'ಬಹುದ್ದೂರ್' ಚೇತನ್ ಲಿರಿಕ್ಸ್ ಬರೆದ್ರೆ ಆ ಹಾಡು ಬಾಕ್ಸ್ ಆಫೀಸ್ ಹಿಟ್
Recommended Video

''ಈ ಹುಡುಗನ ಎರಡು ಕಣ್ಣಲ್ಲು ಗೆಲ್ಲುವ ಕಿಚ್ಚು ಇದೆ, ಅದಕ್ಕೆ ಅವ್ರು ಗ್ಲೂಗಿಗೂ ಸಿಕ್ಸರ್ ಹೊಡಿತ್ತಾರೆ, ಬಜಾರಿನಲ್ಲಿ ಇವರ ಸಾಹಿತ್ಯ ತುಂಬ ದುಬಾರಿ, ಎದೆ ಹುಬ್ಬಿಸಿ ನಡೆಯುವ ಇವ್ರು ಅಡ್ಡ ಸಿಕ್ಕರೆ ಯಮನಿಗೆ ಸುಪಾರಿ ಕೊಡುತ್ತಾರೆ. ಟೋಟಲ್ ಆಗಿ ಇವ್ರು ಸೆಲ್ಫ್ ಮೇಡ್ ಶಾಹಜಾದ.''
ಈ ಸಾಲುಗಳನ್ನು ಓದಿ ನಾವು ಯಾವ ಹೀರೋ ಬಗ್ಗೆ ಹೇಳುತ್ತಿದ್ದೇವೆ ಅಂತ ಯೋಚನೆ ಮಾಡಬೇಡಿ. ಯಾಕೆಂದರೆ ಯಾವ ಹೀರೋ ಬಗ್ಗೆಯೂ ಹೇಳುತ್ತಿಲ್ಲ. ಹೀರೋಗಳಿಗೆ ಈ ರೀತಿಯ ಖಡಕ್, ಖದರ್ ಆಗಿರುವ ಪದಗಳನ್ನು ಜೋಡಿಸುವ ನಿರ್ದೇಶಕ ಚೇತನ್ ಕುಮಾರ್ ಬಗ್ಗೆ.
ಹಾಡುಗಳು ಸಿನಿಮಾ ನೋಡಲು ಥಿಯೇಟರ್ ಗಳಿಗೆ ಪ್ರೇಕ್ಷಕರನ್ನ ಕರೆತರುವ ಆಮಂತ್ರಣ ಪತ್ರಗಳಿದ್ದಂತೆ. ಹಾಡುಗಳನ್ನ ಯಾರು ಬೇಕಾದರು ಬರೆಯುತ್ತಾರೆ ಆದರೆ ಅವುಗಳು ಅಭಿಮಾನಿಗಳ ಮನಸ್ಸಿನಲ್ಲಿ ಹಾಗೆಯೇ ಉಳಿದುಕೊಳ್ಳುವಂತೆ ಮಾಡುವ ಸಾಮರ್ಥ್ಯವನ್ನ ಕೆಲವೇ ಕೆಲವು ಮಂದಿ ಹೊಂದಿರುತ್ತಾರೆ. ಅಂತಹ ಟ್ಯಾಲೆಂಟ್ ಹೊಂದಿರುವ ಚಿತ್ರ ಸಾಹಿತಿ ಬಹದ್ದೂರ್ ಚೇತನ್
ಹೀರೋ ಇಂಟ್ರಡಕ್ಷನ್ ಹಾಡುಗಳನ್ನ ಹೇಳಿ ಮಾಡಿಸಿದಂತೆ ಬರೆಯೋ ಬಹದ್ದೂರ್ ಚೇತನ್ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ ಇದೇ ವಿಶೇಷ ಸಂದರ್ಭದಲ್ಲಿ ಚೇತನ್ ಬರೆದಿರುವ ಸಾಕಷ್ಟು ಹಾಡುಗಳಲ್ಲಿ ಸೂಪರ್ ಹಿಟ್ ಎನ್ನಿಸಿಕೊಂಡ ಹಾಡುಗಳು ಇಲ್ಲಿವೆ ಮುಂದೆ ಓದಿ

ಬೈಟೆ ಬೈಟೆ ಎಂದು ಬರೆದ ಚೇತನ್
ಚೇತನ್ ಸುಮಾರು ವರ್ಷಗಳಿಂದ ಕನ್ನಡ ಸಿನಿಮಾರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ ನಿರ್ದೇಶಕ ಹಾಗೂ ಗೀತಾ ಸಾಹಿತಿ ಆಗಿದ್ದು ಮೊದಲಿಗೆ ಬರೆದದ್ದು ವರದನಾಯಕ ಚಿತ್ರದ ಬೈಟೆ ಬೈಟೆ ಹಾಡು. ಅರ್ಜುನ್ ಜನ್ಯ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದರು.

ಶಿವಣ್ಣನಿಗೂ ಕಮರ್ಷಿಯಲ್ ಸಾಂಗ್
ಶಿವರಾಜ್ ಕುಮಾರ್ ಅಭಿನಯದ ಭಜರಂಗಿ ಸಿನಿಮಾದ ಬಾಸು ನಮ್ ಬಾಸು ಇವ್ರ್ ಕೈಹಿಡಿದ್ರೆ ಕಾಸು ಹಾಡನ್ನ ಬರೆದಿದ್ದು ಇದೇ ಚೇತನ್. ಅದಷ್ಟೇ ಅಲ್ಲದೆ ಚೇತನ್ ಬರವಣಿಗೆಯನ್ನ ಮೆಚ್ಚಿ ನಿರ್ದೇಶಕ ರಾಮ್ ಗೋಪಾಲ್ ವರ್ಮ ಕಿಲ್ಲಿಂಗ್ ವೀರಪ್ಪನ್ ಸಿನಿಮಾಗೆ ಹಾಡುಗಳನ್ನ ಬರೆಸಿದ್ದರು. ಆ ಹಾಡುಗಳು ಸೂಪರ್ ಹಿಟ್

ರಾಕಿಂಗ್ ಸ್ಟಾರ್ ಗೆ ರಾಕಿಂಗ್ ಸಾಂಗ್ಸ್
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಸಿನಿಮಾಗಳಲ್ಲೂ ಚೇತನ್ ಹಾಡುಗಳ ಮೋಡಿ ಜೋರಾಗಿಯೇ ಇದೆ. ಯಶ್ ಅಭಿನಯದ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದಲ್ಲಿ ಹೇಳೋರ ಮಾತು ಕೇಳು ಗುರು ಎಂದು ಬರೆದು ಅಭಿಮಾನಿಗಳ ಮನಸ್ಸು ಗೆದ್ದಿದ್ದರು.

ಕಿಚ್ಚನನ್ನ ಹುಲಿ ಮಾಡಿದ ಚೇತನ್
ವರದನಾಯ ಚಿತ್ರಕ್ಕೆ ಮಾತ್ರವಲ್ಲದೆ ಹೆಬ್ಬುಲಿ ಸಿನಿಮಾದ ಜಗಲ್ ಮೇ ಸಿಂಗಲ್ ಶೇರ್ ಎನ್ನುವ ಹಾಡನ್ನು ಬರೆದಿದ್ದಾರೆ. ಈ ಹಾಡು ಬಾಕ್ಸ್ ಆಫೀಸ್ ನಲ್ಲಿ ಧೂಳೆಬ್ಬಿಸಿತ್ತು.

ಜಗ್ಗು ದುನಿಯಾದಲ್ಲಿ ಚೇತನ್ ಸಾಂಗ್ಸ್
ಬಾಕ್ಸ್ ಆಫೀಸ್ ಸುಲ್ತಾನನಿಗೂ ಚೇತನ್ ಹಾಡುಗಳನ್ನ ಬರೆದಿದ್ದಾರೆ. ಚಾಲೆಂಜಿಂಗ್ ಸ್ಟಾರ್ ಚಿತ್ರದಲ್ಲಿ ಹಿಟ್ ಆಗಿರುವ ಇಂಟ್ರಡಕ್ಷನ್ ಹಾಡುಗಳು ಚೇತನ್ ಅವರ ಲೇಖನಿಯಿಂದಲೇ ಬಂದಿದ್ದು.

ಬರವಣಿಗೆಯೇ ಅಸ್ತ್ರ
ಚೇತನ್ ತಾವು ನಿರ್ದೇಶನ ಮಾಡಿರುವ ಸಿನಿಮಾಗಳಲ್ಲಿಯೂ ಅದ್ಬುತವಾಗಿರುವ ಹಾಡುಗಳನ್ನ ಬರೆದಿದ್ದಾರೆ. ಬಹದ್ದೂರು ಹಾಗೂ ಭರ್ಜರಿ ಸಿನಿಮಾದ ಸಾಂಗ್ ಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ಎಲ್ಲರಿಗೂ ಇಷ್ಟವಾಗುವ ಹಾಡುಗಳು
ಚೇತನ್ ಮೊದಲಿನಿಂದಲೂ ಇಂಟ್ರಡಕ್ಷನ್ ಸಾಂಗ್ ಗಳಿಗೆ ಸಖತ್ ಫೇಮಸ್. ಅಭಿಮಾನಿಗಳು ತಮ್ಮ ಮನಸ್ಸಿನಲ್ಲಿ ನೆಚ್ಚಿನ ಹೀರೋಗಳನ್ನ ಚಿತ್ರೀಕರಿಸಿ ಕೊಂಡಿರುವ ರೀತಿಯಲ್ಲಿಯೇ ಚೇತನ್ ಲಿರಿಕ್ಸ್ ಇರುತ್ತದೆ.

ಹೊಸ ಪದಗಳನ್ನ ಹುಡುಕಿ ತರುವ ಸಾಹಿತಿ
ಕನ್ನಡದ ಎಲ್ಲಾ ಸ್ಟಾರ್ ಕಲಾವಿದರಿಗೂ ಚೇತನ್ ಹಾಡುಗಳನ್ನ ಬರೆದಿದ್ದಾರೆ. ಪ್ರತಿ ಹಾಡುಗಳಲ್ಲೂ ಹೊಸ ಪದಗಳು ಹಾಗೂ ಹೊಸ ಶೈಲಿಯನ್ನ ಅಳವಡಿಸಿಕೊಳ್ಳುತ್ತಾರೆ.


Click it and Unblock the Notifications











