇ ಪಾರ್ಟಿಯಲ್ಲಿ ಯಾರೆಲ್ಲ ಭಾಗಿಯಾಗಿದ್ದರು ಎಂದು ಫೋಟೋಗಳ ಸಮೇತ ಮುಂದೆ ನೋಡಿ.....

ರಾಕಿಂಗ್ ಸ್ಟಾರ್ ಯಶ್

ರಾಕಿಂಗ್ ಸ್ಟಾರ್ ಯಶ್

ನಿನ್ನೆಯ ಅಂಬರೀಶ್ ಅವರ ಬರ್ತಡೇ ಪಾರ್ಟಿಯಲ್ಲಿ ರಾಕಿಂಗ್ ಸ್ಟಾರ್ ಸ್ಟೈಲಿಶ್ ಆಗಿ ಕಾಣಿಸಿಕೊಂಡ್ರು. ಅಂಬರೀಶ್ ಅವರನ್ನ ಸ್ವತಃ ಯಶ್ ಅವರ ಕಾರಲ್ಲೇ ಕರೆದುಕೊಂಡು ಬಂದರು. ಕಳೆದ ವರ್ಷದ ಪಾರ್ಟಿಯಲ್ಲೂ ಯಶ್ ಭಾಗಿಯಾಗಿದ್ದರು.

ಸೆಂಚುರಿ ಸ್ಟಾರ್ ಶಿವಣ್ಣ

ಸೆಂಚುರಿ ಸ್ಟಾರ್ ಶಿವಣ್ಣ

ರೆಬಲ್ ಸ್ಟಾರ್ ಅಂಬಿಯ ಉತ್ಸವದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಕೂಡ ಭಾಗಿಯಾಗಿದ್ದರು. ಡಾ ರಾಜ್-ವಿಷ್ಣು ನಂತರ ಅಂಬರೀಶ್ ಅವರನ್ನ ಹೆಚ್ಚು ಇಷ್ಟಪಟ್ಟು ಹಿರಿಯ ಸ್ಥಾನದಲ್ಲಿ ನೋಡುತ್ತಾರೆ ಶಿವಣ್ಣ.

ಡೈನಾಮಿಕ್ ಬ್ರದರ್ಸ್

ಡೈನಾಮಿಕ್ ಬ್ರದರ್ಸ್

ಅಂಬರೀಶ್ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ನಟ ದೇವರಾಜ್ ಅವರು ಕಾಣಿಸಿಲ್ಲವಾದರೂ, ಅವರ ಇಬ್ಬರ ಮಕ್ಕಳು ಮಿಂಚ್ತಿದ್ದರು. ಪ್ರಜ್ವಲ್ ದೇವರಾಜ್, ಪ್ರಣಾವ್ ದೇವರಾಜ್ ಜೊತೆ ನೃತ್ಯ ಸಂಯೋಜಕ ಇಮ್ರಾನ್ ಸರ್ದಾರಿಯಾ, ನಿರ್ಮಾಪಕ ಜಾಕ್ ಮಂಜು ಹಾಗೂ ಅಂಬಿ ಪುತ್ರ ಅಭಿಷೇಕ್ ಕೂಡ ಸಖತ್ ಪೋಸ್ ಕೊಟ್ಟರು.

ಮಂಡ್ಯ ಹೈದ ಸತೀಶ್

ಮಂಡ್ಯ ಹೈದ ಸತೀಶ್

'ಮಂಡ್ಯದ ಗಂಡು' ಅಂಬಿಗೆ ಮಂಡ್ಯದ ಹೈದ ಸತೀಶ್ ನೀನಾಸಂ ಶುಭಕೋರಿದರು. ಅಂಬರೀಶ್ ಅವರ ಹಾದಿಯನ್ನ ಅನುಕರಿಸುತ್ತಿರುವ ಸತೀಶ್ ಅವರು, ಇತ್ತೀಚಿನ ಜನರೇಷನ್ ನಲ್ಲಿ ಮಂಡ್ಯವನ್ನ ಹೆಚ್ಚು ಪ್ರತಿನಿಧಿಸುತ್ತಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ

ರಿಯಲ್ ಸ್ಟಾರ್ ಉಪೇಂದ್ರ

ರೆಬಲ್ ಸ್ಟಾರ್ ಬರ್ತಡೇ ಪಾರ್ಟಿಯಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಕೂಡ ಕಾಣಿಸಿಕೊಂಡಿದ್ದಾರೆ. ಜೊತೆಯಲ್ಲಿ ಡೆಡ್ಲಿ ಆದಿತ್ಯ, ಮತ್ತು ದೇವರಾಜ್ ಅವರ ಮಕ್ಕಳು ಕೂಡ ಗಮನ ಸೆಳೆದರು.

ಅನು ಪ್ರಭಾಕರ್ ದಂಪತಿ

ಅನು ಪ್ರಭಾಕರ್ ದಂಪತಿ

ಚೊಚ್ಚಲ ಮಗುವಿಗೆ ತಂದೆ-ತಾಯಿಯಾಗುತ್ತಿರುವ ಸಿಹಿ ಸುದ್ದಿ ಹಂಚಿಕೊಂಡಿದ್ದ ಅನು ಪ್ರಭಾಕರ್ ಮತ್ತು ರಘು ಮುಖರ್ಜಿ ದಂಪತಿ ಅಂಬರೀಶ್ ಅವರನ್ನ ಭೇಟಿ ಮಾಡಿ ಶುಭ ಕೋರಿದರು.

ತಾಯಿ ಮತ್ತು ಮಗಳು

ತಾಯಿ ಮತ್ತು ಮಗಳು

ಅಂಬಿ ಬರ್ತಡೇಯ ಸಮಾರಂಭದಲ್ಲಿ ನಟಿ ಸುಧಾ ಬೆಳವಾಡಿ ಮತ್ತು ಮಗಳು ಸಂಯುಕ್ತ ಹೊರನಾಡು ಇಬ್ಬರು ಕಾಣಿಸಿಕೊಂಡಿದ್ದಾರೆ. ಈ ವೇಳೆ ರಾಕಿಂಗ್ ಸ್ಟಾರ್ ಯಶ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ವಿಶೇಷವಾಗಿತ್ತು.

ಮಾಲಾಶ್ರೀ ಶುಭಾಶಯ

ಮಾಲಾಶ್ರೀ ಶುಭಾಶಯ

ಆಕ್ಷನ್ ಕ್ವೀನ್ ಮಾಲಾಶ್ರೀ ಅವರು ಅಂಬರೀಶ್ ಅವರಿಗೆ ಹೂಗುಚ್ಛ ನೀಡಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ಒಂದು ಸಮಯದಲ್ಲಿ ಅಂಬರೀಶ್ ಮತ್ತು ಮಾಲಾಶ್ರೀ ಜೋಡಿ ಸೂಪರ್ ಹಿಟ್ ಎನಿಸಿಕೊಂಡಿತ್ತು.

ರಾಗಿಣಿ ಪ್ರೆಸೆಂಟ್

ರಾಗಿಣಿ ಪ್ರೆಸೆಂಟ್

ಅಂಬರೀಶ್ ಅವರ ಪಾರ್ಟಿಯಲ್ಲಿ ಇತ್ತೀಚಿನ ನಟಿಯರಲ್ಲಿ ವಿಶೇಷವಾಗಿ ಗಮನ ಸೆಳೆದಿದ್ದು, ನಟಿ ರಾಗಿಣಿ. ವೈಟ್ ಅಂಡ್ ವೈಟ್ ನಲ್ಲಿ ತುಪ್ಪದ ಹುಡುಗಿ ಮಿಂಚಿದರು. ಸಹನಟರ ಜೊತೆ ಫೋಟೋ ತೆಗೆಸಿಕೊಂಡು ಖುಷಿ ಪಟ್ಟರು.

ರಮೇಶ್ ಜೊತೆ ಚಿನ್ನಾರಿ ಮುತ್ತಾ

ರಮೇಶ್ ಜೊತೆ ಚಿನ್ನಾರಿ ಮುತ್ತಾ

ನಟ ರಮೇಶ್ ಅರವಿಂದ್ ಅವರು ಈ ವಿಶೇಷವಾದ ಸಮಾರಂಭದಲ್ಲಿ ಅತಿಥಿಯಾಗಿ ಕಾಣಿಸಿಕೊಂಡರು. ಅಂಬಿಯ ಬರ್ತಡೇ ಪಾರ್ಟಿಯನ್ನ ನಟ ವಿಜಯ ರಾಘವೇಂದ್ರ ನಿರೂಪಣೆ ಮಾಡಿದ್ದು ಮತ್ತಷ್ಟು ವಿಶೇಷ.

ವಾಣಿಜ್ಯ ಮಂಡಳಿ ಸದಸ್ಯರು

ವಾಣಿಜ್ಯ ಮಂಡಳಿ ಸದಸ್ಯರು

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಸದ್ಯಸರು ಅಂಬರೀಶ್ ಅವರ ಹುಟ್ಟುಹಬ್ಬಕ್ಕೆ ವಿಶ್ ಮಾಡಿದರು. ಅಧ್ಯಕ್ಷ ಸಾರಾ ಗೋವಿಂದು, ಎಂ.ಜೆ ರಾಮಮೂರ್ತಿ, ದಿನೇಶ್ ಗಾಂಧಿ, ಎ ಗಣೇಶ್ ಶುಭ ಕೋರಿದರು.

ಹಿರಿಯ ಕಲಾವಿದರು ಭಾಗಿ

ಹಿರಿಯ ಕಲಾವಿದರು ಭಾಗಿ

ಈ ಎಲ್ಲ ಕಲಾವಿದರ ಜೊತೆ ಕನ್ನಡ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು. ಹಿರಿಯ ನಟರಾದ ರಾಜೇಶ್, ಶ್ರೀನಿವಾಸ ಮೂರ್ತಿ, ದೊಡ್ಡಣ್ಣ, ರಮೇಶ್ ಭಟ್, ಮುಖ್ಯಮಂತ್ರಿ ಚಂದ್ರು, ರಾಮಕೃಷ್ಣ, ಬಿ ಸರೋಜಾದೇವಿ, ನಟಿ ಸರಿತಾ, ಡಿಂಗ್ರಿ ನಾಗರಾಜ್ ಅವರ ಮಗ ರಾಜವರ್ಧನ್, ಬ್ಯಾಂಕ್ ಜನಾರ್ಧನ್, ನಿರ್ದೇಶಕ ನಾಗಶೇಖರ್, ರಾಕ್ ಲೈನ್ ವೆಂಕಟೇಶ್, ನಟಿ ದೀಪಿಕಾ ದಾಸ್, ಗಿರೀಜಾ ಲೋಕೇಶ್, ನಟ ಕುಮಾರ್ ಗೋವಿಂದ್ ಸೇರಿದಂತೆ ಹಲವರು ಗಣ್ಯರು ಭಾಗಿಯಾಗಿದ್ದರು.

More from Filmibeat

English summary
Check out this all star picture from Ambareesh's birthday bash. The Rebel Star is seen with upendra, Yash, Puneeth Rajkumar, aditya, Abishek Ambareesh and Prajwal Devaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X