ಹಾಲಿವುಡ್ ಚಿತ್ರಕ್ಕೆ ಡೈರೆಕ್ಟರ್ ಆದ ಕರಾವಳಿ ಮೂಲದ ಫೈಟ್ ಮಾಸ್ಟರ್
Recommended Video

ಕರ್ನಾಟಕದ ಪ್ರತಿಭೆಗಳು ತಮಿಳು, ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಯಶಸ್ಸು ಕಂಡಿರುವ ಸಾಕಷ್ಟು ಉದಾಹರಣೆಗಳಿವೆ. ಅದರಲ್ಲೂ ಕರಾವಳಿ ಮೂಲದ ಕಲಾವಿದರಂತೂ ಬಾಲಿವುಡ್ ನಲ್ಲಿ ಹೆಚ್ಚಾಗಿ ಗುರುತಿಸಿಕೊಂಡಿದ್ದಾರೆ.
ಶಿಲ್ಪಾಶೆಟ್ಟಿ, ಅನುಷ್ಕಾ ಶೆಟ್ಟಿ, ಐಶ್ವರ್ಯ ರೈ, ಸುನೀಲ್ ಶೆಟ್ಟಿ ಹೀಗೆ ಹೇಳ್ತಾ ಹೋದ್ರೆ ಪಟ್ಟಿ ಬೆಳೆಯುತ್ತೆ. ಈಗ ಕರಾವಳಿಯ ಮೂಲದ ಮತ್ತೊಬ್ಬ ಪ್ರತಿಭೆ ಹಾಲಿವುಡ್ ಚಿತ್ರವನ್ನ ನಿರ್ದೇಶನ ಮಾಡ್ತಿದ್ದಾರೆ.
ಹೌದು, ಕರಾವಳಿ ಮೂಲದ ಬಾಲಿವುಡ್ ನ ಫೈಟ್ ಮಾಸ್ಟರ್ ಯಜ್ಞೇಶ್ ಶೆಟ್ಟಿ ಹಾಲಿವುಡ್ ಸಿನಿಮಾ ನಿರ್ದೇಶಿಸಲು ಹೊರಟಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಮಾಧ್ಯಮ ಗೋಷ್ಠಿ ನಡೆಸಿದ ಸಾಹಸ ನಿರ್ದೇಶಕ ಚೀತಾ ಯಜ್ಞೇಶ್ ಶೆಟ್ಟಿ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಬಹಿರಂಗಪಡಿಸಿದರು. ಮುಂದೆ ಓದಿ....

ಹಾಲಿವುಡ್ ಚಿತ್ರಕ್ಕೆ ಕರಾವಳಿ ಫೈಟ್ ಮಾಸ್ಟರ್ ನಿರ್ದೇಶನ
'ಹಿ ಈಸ್ ಬ್ಯಾಕ್' ಎಂಬ ಹಾಲಿವುಡ್ ಚಿತ್ರದ ಮುಹೂರ್ತ ಕಳೆದ ಸೆಪ್ಟೆಂಬರ್ 19 ರಂದು ದುಬೈನ ಬುರ್ಜ್ ಖಲೀಫಾದಲ್ಲಿ ನಡೆದಿತ್ತು. ಈ ಚಿತ್ರಕ್ಕೆ ಕರಾವಳಿ ಮೂಲದ ಬಾಲಿವುಡ್ ಫೈಟ್ ಮಾಸ್ಟರ್ ಚೀತಾ ಯಜ್ಞೇಶ್ ಶೆಟ್ಟಿ ಆಕ್ಷನ್ ಕಟ್ ಹೇಳ್ತಿದ್ದಾರೆ.

ಬ್ರೂಸ್ ಲೀ ಕಥೆ ಆಧರಿತ ಸಿನಿಮಾ
ಮಾರ್ಷಲ್ ಆರ್ಟ್ ಕಿಂಗ್ ಎಂದೇ ಗುರುತಿಸಿಕೊಂಡಿದ್ದ ಬ್ರೂಸ್ ಲೀ ಗೌರವಾರ್ಥ ಈ ಹಾಲಿವುಡ್ ಸಿನಿಮಾ ತಯಾರಾಗುತ್ತಿದೆ ಎಂದು ನಿರ್ದೇಶಕ ಚೀತಾ ಯಜ್ಞೇಶ್ ಶೆಟ್ಟಿ ತಿಳಿಸಿದ್ದಾರೆ. ಈ ಸಿನಿಮಾಗೆ 2019 ರಲ್ಲಿ ಶೂಟಿಂಗ್ ಆರಂಭವಾಗಲಿದ್ದು ಅದೇ ವರ್ಷ ವಿಶ್ವಾದ್ಯಂತ ಬಿಡುಗಡೆಯಾಗಲಿದೆಯಂತೆ.

ನಾಯಕ-ನಾಯಕಿ ಯಾರು.?
ಅಪ್ಘಾನಿಸ್ಥಾನದ ಅಬ್ ಲೀ ನಾಯಕನಾಗಿ ನಟಿಸುತ್ತಿದ್ದು ರಷ್ಯಾದ ಯುವತಿ ನಾಯಕಿಯಾಗಿ ನಟಿಸಲಿದ್ದಾರೆ. ಸುಮಾರು 80-100 ಕೋಟಿ ರೂ. ವೆಚ್ಚದಲ್ಲಿ ಈ ಸಿನಿಮಾ ತಯಾರಾಗುತ್ತಿದ್ದು, ಸುರೇಶ್ ಶರ್ಮ, ಸುರೇಶ್ ಬಾಬು ಮಲ್ಗೆ ಮತ್ತು ಹಾಲಿವುಡ್ ಕಂಪನಿಯೊಂದು ನಿರ್ಮಾಣ ಮಾಡುತ್ತಿದೆ. ಅಮರ್ ಜಿತ್ ಶೆಟ್ಟಿ ಕೋ ಪ್ರೊಡ್ಯೂಸರ್ ಆಗಿ ಕೆಲಸ ನಿರ್ವಹಿಸಲಿದ್ದಾರೆ.

ಬಾಲಿವುಡ್ ಖ್ಯಾತ ಫೈಟ್ ಮಾಸ್ಟರ್
ಯಜ್ಞೇಶ್ ಬಾಲಿವುಡ್ ಬಹುತೇಕ ಮೇರು ನಟರಿಗೆ ಫೈಟ್ ಮಾಸ್ಟರ್ ಆಗಿ ಕೆಲಸ ನಿರ್ವಹಿಸಿದವರು. ಬಾಲಿವುಡ್ ಮಾತ್ರವಲ್ಲ ಹಾಲಿವುಡ್ ಗೂ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಲಿವುಡ್ ನಲ್ಲಿ ಪ್ರಖ್ಯಾತವಾದ 'ಲೈಫ್ ಆಪ್ ದಿ ಪೈ' ಸಿನಿಮಾದಲ್ಲಿ ಯಜ್ಞೇಶ್ ತರಬೇತಿ ನೀಡಿದ್ದ ಅವರ ಶಿಷ್ಯ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಇದೀಗ ತಾವೇ ಸ್ವತಃ ಹಾಲಿವುಡ್ ಸಿನಿಮಾ ನಿರ್ದೇಶಿಸುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷ್ಯ.


Click it and Unblock the Notifications











