For Quick Alerts
  ALLOW NOTIFICATIONS  
  For Daily Alerts

  ಆಸ್ಕರ್‌ಗೆ ನಾಮಿನೇಟ್ ಆಗಿದ್ದ 'ಛೆಲ್ಲೊ ಶೋ' ಚಿತ್ರದ ಬಾಲನಟ ಇನ್ನಿಲ್ಲ!

  |

  ಇತ್ತೀಚೆಗಷ್ಟೆ ಭಾರತದ ಪರ ಯಾವ ಚಿತ್ರವನ್ನು ಆಸ್ಕರ್ ಪ್ರಶಸ್ತಿಯ ನಾಮನಿರ್ದೇಶನಕ್ಕೆ ಆಯ್ಕೆ ಮಾಡಲಾಗುತ್ತದೆ ಎಂಬ ಕುತೂಹಲಕ್ಕೆ ತೆರೆಬಿದ್ದಿತ್ತು. ಆರ್ ಆರ್ ಆರ್ ಚಿತ್ರವನ್ನು ಆಯ್ಕೆ ಮಾಡುವ ಸಾಧ್ಯತೆ ಬಹುತೇಕ ಹೆಚ್ಚಿದೆ ಎಂಬ ಅಭಿಪ್ರಯಗಳು ದೊಡ್ಡಮಟ್ಟದಲ್ಲಿ ವ್ಯಕ್ತವಾಗಿದ್ದವು. ಆದರೆ ಭಾರತ ಆಯ್ಕೆಗಾರರ ಸಮಿತಿ ಗುಜರಾತಿನ 'ಛೆಲ್ಲೋ ಶೋ' ಎಂಬ ಚಿತ್ರವನ್ನು ಆಯ್ಕೆ ಮಾಡುವ ಮೂಲಕ ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು.

  ಒಂಬತ್ತು ವರ್ಷದ ಹುಡುಗನೋರ್ವನಿಗೆ ಸಿನಿಮಾ ಮೇಲಿರುವ ಪ್ರೀತಿ ಹಾಗೂ ಕಾಳಜಿಯ ಕತೆಯನ್ನು ಹೊಂದಿದ್ದ ಛೆಲ್ಲೊ ಶೋ ಕಳೆದ ವರ್ಷ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಇನ್ನು ಈ ಚಿತ್ರ ಇದೇ ತಿಂಗಳ 14ರಂದು ಅಂದರೆ ಇದೇ ಶುಕ್ರವಾರದಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುವುದರಲ್ಲಿತ್ತು. ಆದರೆ ಇದೀಗ ಬಿಡುಗಡೆಗೂ ಮುನ್ನವೇ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸಿದ್ದ ರಾಹುಲ್ ಕೋಲಿ ಲುಕೇಮಿಯಾದಿಂದ ನಿಧನ ಹೊಂದಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

  ರಾಹುಲ್ ಕೋಲಿಗೆ 10 ವರ್ಷ ವಯಸ್ಸಾಗಿತ್ತು ಹಾಗೂ ಅಕ್ಟೋಬರ್ 2ರಂದು ಆತ ತಿಂಡಿ ಮುಗಿಸಿದ ನಂತರ ಆತನಿಗೆ ವಿಪರೀತ ಜ್ವರ ಕಾಣಿಸಿಕೊಂಡಿತ್ತು ಹಾಗೂ ಮೂರ್ನಾಲ್ಕು ಬಾರಿ ರಕ್ತದ ವಾಂತಿ ಮಾಡಿಕೊಂಡಿದ್ದ ಎಂದು ರಾಹುಲ್ ಕೋಲಿಯ ತಂದೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಇನ್ನು ರಾಹುಲ್ ಕೋಲಿಯನ್ನು ಆಸ್ಪತ್ರೆಗೆ ದಾಖಲಿಸಿದರೂ ಸಹ ಚಿಕಿತ್ಸೆ ಫಲಕಾರಿಯಾಗದ ಕಾರಣ ಆತ ನಿಧನ ಹೊಂದಿರುವುದಾಗಿ ಮಾಹಿತಿ ಲಭಿಸಿದೆ.

  ರಾಹುಲ್ ಕೋಲಿ ಅವರದ್ದು ಬಡ ಕುಟುಂಬವಾಗಿತ್ತು ಹಾಗೂ ಮಗನ ಚಿಕಿತ್ಸೆಗೆ ಆತನ ತಂದೆ ಆಟೋವನ್ನು ಮಾರಾಟ ಮಾಡಿದ್ದರು. ಈ ವಿಷಯ ತಿಳಿದ ಛೆಲ್ಲೋ ಶೋ ಚಿತ್ರತಂಡ ಮರಳಿ ಆಟೋ ರಾಹುಲ್ ಕೋಲಿ ತಂದೆಗೆ ಸಿಗುವಂತೆ ಮಾಡಿದ್ದಾರೆ. ಹಾಗೂ ಚಿತ್ರದ ನಿರ್ದೇಶಕ ಪಾನ್ ನಳಿನ್ ಮಾತನಾಡಿ ಸುಮಾರು ಒಂದು ವಾರ ಆಸ್ಪತ್ರೆಯಲ್ಲಿ ರಾಹುಲ್ ಕೋಲಿ ಸಾವು ಬದುಕಿನ ನಡುವೆ ಹೋರಾಟ ನಡೆಸಿದ್ದ, ನಾವು ಎಷ್ಟೇ ಪ್ರಯತ್ನ ಪಟ್ಟರೂ ಸಹ ಆತನನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ತಿಳಿಸಿದರು.

  ಇನ್ನು ಮಗನ ಸಾವಿನ ಕುರಿತಾಗಿ ಮಾತನಾಡಿದ ಅತನ ತಂದೆ ಚಿತ್ರ ಬಿಡುಗಡೆಯಾದ ನಂತರ ಎಲ್ಲವೂ ಸರಿಯಾಗುತ್ತೆ, ನಮ್ಮ ಜೀವನ ಸುಧಾರಿಸುತ್ತೆ ಎನ್ನುತ್ತಿದ್ದ, ಈಗ ಚಿತ್ರ ಬಿಡುಗಡೆ ಸಮೀಪ ಇರುವಾಗ ಆತನೇ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ.

  English summary
  Chhello Show child actor Rahul Koli dies of cancer at the age of 10. Read on.
  Tuesday, October 11, 2022, 17:32
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X