twitter
    For Quick Alerts
    ALLOW NOTIFICATIONS  
    For Daily Alerts

    ಮೇಕೆದಾಟು ಪರ, ಅಣೆಕಟ್ಟೆಗೆ ವಿರುದ್ಧ: ಚೇತನ್ ಅಹಿಂಸ

    |

    ಮೇಕೆದಾಟು ಯೋಜನೆ ರಾಜ್ಯದಲ್ಲಿ ಪ್ರಸ್ತುತ ಚರ್ಚೆಯ ವಿಷಯ. ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ರಾಜ್ಯ ಕಾಂಗ್ರೆಸ್ ಪಾದಯಾತ್ರೆ ನಡೆಸಿತು. ಆದರೆ ಕೊರೊನಾ ಹೆಚ್ಚಳದ ಕಾರಣದಿಂದಾಗಿ ಪಾದಯಾತ್ರೆ ಮೊಟಕುಗೊಂಡಿತು.

    ಕಾಂಗ್ರೆಸ್‌ ನವರು ಮೇಕೆದಾಟು ಪಾದಯಾತ್ರೆ ಆರಂಭವಾದಾಗ ಪ್ರತಿಕ್ರಿಯೆಗಳನ್ನು ನೀಡಿದ್ದ ಬಿಜೆಪಿ ಮುಖಂಡರು, ಯೋಜನೆ ಅನುಷ್ಠಾನಕ್ಕೆ ಬದ್ಧ ಎಂದಿದ್ದಾರೆ. ಅಲ್ಲದೆ ಇಷ್ಟು ವರ್ಷ ಕಾಂಗ್ರೆಸ್ ಏಕೆ ಯೋಜನೆಯನ್ನು ಅನು‍ಷ್ಠಾನ ಗೊಳಿಸಿಲ್ಲವೆಂದು ಟೀಕಿಸಿದ್ದಾರೆ.

    ಇದರ ನಡುವೆ ಪರಿಸರ ಪ್ರೇಮಿಗಳು ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ನಟ ಚೇತನ್ ಅಹಿಂಸ ಸೇರಿದಂತೆ ಹಲವು ಪರಿಸರವಾದಿಗಳು ಇಂದು ಸಭೆ ಸೇರಿ ಸಂವಾದ ನಡೆಸಿ, ಮೇಕೆದಾಟು ಯೋಜನೆ ಬಗ್ಗೆ ತಮ್ಮ ಆಕ್ಷೇಪಣೆ ದಾಖಲಿಸಿದ್ದಾರೆ.

    ಸಭೆಯಲ್ಲಿ ಮಾತನಾಡಿದ ನಟ ಚೇತನ್ ಅಹಿಂಸ, ''ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಯ ವಿಷಯದಲ್ಲಿ ಅವಕಾಶವಾದಿ ರಾಜಕೀಯ ಮಾಡುತ್ತಿವೆ. ಯೋಜನೆಗೆ ಪರಿಸರ ಇಲಾಖೆಯ ಅನುಮತಿ ಇನ್ನೂ ದೊರೆತಿಲ್ಲ. ಆದರೂ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ರಾಜಕೀಯ ಪಕ್ಷಗಳು ಮುಂದಾಗಿವೆ. ಅವರಿಗೆ ಜನಪರ ಕಾಳಜಿ ಇಲ್ಲ'' ಎಂದಿದ್ದಾರೆ ಚೇತನ್ ಅಹಿಂಸ.

    Chetan Ahimsa Oppose Mekedatu Project, He Said It Will Affect Our Environment

    ''ಮೇಕೆದಾಟು ಯೋಜನೆ ಜನರಿಗೆ ಬೇಕಿಲ್ಲ, ಅಲ್ಲಿನ ಸ್ಥಳೀಯರಿಗೆ ಬೇಕಿಲ್ಲ, ಪರಿಸರಕ್ಕೆ ಬೇಕಿಲ್ಲ, ಅರಣ್ಯವಾಸಿಗಳಿಗೆ ಬೇಕಿಲ್ಲ. ಮೇಕೆದಾಟು ಯೋಜನೆ ಬೇಕಿರುವುದು ಕೇವಲ ಡ್ಯಾಂ ಕಟ್ಟು ಕಂಟ್ರಾಕ್ಟರ್‌ಗಳಿಗೆ ಮತ್ತು ರಾಜಕಾರಣಿಗಳಿಗೆ ಅಷ್ಟೆ. ಮೇಕೆದಾಟು ಯೋಜನೆಗೆ ಇಡೀಯ ಕರ್ನಾಟಕದ ಜನರ ಒಪ್ಪಿಗೆ ಎಂಬ ರೀತಿಯಲ್ಲಿ ಬಿಂಬಿಸಲಾಗುತ್ತಿದೆ. ಆದರೆ ಕರ್ನಾಟಕದ ಹಲವು ಸಂಘಟನೆಗಳು ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿವೆ'' ಎಂದರು ಚೇತನ್.

    ''ಕೋವಿಡ್ ಇರುವ ಕಾರಣ ನಾವು ಜನ ಜಾಗೃತಿ ಸಮಾವೇಶ ಮಾಡಲು ಸಾಧ್ಯವಾಗಲಿಲ್ಲ. ಬದಲಿಗೆ ನಾವುಗಳೇ ಒಟ್ಟು ಸೇರಿ ಮೇಕೆದಾಟು ಅಣೆಕಟ್ಟೆಯಿಂದ ಪರಿಸರಕ್ಕೆ ಆಗಬಹುದಾದ ಹಾನಿ, ಅಣೆಕಟ್ಟೆ ನಿರ್ಮಾಣದ ಬದಲು ಪರ್ಯಾಯ ವ್ಯವಸ್ಥೆ ಏನು ಇತರ ವಿಷಯಗಳನ್ನು ಚರ್ಚೆ ಮಾಡಿದೆವು. ಈಗ ಪತ್ರಿಗೋಷ್ಠಿ ನಡೆಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಬೀದಿಗಿಳಿದು ಪ್ರತಿಭಟನೆ ಮಾಡಲಿದ್ದೇವೆ. ಮೇಕೆದಾಟು ಅಣೆಕಟ್ಟು ಯೋಜನೆಯಿಂದ ತೊಂದರೆಗೀಡಾಗುವ ಹಳ್ಳಿಗಳಿಗೆ ಹೋಗಿ ಅಲ್ಲಿನ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ'' ಎಂದರು ಚೇತನ್. ಸಭೆಯಲ್ಲಿ ಪರಿಸರ ಹೋರಾಟಗಾರ್ತಿ ಮೇಧಾ ಪಾಟ್ಕರ್, ಹಿರಿಯ ಪತ್ರಕರ್ತ, ಪರಿಸರ ಪ್ರೇಮಿ ನಾಗೇಶ್ ಹೆಗ್ಡೆ ಇನ್ನು ಹಲವರು ಭಾಗವಹಿಸಿದ್ದರು.

    ಮೇಕೆದಾಟು ಯೋಜನೆಗೆ ಒತ್ತಾಯಿಸಿ ಕಾಂಗ್ರೆಸ್ ನೇತೃತ್ವದಲ್ಲಿ ಹಲವು ಸಂಘಟನೆಗಳು ಪಾದಯಾತ್ರೆ ಮಾಡುವಾಗಲೇ ಚೇತನ್ ಅಹಿಂಸ ಮೇಕೆದಾಟುಗೆ ಹೋಗಿ ಅಲ್ಲಿಂದ ವಿಡಿಯೋ ಸಂದೇಶವೊಂದನ್ನು ಪ್ರಕಟಿಸಿದ್ದರು. ''ಇಂದು ಮೇಕೆದಾಟವಿಗೆ ಹೋಗುವ ಮಾರ್ಗದಲ್ಲಿ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ 9,000 ಕೋಟಿ ರೂಪಾಯಿಯ ವಿನಾಶಕಾರಿ ಅಣೆಕಟ್ಟು ಯೋಜನೆಯ ಪರವಾಗಿ ನಡೆಯುತ್ತಿದ್ದ ಪಾದಯಾತ್ರೆಯನ್ನು ಕಂಡೆ. ಹಲವಾರು ಜನರು ಬಿಸಿಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದರೆ, ಕಾಂಗ್ರೆಸ್ ಪಕ್ಷದ ರಾಜಕಾರಣಿಗಳೆಲ್ಲಾ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುತ್ತಿದ್ದರು. ಜನರಿಗಷ್ಟೇ ಇದು 'ಪಾದ - ಯಾತ್ರೆ', ನೇತಾರಿಗೆ ಇದು 'ಕಾರ್-ಯಾತ್ರೆ'' ಎಂದು ಟೀಕಿಸಿದ್ದರು.

    English summary
    Actor Chetan Ahimsa oppose Mekedatu project, He said project will affect environment. He says we will protest against the project.
    Saturday, January 15, 2022, 18:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X