'ಕೆಮಿಸ್ಟ್ರಿ' ಕರಿಯಪ್ಪನ ಆಟ-ಪಾಠ ನೀವು ನೋಡದಿದ್ರೆ ವೇಸ್ಟಪ್ಪಾ.!

'ಕಿರಿಕ್ ಪಾರ್ಟಿ' ಸಿನಿಮಾದಲ್ಲಿ ಕಾಣಿಸಿಕೊಂಡಿದ್ದವರೆಲ್ಲಾ ಒಂಥರಾ ಬ್ಯುಸಿ ಆಗೋದ್ರು. ಈಗ ಚಂದನ್ ಆಚಾರ್ ಸರದಿ. 'ಕೆಮಿಷ್ಟ್ರಿ ಆಫ್ ಕರಿಯಪ್ಪ' ಚಿತ್ರದ ಮೂಲಕ ಚಂದನ್ ಕೂಡ ಭವಿಷ್ಯದ ಸ್ಟಾರ್ ಆಗೋ ಸೂಚನೆ ಸಿಕ್ಕಿದೆ. ಅದಕ್ಕೆ ಕಾರಣ ಚಿತ್ರದ ಟ್ರೈಲರ್.

ಹೌದು, 'ಕೆಮಿಷ್ಟ್ರಿ ಆಫ್ ಕರಿಯಪ್ಪ' ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಸಿಕ್ಕಾಪಟ್ಟೆ ಮಜಾ ಕೊಡ್ತಿದೆ. ಬರಿ ಚಂದನ್ ಆಚಾರ್ ಮಾತ್ರವಲ್ಲ, ಈ ಸಿನಿಮಾದಲ್ಲಿ ಕಾಣಿಸಿಕೊಂಡಿರುವ ಪ್ರತಿಯೊಂದು ಕ್ಯಾರೆಕ್ಟರ್ ಕೂಡ ವಾಹ್ ಎನ್ನುವಂತಿದೆ.

ಚಂದನ್ ಗೆ ಸಂಪೂರ್ಣವಾಗಿ ಸಾಥ್ ಕೊಟ್ಟಿರೋದು ತಬಲ ನಾಣಿ. ಟ್ರೈಲರ್ ನಲ್ಲಿ ಚಂದನ್ ಮತ್ತು ತಬಲ ನಾಣಿ ಜೋಡಿಯ ಮೋಡಿ ನೋಡಿ, ''ಅಬ್ಬಾ ಇಷ್ಟೊಂದು ಮಜಾ, ಸಿನಿಮಾ ಪೂರ್ತಿ ಇದ್ದು ಬಿಟ್ಟರೇ ಸೂಪರ್'' ಎನ್ನುತ್ತಿದ್ದಾರೆ ನೋಡಿದವರು.

Chemistry of kariyappa trailer released

ಅಂದ್ಹಾಗೆ, 'ಕೆಮಿಷ್ಟ್ರಿ ಆಫ್ ಕರಿಯಪ್ಪ' ಪಕ್ಕಾ ಫ್ಯಾಮಿಲಿ ಡ್ರಾಮಾ. ಪ್ರತಿಯೊಂದು ಮನೆಯಲ್ಲೂ ನಡೆಯುವ ಸಾಮಾನ್ಯವಾದ ಕಥೆ. ಮಧ್ಯಮ ವರ್ಗದ ಅಪ್ಪ-ಅಪ್ಪ-ಮಗ ಮತ್ತು ಸೊಸೆಯ ಸುತ್ತ ನಡೆಯುವ ಕಥೆಯಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳು, ಸೀರಿಯಸ್ ಆದ ಸಂದೇಶಗಳು ಕಿಕ್ ಕೊಡ್ತಿದೆ.

ಈಗಾಗಲೇ ಕೆಮಿಸ್ಟ್ರಿ ಆಫ್ ಕರಿಯಪ್ಪ ಚಿತ್ರದ ಹಾಡೊಂದು ರಿಲೀಸ್ ಆಗಿ ಸಖತ್ ಕ್ವಾಟ್ಲೆ ಕೊಡ್ತಿದೆ. ನವೀನ್ ಸಜ್ಜು ಹಾಡಿರೋ ಈ ಹಾಡು ಸಿನಿಮಾ ಹೇಗಿರಲಿದೆ ಎಂಬುದನ್ನ ಕೂಗಿ ಹೇಳ್ತಿದೆ. ಈ ಹಾಡಿಗೆ ಈಗ ಟ್ರೈಲರ್ ಸಾಥ್ ನೀಡಿ ಫುಲ್ ಧಮಾಕ ಆಗಿದೆ. ಟ್ರೈಲರ್ ಸದ್ಯ ಯೂಟ್ಯುಬ್ ಟ್ರೆಂಡಿಂಗ್ ನಲ್ಲಿ ಏಳನೇ ಸ್ಥಾನದಲ್ಲಿದೆ.

Chemistry of kariyappa trailer released

ಇನ್ನುಳಿದಂತೆ ಚಂದನ್ ಆಚಾರ್ ಮತ್ತು ತಬಲ ನಾಣಿ ಜೊತೆ ಸಂಜನಾ ಆನಂದ್, ಮೈಕೋ ನಾಗರಾಜ್, ರಾಕ್ ಲೈನ್ ಸುಧಾಕರ್ ಅಭಿನಯಿಸಿದ್ದು, ಈ ಚಿತ್ರವನ್ನ ಕುಮಾರ್ ನಿರ್ದೇಶಿಸಿದ್ದಾರೆ. ಅರವ್ ರಿಶಿಕ್ ಸಂಗೀತ ಸಂಯೋಜಿಸಿದ್ದು, ಎಂ.ಸಿರಿ ಪ್ರೊಡಕ್ಷನ್ಸ್ ನಡಿ ಡಾ. ಮಂಜುನಾಥ್ ಡಿ.ಎಸ್ ಬಂಡವಾಳ ಹೂಡಿದ್ದಾರೆ.

More from Filmibeat

English summary
Kirik party fame chandan achar and tabala Nani starring Chemistry of kariyappa trailer has released.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X