Deepavali 2024: ದೀಪಾವಳಿ ಹಬ್ಬಕ್ಕೆ ಚಂದನವನದಲ್ಲಿ ಸಿಡಿದ ಪಟಾಕಿ, ಬಾಣ- ಬಿರುಸು

ವಿಶ್ವದೆಲ್ಲೆಡೆ ದೀಪಾವಳಿ ಹಬ್ಬದ ಸಡಗರ ಸಂಭ್ರಮ ಜೋರಾಗಿದೆ. ಜನ ತಮ್ಮದೇ ಸಂಸ್ಕೃತಿ, ಸಂಪ್ರದಾಯ, ರೂಢಿಯಂತೆ ಹಬ್ಬವನ್ನು ಆಚರಿಸುತ್ತಿದ್ದಾರೆ. ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ. ಪಟಾಕಿ ಸಿಡಿಸಿ ಸಂಭ್ರಮಿಸುತ್ತಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಕೂಡ ದೀಪಾವಳಿ ಸಂಭ್ರಮ ಕಳೆ ಕಟ್ಟಿದೆ. ಹಬ್ಬದ ಸಂಭ್ರಮದಲ್ಲಿ ತೆರೆಗೆ ಬಂದ 'ಬಘೀರ' ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಡಾ. ಸೂರಿ ನಿರ್ದೇಶನದ ಚಿತ್ರದಲ್ಲಿ ಎರಡು ಶೇಡ್‌ಗಳಿರುವ ಪಾತ್ರದಲ್ಲಿ ಶ್ರೀಮುರಳಿ ಅಬ್ಬರಿಸಿದ್ದಾರೆ. ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗಿದ್ದು ಪ್ರಶಾಂತ್ ನೀಲ್ ಕಥೆ ಬರೆದಿದ್ದಾರೆ. ಮೊದಲ ದಿನಕ್ಕಿಂತ 2ನೇ ದಿನ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.

Check out this Diwali special poster songs from sandalwood

ಈ ಬಾರಿ ದೀಪಾವಳಿ ಜೊತೆಗೆ ಕನ್ನಡ ರಾಜ್ಯೋತ್ಸವದ ಸಂಭ್ರಮ ಜೊತೆಯಾಗಿದೆ. ಹೊಸ ಸಿನಿಮಾಗಳ ಹೊಚ್ಚ ಹೊಸ ಪೋಸ್ಟರ್‌ಗಳು ರಿವೀಲ್ ಆಗಿ ಸದ್ದು ಮಾಡ್ತಿದೆ. ಅಂತಹ ಹೊಸ ಪೋಸ್ಟರ್‌ಗಳನ್ನು ಝಲಕ್ ಇಲ್ಲಿದೆ ನೋಡಿ.

1. ಎಕ್ಕ

ಯುವರಾಜ್‌ಕುಮಾರ್ ನಟನೆಯ 'ಎಕ್ಕ' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಆಗಿದೆ. ರೋಹಿತ್ ಪದಕಿ ನಿರ್ದೇಶನದ ಚಿತ್ರವನ್ನು ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಸಂಸ್ಥೆಗಳು ಜಂಟಿಯಾಗಿ ನಿರ್ಮಾಣ ಮಾಡುತ್ತಿವೆ. ಮುಂದಿನ ವರ್ಷ ಸಿನಿಮಾ ಬಿಡುಗಡೆ ಆಗಲಿದೆ. ಶಿವಾಜಿ ನಗರದ ರಸೆಲ್ ಮಾರ್ಕೆಟ್‌ನಲ್ಲಿ ಫೋಟೊಶೂಟ್ ಮಾಡಲಾಗಿತ್ತು. ಪೋಸ್ಟರ್ ನೋಡಿದರೆ ಯುವ ರಕ್ತಸಿಕ್ತ ಕಥೆ ಹೇಳಲು ಬರುತ್ತಿರುವುದು ಗೊತ್ತಾಗುತ್ತಿದೆ. ಸಂಜೆ ವೇಳೆಗೆ ಮತ್ತೊಂದು ಪೋಸ್ಟರ್ ಕೂಡ ಹೊರಬಂತು.

2. ಭೈರತಿ ರಣಗಲ್

ಶಿವರಾಜ್‌ಕುಮಾರ್ ನಟನೆಯ 'ಭೈರತಿ ರಣಗಲ್' ಸಿನಿಮಾ ನವೆಂಬರ್ 15ಕ್ಕೆ ತೆರೆಗೆ ಬರಲಿದೆ. ನರ್ತನ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಾರೆ. ದೀಪಾವಳಿ ಹಾಗೂ ರಾಜ್ಯೋತ್ಸವ ಸಂಭ್ರಮದಲ್ಲಿ ಎರಡು ಪೋಸ್ಟರ್‌ಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಜೊತೆಗೆ ಹೊಸ ಹಾಡು ರಿಲೀಸ್ ಆಗಿದೆ.

Check out this Diwali special poster songs from sandalwood

3. ಜೈ ಹನುಮಾನ್

ರಿಷಬ್ ಶೆಟ್ಟಿ ಟಾಲಿವುಡ್ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದಾರೆ. 'ಜೈ ಹನುಮಾನ್' ಚಿತ್ರದಲ್ಲಿ ಹನುಮಂತನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಪ್ರಶಾಂತ್ ವರ್ಮ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದು ಹಬ್ಬದ ಸಂಭ್ರಮದಲ್ಲಿ ಫಸ್ಟ್ ಲುಕ್ ಪೋಸ್ಟರ್, ಥೀಮ್ ಸಾಂಗ್ ಜೊತೆಗೆ ಒಂದು ಮೇಕಿಂಗ್ ಫೋಟೊ ಸಹ ರಿವೀಲ್ ಆಗಿದೆ. 'ಕಾಂತಾರ'-1 ಬಳಿಕ ರಿಷಬ್ ಈ ಚಿತ್ರದಲ್ಲಿ ನಟಿಸಲಿದ್ದು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ.

4. ನವಗ್ರಹ

ದರ್ಶನ್ ನಟನೆಯ 'ನವಗ್ರಹ' ಸಿನಿಮಾ ರೀ-ರಿಲೀಸ್‌ಗೆ ರೆಡಿಯಾಗಿದೆ. ನವೆಂಬರ್ 8ಕ್ಕೆ ಸಿನಿಮಾ ತೆರೆಗೆ ಬರಲಿದೆ. ಹೊಸ ಪೋಸ್ಟರ್ ಸಮೇತ ದೀಪಾವಳಿ, ರಾಜ್ಯೋತ್ಸಚ ಶುಭಾಶಯ ಕೋರಲಾಗಿದೆ. ದಿನಕರ್ ತೂಗುದೀಪ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು.

ಇನ್ನುಳಿದಂತೆ ರಾಜ್‌. ಬಿ ಶೆಟ್ಟಿ ನಟನೆಯ '45' ಚಿತ್ರದ ಟೀಸರ್, ಫೈರ್ ಫ್ಲೇ ಚಿತ್ರದ ಹೊಚ್ಚ ಹೊಸ ಪೋಸ್ಟರ್ ರಿವೀಲ್ ಆಗಿದೆ. 'ಕರಾವಳಿ' ಚಿತ್ರದಲ್ಲಿ ರಮೇಶ್ ಇಂದಿರಾ ಪಾತ್ರ ಪರಿಚಯದ ಪೋಸ್ಟರ್ ಹೊರಬಿದ್ದಿದೆ. ಧನಂಜಯ ಫೋಟೊಶೂಟ್ ಸಮೇತ ತಮ್ಮ ಮದುವೆ ಸುದ್ದಿ ಬಹಿರಂಗ ಪಡಿಸಿದ್ದಾರೆ.

More from Filmibeat

English summary
Diwali 2024 treat; sandalwood releases deepavali special posters and song
Read more about: diwali sandalwood poster
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X