ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳ ಫೇಸ್ ಬುಕ್ ಅಕೌಂಟ್ ಹ್ಯಾಕ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿರುವ ರಾಬರ್ಟ್ ಚಿತ್ರದ ನಾಯಕಿ ಆಶಾ ಭಟ್ ಅವರ ಟ್ವಿಟ್ಟರ್, ಇನ್ಸ್ಟಾಗ್ರಾಂ ಹ್ಯಾಕ್ ಆಗಿತ್ತು. ಈ ವಿಷಯವನ್ನ ಸ್ವತಃ ಆಶಾ ಭಟ್ ಅವರೇ ಬಹಿರಂಗಪಡಿಸಿದ್ದರು. ಟರ್ಕಿಶ್ ಗುಂಪು ಆಶಾ ಭಟ್ ಅವರ ಖಾತೆಯನ್ನ ಹ್ಯಾಕ್ ಮಾಡಿದ್ದರು ಎಂದು ಹೇಳಿಕೊಂಡಿದ್ದರು.
ಆಶಾ ಭಟ್ ಅವರ ಖಾತೆ ಹ್ಯಾಕ್ ಆಗಿರುವ ಸುದ್ದಿ ಬೆನ್ನಲ್ಲೆ ಕನ್ನಡದ ಸಂಗೀತ ನಿರ್ದೇಶಕರೊಬ್ಬರ ಫೇಸ್ ಬುಕ್ ಖಾತೆಯೂ ಹ್ಯಾಕ್ ಆಗಿರುವ ಸುದ್ದಿ ಹೊರಬಿದ್ದಿದೆ.
ಸಂಗೀತ ನಿರ್ದೇಶಕ ಖಾತೆಯನ್ನ ಹ್ಯಾಕ್ ಮಾಡಿ, ಅಸಭ್ಯವಾದ ಪೋಸ್ಟ್ ಗಳನ್ನ ಹಾಕಲಾಗುತ್ತಿದೆಯಂತೆ. ಆಶಾ ಭಟ್ ಮತ್ತು ಸಂಗೀತ ನಿರ್ದೇಶಕ ಮಾತ್ರವಲ್ಲ, ಇನ್ನು ಹಲವು ಸೆಲೆಬ್ರಿಟಿಗಳ ಸೋಶಿಯಲ್ ಮೀಡಿಯಾ ಖಾತೆಗಳು ಹ್ಯಾಕ್ ಆಗಿದೆ. ಮುಂದೆ ಓದಿ...

ಬಾಂಗ್ಲಾದೇಶಿಗರಿಂದ ಹ್ಯಾಕ್
ಹಂಸಲೇಖ, ಮನೋಮೂರ್ತಿ, ಹರಿಕೃಷ್ಣ, ಗುರು ಕಿರಣ್ ಅವರ ಬಳಿ ಗಾಯಕನಾಗಿ, ಸಂಗೀತ ನಿರ್ದೇಶಕನಾಗಿ ಕೆಲಸ ಮಾಡಿರುವ ಚೇತನ್ ಸೋಸ್ಕಾ ಅವರ ಅಧಿಕೃತವಾದ ಫೇಸ್ ಬುಕ್ ಖಾತೆ ಬಾಂಗ್ಲಾದೇಶಿಗರಿಂದ ಹ್ಯಾಕ್ ಆಗಿದೆಯಂತೆ. ಈ ಬಗ್ಗೆ ಚೇತನ್ ಫಿಲ್ಮಿಬೀಟ್ ಕನ್ನಡಕ್ಕೆ ತಿಳಿಸಿದ್ದಾರೆ.

ಹೆಸರಿಗೆ ಮಸಿ ಬಳಿಯುವ ಪ್ರಯತ್ನ
ಚೇತನ್ ಅವರ ಅಧಿಕೃತ ಖಾತೆ ಹ್ಯಾಕ್ ಮಾಡಿ, ಅದರಲ್ಲಿ ಅಸಭ್ಯವಾದ ಪೋಸ್ಟ್ ಗಳನ್ನ ಹಾಕಲಾಗುತ್ತಿದೆಯಂತೆ. ಈ ಬಗ್ಗೆ ಸ್ವತಃ ಚೇತನ್ ಅವರೇ ಸ್ಪಷ್ಟನೆ ನೀಡಿದ್ದು, ಈ ಬಗ್ಗೆ ಫಾಲೋವರ್ಸ್ ಮತ್ತು ಜನಸಾಮಾನ್ಯರು ಎಚ್ಚರಿಕೆಯಿಂದಿರಿ ಎಂದು ತಿಳಿಸಿದ್ದಾರೆ.

ಸುದೀಪ್ ಫ್ಯಾನ್ಸ್ ಖಾತೆಯೂ ಹ್ಯಾಕ್
ಮೊನ್ನೆಯಷ್ಟೇ ಕಿಚ್ಚ ಸುದೀಪ್ ಅವರ ಅಭಿಮಾನಿಗಳ ಟ್ವಿಟ್ಟರ್ ಖಾತೆಯೊಂದು ಹ್ಯಾಕ್ ಆಗಿತ್ತು. ಕೆ.ಎಸ್.ಎಸ್.ಎಸ್ ಅಫೀಶಿಯಲ್ (KSSS Official) ಖಾತೆ ಹ್ಯಾಕ್ ಆಗಿತ್ತು ಎಂದು ತಿಳಿಸಿದ್ದರು.

'ಕಬೀರ್ ಸಿಂಗ್' ನಾಯಕಿ ಖಾತೆ ಹ್ಯಾಕ್
ಭರತ್ ಅನೇ ನೇನು, ಕಬೀರ್ ಸಿಂಗ್ ಅಂತಹ ಯಶಸ್ವಿ ಚಿತ್ರಗಳಲ್ಲಿ ನಟಿಸಿರುವ ಕಿಯಾರ ಅಡ್ವಾನಿ ಅವರ ಸೋಶಿಯಲ್ ಮೀಡಿಯಾ ಖಾತೆಯೂ ಹ್ಯಾಕ್ ಆಗಿತ್ತು.

ಸುದೀಪ್ ಖಾತೆಗೂ ಪ್ರಯತ್ನ
ಪೈಲ್ವಾನ್ ಚಿತ್ರದ ಪೈರಸಿಗೆ ಸಂಬಂಧಿಸಿದಂತೆ ಹೆಚ್ಚು ಸುದ್ದಿಯಲ್ಲಿದ್ದ ಸಂದರ್ಭದಲ್ಲಿ ನಟ ಸುದೀಪ್ ಅವರ ಟ್ವಿಟ್ಟರ್ ಖಾತೆಯನ್ನ ಹ್ಯಾಕ್ ಮಾಡುವ ಪ್ರಯತ್ನ ಆಗಿತ್ತಂತೆ. ಆದರೆ, ಅದು ಸಫಲವಾಗಲಿಲ್ಲ. ಆ ಬಗ್ಗೆಯೂ ಸೈಬರ್ ಕ್ರೈಂ ಪೋಲಿಸರಿಗೆ ಮಾಹಿತಿ ಕೂಡ ನೀಡಲಾಗಿತ್ತಂತೆ.


Click it and Unblock the Notifications











