ಚುನಾವಣೆ ಪ್ರಚಾರಕ್ಕೆ ಓಡೋಡಿ ಬರುವ ನಟರು, ರೈತರ ಬಗ್ಗೆ ತುಟಿಬಿಚ್ಚಿಲ್ಲವೇಕೆ: ಚೇತನ್ ಪ್ರಶ್ನೆ
ದೆಹಲಿಯಲ್ಲಿ ಸತತ ಎರಡು ವಾರದಿಂದಲೂ ನಡೆಯುತ್ತಿರುವ ರೈತ ಪ್ರತಿಭಟನೆ ದೇಶದ ಗಮನ ಸೆಳೆದಿದೆ. ಹಲವಾರು ಸೆಲೆಬ್ರಿಟಿಗಳು ಈಗಾಗಲೇ ಬಹಿರಂಗವಾಗಿಯೇ ರೈತರ ಪ್ರತಿಭಟನೆಗೆ ಬೆಂಬಲ ನೀಡಿದ್ದಾರೆ.
Recommended Video

ನಟ ಪ್ರಕಾಶ್ ರೈ ಸಹ ರೈತರ ಪ್ರತಿಭಟನೆ ಬಗ್ಗೆ ಟ್ವೀಟ್ ಮಾಡಿ, 'ರೈತರ ಪರ ನಿಲ್ಲುವುದು ನಮ್ಮೆಲ್ಲರ ಕರ್ತವ್ಯ' ಎಂದಿದ್ದರು. ಇದೀಗ ಕನ್ನಡದ ನಟ ಚೇತನ್ ಅಹಿಂಸಾ ಸಹ ರೈತರ ಪರ ದನಿ ಎತ್ತಿದ್ದಾರೆ. ಇಷ್ಟು ಮಾತ್ರವೇ ಅಲ್ಲದೆ, ರೈತರ ಪರ ಮಾತನಾಡದ ನಟರನ್ನು ಟೀಕಿಸಿದ್ದಾರೆ ಸಹ.
ರಾಜಕೀಯ ಪಕ್ಷಗಳ ಚುನಾವಣೆ ಪ್ರಚಾರಕ್ಕೆ ಬಹುಬೇಗನೆ ಬಂದು ಬಿಡುವ ನಟರು, ರೈತರಿಗೆ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ ಏಕೆ?' ಎಂದು ಪ್ರಶ್ನಿಸಿದ್ದಾರೆ ನಟ ಚೇತನ್. ಕೆಲವು ದಿನಗಳ ಹಿಂದಷ್ಟೆ ನಟ ದರ್ಶನ್, ನಟಿ ಅಮೂಲ್ಯ, ರಾಕ್‌ಲೈನ್ ವೆಂಕಟೇಶ್ ಅವರುಗಳು ಚುನಾವಣೆ ಪ್ರಚಾರದಲ್ಲಿ ಭಾಗವಹಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಚುನಾವಣೆ ಪ್ರಚಾರಕ್ಕೆ ಬೇಗನೆ ಬರುತ್ತಾರೆ: ಚೇತನ್
'ದೇಶದಾದ್ಯಂತ ರೈತರು, ತಿಂಗಳುಗಳಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಚುನಾವಣೆ ಪ್ರಚಾರದ ಬ್ಯಾಂಡ್ ವ್ಯಾಗನ್ (ತೆರೆದ ವಾಹನ)ಗಳ ಮೇಲೆ ವೇಗವಾಗಿ ನೆಗೆಯುವ ಕನ್ನಡದ ಚಲನಚಿತ್ರ ನಟರು ರೈತರ ಬೆಂಬಲವಾಗಿ ಒಂದು ಮಾತನ್ನೂ ಹೇಳಿಲ್ಲ' ಎಂದಿದ್ದಾರೆ ನಟ ಚೇತನ್ ಅಹಿಂಸ.

ನಟರಿಗೆ ನಿಜವಾಗಿಯೂ ಜನಪರ ಕಾಳಜಿ ಇದೆಯೇ: ಚೇತನ್
'ನಾವು ನಟರು ಜನರಿಗೆ ಸಹಾಯ ಮಾಡುವ ಬಗ್ಗೆ ಕಾಳಜಿ ವಹಿಸುತ್ತೇವೆಯೇ? ಎಂದು ಪ್ರಶ್ನಿಸಿದ್ದಾರೆ. ನಮ್ಮ ಶ್ರೀಮಂತ, ಗಣ್ಯ ಸ್ನೇಹಿತರನ್ನು ಇನ್ನಷ್ಟು ಪ್ರಚೋದಿಸಲು ಮಾತ್ರವೇ ನಾವು ಆಸಕ್ತಿ ಹೊಂದಿದ್ದೇವೆಯೇ?' ಎಂದು ಪ್ರಶ್ನಿಸಿದ್ದಾರೆ ನಟ ಚೇತನ್.

ಮುನಿರತ್ನ ಪರ ದರ್ಶನ್ ಪ್ರಚಾರ ಮಾಡಿದ್ದರು
ಕೆಲವೇ ದಿನಗಳ ಹಿಂದೆ ನಟ ದರ್ಶನ್ ಅವರು ಬಿಜೆಪಿ ಅಭ್ಯರ್ಥಿ ಮುನಿರತ್ನ ಪರವಾಗಿ ಉಪಚುನಾವಣೆಯಲ್ಲಿ ಅದ್ಧೂರಿಯಾಗಿ ಪ್ರಚಾರ ನಡೆಸಿದ್ದರು. ಪ್ರಚಾರದಲ್ಲಿ ನಟಿ ಅಮೂಲ್ಯಾ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಸಹ ಭಾಗವಹಿಸಿದ್ದರು.

ಹೆಣ್ಣನ್ನು ನಾಯಿ, ನರಿ ಎನ್ನುವ ನಟ: ಚೇತನ್ ಅಸಮಾಧಾನ
ಕೆಲವು ದಿನಗಳ ಹಿಂದಷ್ಟೆ ಜೂಜು ಜಾಹೀರಾತುಗಳ ವಿರುದ್ಧ ಚೇತನ್ ಟ್ವೀಟ್ ಮಾಡಿದ್ದರು. ಅದಕ್ಕೂ ಮುನ್ನಾ 'ಹೆಣ್ಣನ್ನು ನಾಯಿ, ನರಿ, ಕ್ರಿಮಿ, ಕೀಟ ಎನ್ನುವ ನಟ' ಎಂದು ನಟರೊಬ್ಬರ ವಿರುದ್ಧ ಟೀಕೆ ಮಾಡಿದ್ದರು. ಈ ಟೀಕೆ ಧೃವ ಸರ್ಜಾ ವಿರುದ್ಧವೇ ಆಗಿತ್ತು ಎಂಬುದು ಬಹುತೇಕ ಸ್ಪಷ್ಟ.


Click it and Unblock the Notifications











