»   » ‘ಬಹಳ ಚೆನ್ನಾಗಿದೆ ’ ಸಿದ್ಧವಾಗುತ್ತಿದೆ

‘ಬಹಳ ಚೆನ್ನಾಗಿದೆ ’ ಸಿದ್ಧವಾಗುತ್ತಿದೆ

Posted By: Super
Subscribe to Filmibeat Kannada

ಪ್ರಚಂಡ ಪುಟಾಣಿಗಳು ಚಿತ್ರ ನೋಡಿದ ನೆನಪಿದೆಯೇ? ಅದರಲ್ಲಿ ಜುಟ್ಟು ಬಿಟ್ಟು, ಕನ್ನಡಕ ಹಾಕಿದ ಹುಡುಗ ಮಾತು ಮಾತಿಗೂ ಚೆನ್ನಾಗಿದೆ, ಚೆನ್ನಾಗಿದೆ ಎಂದದ್ದು ನಿಮಗೂ ನೆನಪಿರಬಹುದು. ಈಗ 2001ನೇ ಇಸವಿ ಎಲ್ಲಿರಗೂ ಚೆನ್ನಾಗಿರಲಿ ಎಂಬ ಹಾರೈಕೆಯಾಂದಿಗೆ 'ಬಹಳ ಚೆನ್ನಾಗಿದೆ" ಎಂಬ ಕನ್ನಡ ಚಿತ್ರ ಸಿದ್ದವಾಗುತ್ತಿದೆ.

ಚಿತ್ರಜ್ಯೋತಿ ಸಂಸ್ಥೆಯ ರಾಶಿ ಸಹೋದರರು ಹಾಗೂ ಚಂದೂಲಾಲ್‌ ಜೈನ್‌ ಒಟ್ಟಾಗಿ ನಿರ್ಮಿಸುತ್ತಿರುವ ಈ ಚಿತ್ರದ ದ್ವಿತೀಯ ಹಂತದ ಚಿತ್ರೀಕರಣವೂ ಆರಂಭವಾಗಿದೆ. ಎಂ.ಎಸ್‌. ರಾಜಶೇಖರ್‌ ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ಪ್ರಸಾದ್‌ ಬಾಬು ಛಾಯಾಗ್ರಹಣ, ಎಸ್‌. ಮೋಹನ್‌ ಸಂಭಾಷಣೆ, ಕೋಟಿ ಸಂಗೀತ, ದೊಡ್ಡರಂಗೇಗೌಡರ ಸಾಹಿತ್ಯ ಇದೆ.

ಎಸ್‌. ಮಂಜುನಾಥರ ಸಹನಿರ್ದೇಶನದ ಈ ಚಿತ್ರದ ಹೀರೋ ಯಾರು ಗೊತ್ತೆ? ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌. ಮುಂಬೈಯ ಬೆಡಗಿ ಜಯಶೀಲ ನಾಯಕಿ. ತಾರಾಗಣದಲ್ಲಿ ರಾಶಿ ಜೋಡಿಯ ಶಿವರಾಂ, ರಮೇಶ್‌ ಭಟ್‌, ಅಶೋಕ್‌ ಬಾದರದಿನ್ನಿ, ಡಿಂಗ್ರಿ ನಾಗರಾಜ್‌, ಆಶಾ, ಪದ್ಮಾ ವಾಸಂತಿ ಇದ್ದಾರೆ.

ಶಿವರಾಂ, ಅಶೋಕ್‌ ಬಾದರದಿನ್ನಿ, ಡಿಂಗ್ರಿ ಇದ್ದಾರೆಂದ ಮೇಲೆ ಒಂದಿಷ್ಟು ಹಾಸ್ಯವೂ ಇದ್ದೇ ಇರುತ್ತದೆ. ಒಟ್ಟಿನಲ್ಲಿ 'ಬಹಳ ಚೆನ್ನಾಗಿದೆ" ಜನರಿಂದ ಚೆನ್ನಾಗಿದೆ ಎನ್ನಿಸಿಕೊಳ್ಳುವಂತೆ ನಿರ್ಮಾಣವಾಗಲೀ ಎಂದಷ್ಟೇ ಹಾರೈಸೋಣ.

English summary
kannada cinema, kannada hero, shivaraja kumar, sandlewood, karnataka,

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada