twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರು ಚಿತ್ರೋತ್ಸವದಲ್ಲಿ ರಿಷಬ್ ಶೆಟ್ಟಿಗೆ ಸರ್ಪ್ರೈಸ್ ನೀಡಿದ ಸಿಎಂ ಕುಮಾರಸ್ವಾಮಿ

    |

    ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ರಾಜಕಾರಣಕ್ಕೂ ಬರುವ ಮೊದಲು ಸಿನಿಮಾ ನಿರ್ಮಾಪಕರಾಗಿ, ವಿತರಕರಾಗಿ, ಪ್ರದರ್ಶಕರಾಗಿ ಕೆಲಸ ಮಾಡಿದ್ದಾರೆ. ಚಿತ್ರರಂಗಕ್ಕೂ ಸಿಎಂ ಕುಮಾರಸ್ವಾಮಿಗೂ ಹತ್ತಿರದ ಸಂಬಂಧವೇ.

    ನಿನ್ನೆ ವಿಧಾನಸೌದದ ಬ್ಯಾಂಕ್ವೆಟ್ ಹಾಲ್ ನಲ್ಲಿ 11ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಟಾಟನೆ ಸಮಾರಂಭ ನಡೆಯಿತು. ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ ನೀಡಿದ್ರು.

    ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ ಹುತಾತ್ಮ ಯೋಧ ಗುರು ಕುಟುಂಬಕ್ಕೆ ಧನ ಸಹಾಯ ಮಾಡಿದ 'ಬೆಲ್ ಬಾಟಂ' ತಂಡ

    ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ಗಣ್ಯರು, ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದರು. ನಟ ಅನಂತ್ ನಾಗ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಹಿರಿಯ ನಿರ್ದೇಶಕ ದೊರೆ ಭಗವಾನ್, ನಟ ಶಿವರಾಂ, ರಮೇಶ್ ಭಟ್, ನಿರ್ದೇಶಕ ಭಾರ್ಗವ, ಟಿಎಸ್ ನಾಗಾಭರಣ, ಎಸ್ ವಿ ರಾಜೇಂದ್ರ ಸಿಂಗ್ ಬಾಬು ಹಾಗೂ ಯುವ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಆಗಮಿಸಿದ್ದರು. ಮುಂದೆ ಓದಿ....

    ನಾವು ಇಂಡಸ್ಟ್ರಿಯವರೇ

    ನಾವು ಇಂಡಸ್ಟ್ರಿಯವರೇ

    ಚಿತ್ರೋತ್ಸವಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ ''ನಾನು ಇಂಡಸ್ಟ್ರಿಯವನೇ, ಬಿವಿಕಾರಂತ್ ಪುಟ್ಟಣ್ಣ ಕಣಗಾಲ್, ಭಗವಾನ್ ಅವರ ಸಿನಿಮಾಗಳನ್ನ ನೋಡ್ಕೊಂಡು ಬೆಳೆದು ಬಂದಿದ್ದೇವೆ. ಆಗಿನ ಚಿತ್ರರಂಗ ಬೇರೆ, ಈಗಿನ ಇಂಡಸ್ಟ್ರಿ ಬೇರೆ. ಈಗ ಥಿಯೇಟರ್ ಸಮಸ್ಯೆಗಳ ಮಧ್ಯೆ ಸಿನಿಮಾ ಮಾಡೋದು ಅಂದ್ರೆ ಸಿಕ್ಕಾಪಟ್ಟೆ ಕಷ್ಟ. ಹೆಚ್ಚು ದುಡ್ಡು ಹಾಕಿ ಸಿನಿಮಾ ಮಾಡಿದ್ರೆ ಸಿನಿಮಾ ಗೆಲ್ಲುತ್ತೆ ಎಂಬ ಮನೋಭಾವ ಇಟ್ಕೊಂಡಿದ್ದಾರೆ. ಅದು ತಪ್ಪು'' ಎಂದು ತಮ್ಮ ಅನುಭವದ ಮಾತುಗಳನ್ನ ಹೇಳಿದ್ರು.

    2 ಕೋಟಿ ವೆಚ್ಚದ 'ಸರ್ಕಾರಿ ಶಾಲೆ ಕಾಸರಗೂಡು' ಗಳಿಸಿದ್ದು 25 ಕೋಟಿ.! 2 ಕೋಟಿ ವೆಚ್ಚದ 'ಸರ್ಕಾರಿ ಶಾಲೆ ಕಾಸರಗೂಡು' ಗಳಿಸಿದ್ದು 25 ಕೋಟಿ.!

    ರಿಷಬ್ ಶೆಟ್ಟಿ ಸಿನಿಮಾ ಉದಾಹರಣೆ

    ರಿಷಬ್ ಶೆಟ್ಟಿ ಸಿನಿಮಾ ಉದಾಹರಣೆ

    ಇದೇ ವೇಳೆ ಮುಂದಿನ ಸಾಲಿನಲ್ಲಿ ಕುಳಿತಿದ್ದ ರಿಷಬ್ ಶೆಟ್ಟಿ ಅವರನ್ನ ಗಮನಿಸಿದ ಮುಖ್ಯಮಂತ್ರಿ ''ನೋಡಿ ಇಲ್ಲೇ ರಿಷಬ್ ಶೆಟ್ಟಿ ಇದ್ದಾರೆ, ವೇದಿಕೆ ಮೇಲೆ ಅನಂತ್ ನಾಗ್ ಅವರಿದ್ದಾರೆ. ಇವರ ಜೋಡಿಯಲ್ಲಿ ಬಂದ ಸ.ಹಿ.ಪ್ರಾ.ಶಾಲೆ ಕಾಸರಗೂಡು, ಕಡಿಮೆ ಬಜೆಟ್ ಆಗಿದ್ರೂ, ತುಂಬಾ ದೊಡ್ಡ ಮಟ್ಟದ ಯಶಸ್ಸು ಕಂಡಿದೆ. ಸಿನಿಮಾಗೆ ಗುಣಮಟ್ಟದ ಕಥೆ ಮತ್ತು ಮೇಕಿಂಗ್ ಬೇಕು'' ಎಂದು ನಿರ್ದೇಶಕ ರಿಷಬ್ ಶೆಟ್ಟಿ ಚಿತ್ರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

    ಚಿತ್ರರಂಗದ ಸಮಸ್ಯೆ ಬಗೆಹರಿಸಲು ನಾನು ರೆಡಿ

    ಚಿತ್ರರಂಗದ ಸಮಸ್ಯೆ ಬಗೆಹರಿಸಲು ನಾನು ರೆಡಿ

    ''ಏಕ ಪರದೆ ಚಿತ್ರಮಂದಿರಗಳ ಕಡಿಮೆ ಆಗ್ತಿವೆ. ಸಿಂಗಲ್ ಥೇಯಟರ್ ಗಳಲ್ಲಿ ಬರುವಂತಹ ವರಮಾನ ಕಮ್ಮಿ ಆಗಿದೆ, ಎಲ್ಲರೂ ಮಾಲ್ ಗಳ ಕಡೆ ಹೋಗ್ತಿದ್ದಾರೆ. ಇವತ್ತು ಕನ್ನಡ ಚಿತ್ರರಂಗ 200 ರಿಂದ 300 ಚಿತ್ರಗಳನ್ನ ಮಾಡುವಂತೆ ಬೆಳೆದಿದೆ. ಅದರೂ ಬೇರೆ ಭಾಷೆಗಳ ಜತೆ ಕಾಂಪೀಟಿಷನ್ ಮಾಡಬೇಕಾದ ಪರಿಸ್ಥಿತಿಯಲ್ಲಿ ಇದ್ದೇವೆ. ಇವತ್ತು ನಮ್ಮ ಸರ್ಕಾರ ಕನ್ನಡ ಚಿತ್ರರಂಗದ ಬೆಳೆವಣಿಗೆಗೆ ಏನು ಬೇಕು ಅಂತ ಬ್ಲೂ ಪ್ರಿಂಟ್ ಅನ್ನ ಕೊಟ್ರೆ ಅದನ್ನ ನಾವು ಮಾಡಿಕೊಡಲು ರೆಡಿ'' ಎಂದು ಭರವಸೆ ನೀಡಿದರು.

    'ಸೀರಿಯಸ್ ವಿಷಯವನ್ನು ಸಿಲ್ಲಿ ಮಾಡಿದ್ದಾರೆ' ಎಂದವರಿಗೆ ರಿ‍ಷಬ್ ಉತ್ತರ 'ಸೀರಿಯಸ್ ವಿಷಯವನ್ನು ಸಿಲ್ಲಿ ಮಾಡಿದ್ದಾರೆ' ಎಂದವರಿಗೆ ರಿ‍ಷಬ್ ಉತ್ತರ

    ನಿರ್ದೇಶಕರಿಗೆ ಮನವಿ ಮಾಡಿದ ಮುಖ್ಯಮಂತ್ರಿ

    ನಿರ್ದೇಶಕರಿಗೆ ಮನವಿ ಮಾಡಿದ ಮುಖ್ಯಮಂತ್ರಿ

    ನಮ್ಮ ನಿರ್ದೇಶಕರಿಗೆ ಮನವಿ ಮಾಡ್ತಿನಿ. ಚಿತ್ರದ ಕಥೆ ಬಗ್ಗೆ ಗುಣಾತ್ಮಕದ ಬಗ್ಗೆ , ಮೇಕಿಂಗ್ ಬಗ್ಗೆ ಗಮನಹರಿಸಬೇಕು. ಒಳ್ಳೆಯ ಕಥೆ ಮಾಡೋಕೆ ಶ್ರಮ ಪಡೀ ಅದಕ್ಕೆ ಯಶಸ್ಸು ಇರುತ್ತೆ'' ಎಂದು ಎಚ್ ಡಿ ಕುಮಾರಸ್ವಾಮಿ ಅವರು ಕಿವಿಮಾತು ಹೇಳಿದರು.

    English summary
    Chief Minister H D Kumaraswamy spoke like a member of Sandalwood while inaugurating the 11th edition of the Bengaluru International Film Festival (BIFFe) on Thursday. He advised producers to look at the quality of the story before investing in a film.
    Friday, February 22, 2019, 16:07
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X