For Quick Alerts
  ALLOW NOTIFICATIONS  
  For Daily Alerts

  'ಯೋಧ ಗುರು' ಕುಟುಂಬಕ್ಕೆ 'ಕೆಮಿಸ್ಟ್ರಿ ಕರಿಯಪ್ಪ' ಚಿತ್ರತಂಡ ನೆರವು

  |

  ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಆ ಯೋಧರ ಕುಟುಂಬಗಳಿಗೆ ಸರ್ಕಾರ, ಸಂಘ, ಸಂಸ್ಥೆ ಹಾಗೂ ಸಾರ್ವಜನಿಕರು ಹಲವು ರೀತಿಯಲ್ಲಿ ಸಹಾಯ ಹಸ್ತ ಚಾಚಿದ್ದಾರೆ. ರಿಷಬ್ ಶೆಟ್ಟಿ ಮತ್ತು ಹರಿಪ್ರಿಯಾ ಅಭಿನಯದ ಬೆಲ್ ಬಾಟಮ್ ಚಿತ್ರತಂಡ ಹುತಾತ್ಮ ಯೋಧ ಗುರು ಕುಟುಂಬಕ್ಕೆ 75 ಸಾವಿರ ಚೆಕ್ ನೀಡಿ ಧನಸಹಾಯ ಮಾಡಿದ್ದಾರೆ.

  ಇದೀಗ, ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರತಂಡವೂ ಗುರು ಕುಟುಂಬಕ್ಕೆ ನೆರವು ನೀಡಲು ಮುಂದಾಗಿದೆ. ಈ ವಾರವಷ್ಟೇ ಬಿಡುಗಡೆಯಾಗಿರುವ ಕೆಮಿಸ್ಟ್ರಿ ಆಪ್ ಕರಿಯಪ್ಪ ಚಿತ್ರತಂಡ ಭಾನುವಾರದ ಒಟ್ಟು ಕಲೆಕ್ಷನ್ ಹಣವನ್ನ ಗುರು ಕುಟುಂಬಕ್ಕೆ ನೀಡಲಿದೆಯಂತೆ.

  ಎಂ ಸಿರಿ ಪ್ರೊಡಕ್ಷನ್ ನಲ್ಲಿ ತಯಾರಾಗಿರುವ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರ ಫೆಬ್ರವರಿ 15 ರಂದು ಬಿಡುಗಡೆಯಾಗಿತ್ತು. ತಬಲ ನಾಣಿ, ಚಂದನ್ ಆಚಾರ್, ಸಂಜನಾ ಆನಂದ್, ಅಪೂರ್ವ ಸೇರಿದಂತೆ ಹಲವರು ಅಭಿನಯಿಸಿದ್ದರು. ರಾಜ್ಯಾದ್ಯಂತ ಉತ್ತಮ ಪ್ರದರ್ಶನ ಕಾಣ್ತಿರುವ ಈ ಚಿತ್ರ ಈಗ ಹುತಾತ್ಮ ಯೋಧರಿಗೆ ಸಹಾಯವಾಗಿದೆ.

  ವಿಶೇಷ ಅಂದ್ರೆ, ಈ ಹಿಂದೆ ಎಂ ಸಿರಿ ಪ್ರೊಡಕ್ಷನ್ ನಲ್ಲಿ ಮೂಡಿಬಂದಿದ್ದ ಸಂಯುಕ್ತ 2 ಚಿತ್ರದ ಮೊದಲ ದಿನದ ಕಲೆಕ್ಷನ್ ಹಣವನ್ನ ಆರ್ಮಿ ವೆಲ್ಫೆರ್ ಫಂಡ್ ಗೆ ನೀಡಲಾಗಿತ್ತು.

  English summary
  Chemistry of kariyappa movie team have decided to help soldier gurus family.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X