For Quick Alerts
  ALLOW NOTIFICATIONS  
  For Daily Alerts

  ತ್ರಿವರ್ಣಮಯ 'ಕ್ರಾಂತಿ' ಪೋಸ್ಟರ್; ಪುಸ್ತಕ ಹಿಡಿದ 'ಕ್ರಾಂತಿ'ವೀರ!

  |

  ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ 'ಕ್ರಾಂತಿ' ಚಿತ್ರದ ಹೊಸ ಪೋಸ್ಟರ್ ರಿಲೀಸ್ ಆಗಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿ ನಟ ದರ್ಶನ್ ಪೋಸ್ಟರ್ ಶೇರ್ ಮಾಡಿದ್ದಾರೆ. ಅಕ್ಟೋಬರ್ ಕೊನೆ ವಾರದಲ್ಲಿ 'ಕ್ರಾಂತಿ' ಸಿನಿಮಾ 5 ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆ ಆಗಲಿದೆ.

  ನಿನ್ನೆಯೇ 'ಕ್ರಾಂತಿ' ಚಿತ್ರದ ಬಿಗ್‌ ಸರ್ಪ್ರೈಸ್ ಕೊಡೋದಾಗಿ ಚಿತ್ರತಂಡ ಘೋಷಿಸಿತ್ತು. ಹೊಸ ಟೀಸರ್, ಸಾಂಗ್ ಅಥವಾ ಗ್ಲಿಂಪ್ಸ್‌ ರಿಲೀಸ್ ಆಗುತ್ತೆ ಅಂತಲೇ ಅಭಿಮಾನಿಗಳು ಕಾಯುತ್ತಿದ್ದರು. ಆದರೆ ಚಿತ್ರತಂಡ ಹೊಸ ಪೋಸ್ಟರ್ ಮಾತ್ರ ರಿವೀಲ್ ಮಾಡಿದೆ. ಪೋಸ್ಟರ್‌ನಲ್ಲಿ ದರ್ಶನ್ ಪುಸ್ತಕ ಓದುತ್ತಾ ಕೂತಿರುವುದನ್ನು ನೋಡಬಹುದು. 'ಕ್ರಾಂತಿ' ಚಿತ್ರದ ಹಿಂದಿನ ಎಲ್ಲಾ ಪೋಸ್ಟರ್‌ಗಳಿಗಿಂತ ಈ ಪೋಸ್ಟರ್ ಅಭಿಮಾನಿಗಳಿಗೆ ಹೆಚ್ಚು ಇಷ್ಟವಾಗಿದೆ.

  75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಕನ್ನಡ ತಾರೆಯರಿಂದ ವಿಶೇಷ ಹಾಡು!75ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ: ಕನ್ನಡ ತಾರೆಯರಿಂದ ವಿಶೇಷ ಹಾಡು!

  ವಿ. ಹರಿಕೃಷ್ಣ ನಿರ್ದೇಶನದ 'ಕ್ರಾಂತಿ' ಚಿತ್ರವನ್ನು ಶೈಲಜಾ ನಾಗ್ ಹಾಗೂ ಬಿ. ಸುರೇಶ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಸಿನಿಮಾ ಚಿತ್ರೀಕರಣ ಮುಗಿದ್ದು ಪೋಸ್ಟ್ ಪ್ರೊಡಕ್ಷನ್ ವರ್ಕ್‌ ನಡೀತಿದೆ. ದೇಶ ವಿದೇಶದಲ್ಲಿ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣವಾಗಿದೆ. 'ರಾಬರ್ಟ್' ಸೂಪರ್ ಸಕ್ಸಸ್ ನಂತರ ಬರುತ್ತಿರುವ ಬಹುನಿರೀಕ್ಷಿತ ಸಿನಿಮಾ 'ಕ್ರಾಂತಿ'. ಹಾಗಾಗಿ ಅಭಿಮಾನಿಗಳು ಬಹಳ ಕಾತರದಿಂದ ಕಾಯುತ್ತಿದ್ದಾರೆ.

  ಕೇಸರಿ ಬಿಳಿ ಹಸಿರು ಬಣ್ಣದ ಪೋಸ್ಟರ್

  ಈವರೆಗೆ ಬಿಡುಗಡೆಯಾಗಿದ್ದ 'ಕ್ರಾಂತಿ' ಸಿನಿಮಾ ಪೋಸ್ಟರ್‌ಗಳೆಲ್ಲಾ ಸಿನಿಮಾ ಥೀಮ್‌ಗೆ ತಕ್ಕಂತೆ ಕೆಂಪಾಗಿ ಇರುತ್ತಿತ್ತು. ಆದರೆ ಸ್ವಾತಂತ್ರ್ಯ ದಿನಾಚರಣೆಯ ವಿಶೇಷವಾಗಿ ರಿಲೀಸ್ ಆಗಿರುವ ಪೋಸ್ಟರ್ ತ್ರಿವರ್ಣಮಯವಾಗಿದೆ. ಪೋಸ್ಟರ್‌ನಲ್ಲಿ ಬಿಳಿ ಬಣ್ಣದ ಕುರ್ತಾ ತೊಟ್ಟು ದರ್ಶನ್ Evolution of Indian Education ಪುಸ್ತಕ ಓದುತ್ತಿದ್ದಾರೆ. ಅಕ್ಷರ 'ಕ್ರಾಂತಿ' ಅಂದರೆ ಕನ್ನಡ ಸರ್ಕಾರಿ ಶಾಲೆಗಳ ಕುರಿತು ಈ ಸಿನಿಮಾ ಮೂಡಿ ಬರುತ್ತಿದೆ. ಭಾರತದ ಶಿಕ್ಷಣ ವಿಕಾಸದ ಕುರಿತು ಜಗದೀಶ್ ಲಾಲ್ ಅಜಾದ್ ಬರೆದಿರುವ ಈ ಪುಸ್ತಕ ಬಹಳ ಜನಪ್ರಿಯ.

   'ಕ್ರಾಂತಿ' ಪ್ರಚಾರ ಜೋರು

  'ಕ್ರಾಂತಿ' ಪ್ರಚಾರ ಜೋರು

  ಚಿತ್ರತಂಡ 'ಕ್ರಾಂತಿ' ಸಿನಿಮಾ ಪ್ರಚಾರ ಇನ್ನು ಶುರು ಮಾಡಿಲ್ಲ. ಆದರೆ ಕೆಲ ದಿನಗಳಿಂದ ಅಭಿಮಾನಿಗಳೇ ಬಹಳ ದೊಡ್ಡಮಟ್ಟದಲ್ಲಿ ರಾಜ್ಯಾದ್ಯಂತ ಪೋಸ್ಟರ್‌ಗಳನ್ನು ಹಿಡಿದು ಸಿನಿಮಾ ಪ್ರಚಾರ ಮಾಡುತ್ತಿದ್ದಾರೆ. ಅಭಿಮಾನಿಗಳ ಈ ಪ್ರೀತಿಗೆ ಚಾಲೆಂಜಿಂಗ್ ಸ್ಟಾರ್‌ ದರ್ಶನ್‌ ಶರಣಾಗಿದ್ದಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಜೋರಾಗಿ 'ಕ್ರಾಂತಿ' ಚಿತ್ರವನ್ನು ಜನರ ಮುಂದೆ ದಾಸನ ಹುಡುಗರು ಕೊಂಡೊಯ್ಯಲಿದ್ದಾರೆ.

   ಕುತೂಹಲ ಕೆರಳಿಸಿರುವ 'ಕ್ರಾಂತಿ'

  ಕುತೂಹಲ ಕೆರಳಿಸಿರುವ 'ಕ್ರಾಂತಿ'

  ಕನ್ನಡ ಸರ್ಕಾರಿ ಶಾಲೆಗಳ ಉಳಿವಿನ ಬಗ್ಗೆ ಈಗಾಗಲೇ ಒಂದಷ್ಟು ಸಿನಿಮಾಗಳು ಬಂದೋಗಿದೆ. 'ಕ್ರಾಂತಿ' ಚಿತ್ರದಲ್ಲೂ ಅದೇ ಕಥೆಯನ್ನು ಹೇಳ್ತಿದ್ದು, ಕಥೆ ಏನಿರಬಹುದು ಅನ್ನುವ ಕುತೂಹಲ ಅಭಿಮಾನಿಗಳಲ್ಲಿ ಇದೆ. 'ಯಜಮಾನ' ಚಿತ್ರದಲ್ಲಿ ಲೋಕಲ್ ಪ್ರಾಡಕ್ಟ್ ಹಾಗೂ ಅದರ ಮಾರುಕಟ್ಟೆಯ ಬಗ್ಗೆ ಹೇಳಲಾಗಿತ್ತು. ಆ ಕಾಸ್ಟೆಪ್ಟ್ ನಿಜಕ್ಕೂ ಚೆನ್ನಾಗಿತ್ತು. ಅಂತದ್ದೇ ಗಟ್ಟಿ ಕಾನ್ಸೆಪ್ಟ್ ಈ ಚಿತ್ರದಲ್ಲೂ ಇರಲಿದೆ ಎನ್ನಲಾಗಿದೆ. ದರ್ಶನ್ ಜೋಡಿಯಾಗಿ ರಚಿತಾ ರಾಮ್ ನಟಿಸಿದ್ದರೆ ಕ್ರೇಜಿಸ್ಟಾರ್ ವಿ. ರವಿಚಂದ್ರನ್, ಸುಮಲತಾ ಅಂಬರೀಶ್, ಮುಖ್ಯಮಂತ್ರಿ ಚಂದ್ರು ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

   5 ಭಾಷೆಗಳಲ್ಲಿ ಸದ್ದು ಮಾಡುತ್ತಾ 'ಕ್ರಾಂತಿ'?

  5 ಭಾಷೆಗಳಲ್ಲಿ ಸದ್ದು ಮಾಡುತ್ತಾ 'ಕ್ರಾಂತಿ'?

  ಪ್ಯಾನ್ ಇಂಡಿಯಾ ಮಟ್ಟದಲ್ಲಿ 'ಕ್ರಾಂತಿ' ಸಿನಿಮಾ ನಿರ್ಮಾಣವಾಗುತ್ತಿದೆ. ಆದರೆ ದರ್ಶನ್‌ ಬೇರೆ ಭಾಷೆಗೆ ನಾನು ಸಿನಿಮಾ ಡಬ್ಬಿಂಗ್ ಮಾತ್ರ ಮಾಡಿಕೊಡ್ತೀನಿ, ಬೇರೆ ರಾಜ್ಯಗಳಿಗೆ ಹೋಗಿ ಯಾರಿಗೂ ಕಾಕಾ ಹೊಡೆಯಲ್ಲ, ಕರ್ನಾಟಕ ನನ್ನ ಟೆರಿಟರಿ ಎಂದು ಹೇಳಿದ್ದಾರೆ. ಹಾಗಾಗಿ ಹೊರ ರಾಜ್ಯಗಳಲ್ಲಿ ಸಿನಿಮಾ ಪ್ರಚಾರ, ರಿಲೀಸ್ ಹೇಗಿರುತ್ತೆ ಅನ್ನುವುದನ್ನು ಕಾದು ನೋಡಬೇಕಿದೆ.

  English summary
  Check out this Independence Day special poster of Kranti. Know More.
  Monday, August 15, 2022, 10:46
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X