For Quick Alerts
  ALLOW NOTIFICATIONS  
  For Daily Alerts

  ಸಿಂಹರಾಶಿ ಚೇತನ್ ಚಂದ್ರರಿಗೆ ರೂಪಿಕಾ ಜೋಡಿ

  |

  ಸಿಂಹರಾಶಿಯ ಚೇತನ್ ಚಂದ್ರರಿಗೆ ಜೋಡಿ ಸಿಕ್ಕಿದೆ. ಅಂದರೆ ಸಿಂಹರಾಶಿ ಚಿತ್ರಕ್ಕೆ ನಾಯಕಿ ಆಯ್ಕೆಯಾಗಿದ್ದಾರೆ. ಅವರು ಅಚ್ಚಕನ್ನಡದ ಬೆಡಗಿ, 'ಚೆಲುವಿನ ಚಿಲಿಪಿಲಿ' ಖ್ಯಾತಿಯ ರೂಪಿಕಾ. ಈ ಚಿತ್ರದ ಅಗತ್ಯಕ್ಕೆ ತಕ್ಕಂತೆ ನಾಯಕ ಚೇತನ್ ಚಂದ್ರ ಸಖತ್ ವರ್ಕ್ ಔಟ್ ಮಾಡಿ 'ಏಯ್ಟ್ ಪ್ಯಾಕ್' ಬಾಡಿ ಮಾಡಿಕೊಂಡಿದ್ದಾರೆ. ಈ ಚಿತ್ರದ ನಿರ್ದೇಶಕರು ಚಂದ್ರಹಾಸ್.

  ಬೇಡಿಕೆಯಲ್ಲಿರುವ ಕೆಲವೇ ಕೆಲವು ನಟಿಯರಲ್ಲಿ ಒಬ್ಬರಾಗಿರುವ ರೂಪಿಕಾ ಬಿಡುಗಡೆಗೆ ಸಿದ್ಧವಾಗಿರುವ 'ಬೀರ' ಚಿತ್ರದಲ್ಲೂ ನಾಯಕಿ. ಸದ್ಯದಲ್ಲೇ ತೆಲುಗು ಚಿತ್ರದಲ್ಲೂ ನಟಿಸಲಿದ್ದಾರೆ ರೂಪಿಕಾ. ಸಿಂಹರಾಶಿ ಚಿತ್ರದಲ್ಲಿ ಗ್ಲಾಮರ್ ಪಾತ್ರವನ್ನು ಪೋಷಿಸುತ್ತಿರುವ ರೂಪಿಕಾಗೆ ಈ ಚಿತ್ರದಲ್ಲಿ ಚಾಲೆಂಜಿಂಗ್ ಎನಿಸುವ ಪಾತ್ರವಿದೆಯಂತೆ. ಕಥೆ ಕೇಳಿ ತುಂಬಾ ಇಷ್ಟಪಟ್ಟು ಈ ಚಿತ್ರ ಒಪ್ಪಿಕೊಂಡಿದ್ದಾಗಿ ರೂಪಿಕಾ ಹೇಳಿದ್ದಾರೆ.

  ಸಿದ್ದು ಪಾಟೀಲ್ ಮೊಘಾ ಸಿಂಹರಾಶಿಯ ನಿರ್ಮಾಪಕರು. ಜೈ ಆನಂದ್ ಕ್ಯಾಮರಾ, ಎಸ್ ಕೆ ಸಾಲಿ ಮೊಘಾ ಸಂಭಾಷಣೆ, ಶ್ರೀವತ್ಸ ಸಂಗೀತ ಈ ಚಿತ್ರಕ್ಕಿದೆ. ಗುರುರಾಜ್ ಹೊಸಕೋಟೆ, ಶರತ್ ಲೋಹಿತಾಶ್ವ ಮುಂತಾದವರು ಚಿತ್ರದಲ್ಲಿ ಪ್ರಮುಖ ಪೋಷಕವರ್ಗದಲ್ಲಿದ್ದಾರೆ. ಅಂದಹಾಗೆ, ನಾಳೆ, ಅಂದರೆ ಮೇ 09, 2012 ಚಿತ್ರದ ಮುಹೂರ್ತ ನಿಗದಿಯಾಗಿದೆ. (ಒನ್ ಇಂಡಿಯಾ ಕನ್ನಡ)

  English summary
  Chetan Chandra Movie Simharashi launches on May 09, 2012. Kannada Actress Roopika selected as heroine for this movie. Chandrahasa, a new comer directs this. Chetan Chandra shaped his body as Eght Packs for this movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X