ಹಿಂದಿಯಲ್ಲಿ ಧೂಳೆಬ್ಬಿಸಿದೆ ಚೇತನ್ ಅಭಿನಯದ ಕನ್ನಡ ಚಿತ್ರ.!
Recommended Video

ಸ್ಮಾರ್ಟ್ ಅಂಡ್ ಹ್ಯಾಂಡ್ಸಮ್ ಆಗಿ ಕಾಣುವ 'ಆ ದಿನಗಳು' ಖ್ಯಾತಿಯ ಚೇತನ್ ಕಂಡ್ರೆ ಯುವತಿಯರಿಗೆ ಅಚ್ಚುಮೆಚ್ಚು. ಇದೇ ಚೇತನ್ ಅಭಿನಯದ ಕನ್ನಡ ಚಿತ್ರಗಳು ನಿರೀಕ್ಷಿಸಿದ ಮಟ್ಟಕ್ಕೆ ಯಶಸ್ಸು ಗಳಿಸಿವೆ.
'ಆ ದಿನಗಳು', 'ಬಿರುಗಾಳಿ', 'ಮೈನಾ'.. ಹೀಗೆ ಚೇತನ್ ಅಭಿನಯದ ಚಿತ್ರಗಳು ಸ್ಯಾಂಡಲ್ ವುಡ್ ನಲ್ಲಿ ಸಖತ್ತಾಗಿ ಸದ್ದು ಮಾಡಿದ್ದವು. ಕಳೆದ ವರ್ಷ ಚೇತನ್ ಅಭಿನಯದ 'ಅತಿರಥ' ಸಿನಿಮಾ ತೆರೆಗೆ ಬಂದಿತ್ತು.
ಮಹೇಶ್ ಬಾಬು ನಿರ್ದೇಶನದ ತಮಿಳಿನ ರೀಮೇಕ್ ಆಗಿದ್ದ 'ಅತಿರಥ' ಚಿತ್ರ ಗಾಂಧಿನಗರದಲ್ಲಿ ತಕ್ಕಮಟ್ಟಿಗೆ ಸೌಂಡ್ ಮಾಡಿತ್ತು. ಈಗ ಇದೇ 'ಅತಿರಥ' ಸಿನಿಮಾ ಸದ್ದಿಲ್ಲದೇ ಹಿಂದಿಗೆ ಡಬ್ ಆಗಿದೆ.
ವಾರದ ಹಿಂದೆ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿರುವ 'ಅತಿರಥ' ಹಿಂದಿ ವರ್ಷನ್ ಸೋಷಿಯಲ್ ಮೀಡಿಯಾದಲ್ಲಿ ಅಕ್ಷರಶಃ ಧೂಳೆಬ್ಬಿಸಿದೆ. ಹೆಚ್ಚಿನ ಮಾಹಿತಿ ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಯೂಟ್ಯೂಬ್ ನಲ್ಲಿ ಹಿಂದಿ 'ಅತಿರಥ' ಟ್ರೆಂಡಿಂಗ್
ಒಂದು ವಾರದ ಹಿಂದೆಯಷ್ಟೇ 'ಅತಿರಥ' ಚಿತ್ರದ ಹಿಂದಿ ಅವತರಣಿಕೆ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ. ಕೇವಲ ಒಂದು ವಾರಕ್ಕೆ ಒಂದು ಕೋಟಿ ಮೂವತ್ತು ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ ಈ ಚಿತ್ರ.!

ಹಿಂದಿಯಲ್ಲಿ ಸೂಪರ್ ಹಿಟ್
ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಯಶಸ್ಸು ಕಾಣದ 'ಅತಿರಥ' ಸಿನಿಮಾ ಹಿಂದಿಯಲ್ಲಿ ಮಾತ್ರ ಸೂಪರ್ ಹಿಟ್ ಎನಿಸಿಕೊಂಡಿದೆ. ಅಸಲಿಗೆ, ಕನ್ನಡದ 'ಅತಿರಥ' ಚಿತ್ರವನ್ನ ಹಿಂದಿಗೆ ಡಬ್ ಮಾಡಿರುವವರು RK Duggal Studios ಎಂಬ ಕಂಪನಿ.

ನಕಲಿ ಅಂಕಪಟ್ಟಿ ವಿರುದ್ಧ ಹೋರಾಟ
'ಅತಿರಥ' ಚಿತ್ರದಲ್ಲಿ ಚೇತನ್ ಪತ್ರಕರ್ತನ ಪಾತ್ರ ನಿರ್ವಹಿಸಿದ್ದರು. ನಕಲಿ ಅಂಕಪಟ್ಟಿ ಮಾಫಿಯಾವನ್ನು ಬಯಲಿಗೆಳೆಯುವ ಜರ್ನಲಿಸ್ಟ್ ಪಾತ್ರದಲ್ಲಿ ಚೇತನ್ ನಟಿಸಿದ್ದರು.

'ಅತಿರಥ' ಕುರಿತು...
ಮಹೇಶ್ ಬಾಬು ನಿರ್ದೇಶನದ 'ಅತಿರಥ' ಚಿತ್ರದಲ್ಲಿ ಚೇತನ್ ಕುಮಾರ್, ಲತಾ ಹೆಗ್ಡೆ, ಕಬೀರ್ ದುಹಾನ್ ಸಿಂಗ್, ಸಾಧು ಕೋಕಿಲ, ಅವಿನಾಶ್, ಅಚ್ಯುತ್ ಕುಮಾರ್, ಸುಧಾ ಬೆಳವಾಡಿ ಸೇರಿದಂತೆ ಹಲವರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಸಾಧು ಕೋಕಿಲ ಪುತ್ರ ಸುರಾಗ್ ಸಂಗೀತ ಸಂಯೋಜಿಸಿದ್ದರು.


Click it and Unblock the Notifications











