twitter
    For Quick Alerts
    ALLOW NOTIFICATIONS  
    For Daily Alerts

    'ಕಾಲಾ' ಬಿಡುಗಡೆ ಮಾಡದಿರುವುದೇ ಸೂಕ್ತ: ಸಿಎಂ ಕುಮಾರಸ್ವಾಮಿ

    By Pavithra
    |

    Recommended Video

    ಕಾಲಾ ಸಿನೆಮಾ ರಿಲೀಸ್ ಆಗೋದು ಒಳ್ಳೆಯದು ಅಂದ್ರಾ ಎಚ್.ಡಿ.ಕೆ ? | Filmibeat Kannada

    ರಜನಿಕಾಂತ್ ಅಭಿನಯದ 'ಕಾಲಾ' ಚಿತ್ರಕ್ಕೆ ಭದ್ರತೆ ನೀಡಿ, ಬಿಡುಗಡೆ ಮಾಡಲು ಅನುವು ಮಾಡಿಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಹೈ ಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ 'ಕಾಲಾ' ಚಿತ್ರವನ್ನ ಬಿಡುಗಡೆ ಮಾಡದಿರುವುದೇ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

    ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾರಾ ಗೋವಿಂದು ಮತ್ತು ಕನ್ನಡ ರಕ್ಷಣ ವೇದಿಕೆ ಅಧ್ಯಕ್ಷ ಪ್ರವೀಣ್ ಶೆಟ್ಟಿ ''ಕಾಲಾ' ಚಿತ್ರವನ್ನ ಬಿಡುಗಡೆ ಮಾಡಲು ಅನುಮತಿ ನೀಡಬಾರದು. ರಜನಿಕಾಂತ್ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ'' ಎಂದು ಮನವಿ ಮಾಡಿಕೊಂಡರು.

    'ಕಾಲಾ' ನಿಷೇಧಿಸಲು ದೇವೇಗೌಡರು ಬಿಡುವುದಿಲ್ಲ ಎಂದ ರಜನಿಕಾಂತ್'ಕಾಲಾ' ನಿಷೇಧಿಸಲು ದೇವೇಗೌಡರು ಬಿಡುವುದಿಲ್ಲ ಎಂದ ರಜನಿಕಾಂತ್

    ಬಳಿಕ ಮಾತನಾಡಿದ ಕುಮಾರಸ್ವಾಮಿ ''ಕಾಲಾ ಚಿತ್ರವನ್ನ ಬಿಡುಗಡೆ ಮಾಡದಿರುವುದೇ ಸೂಕ್ತ. ಇದರಿಂದ ಚಿತ್ರತಂಡವೇ ಹಿಂದೆ ಸರಿಯುವುದು ಉತ್ತಮ. ಕನ್ನಡ ಪರ ಸಂಘಟನೆಗಳು, ಫಿಲ್ಮಂ ಚೇಂಬರ್ ವಿರೋಧವಿದೆ. ಒಂದು ವೇಳೆ ರಿಲೀಸ್ ಗೆ ಮಾಡಿದ್ರು ಅದರಿಂಗಾವ ನಷ್ಟ ಮತ್ತು ಪರಿಣಾಮವನ್ನ ಅವರೇ ಎದುರಿಸಬೇಕಾಗುತ್ತೆ. ನಾನೊಬ್ಬ ಕನ್ನಡಿಗನಾಗಿ ನನ್ನ ವೈಯಕ್ತಿಕ ಅಭಿಪ್ರಾಯವನ್ನ ತಿಳಿಸುತ್ತಿದ್ದೇನೆ'' ಎಂದರು.

    Chief minister hd kumaraswamy react on Kaala

    'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್ 'ಕಾಲಾ' ಚಿತ್ರದ ಪರವಾಗಿ ನಿಂತ ಕರ್ನಾಟಕ ಹೈ ಕೋರ್ಟ್

    ಇನ್ನು ಹೈಕೋರ್ಟ್ ನೀಡಿರುವ ಆದೇಶದ ಬಗ್ಗೆ ಮಾತನಾಡಿದ ಸಿಎಂ ''ಕೋರ್ಟ್ ಆದೇಶದ ಪ್ರತಿ ನನ್ನ ಕೈಗೆ ಸೇರಿಲ್ಲ. ಹೈಕೋರ್ಟ್ ನೀಡಿರುವ ಆದೇಶವನ್ನ ಸರ್ಕಾರ ಗೌರವಿಸುತ್ತೆ. ಚಿತ್ರಮಂದಿರಗಳಲ್ಲಿಗೆ ಭದ್ರತೆ ನೀಡುತ್ತೆ'' ಎಂದಿದ್ದಾರೆ.

    ಈ ಮೂಲಕ ಕರ್ನಾಟಕದಲ್ಲಿ 'ಕಾಲಾ' ವಿವಾದ ಮತ್ತಷ್ಟು ತೀವ್ರವಾಗಿದೆ. ಒಂದು ಕಡೆ ನ್ಯಾಯಾಲಯದ ತೀರ್ಪು, ಮತ್ತೊಂದೆಡೆ ಕನ್ನಡ ಸಂಘಟನೆಗಳ ಹೋರಾಟ ಜನರಲ್ಲಿ ಆತಂಕ ಉಂಟು ಮಾಡಿದೆ. ಈ ಮಧ್ಯೆ ಬೆಂಗಳೂರಿನ ಊರ್ವಶಿ ಥಿಯೇಟರ್ ನಲ್ಲಿ 'ಕಾಲಾ' ಚಿತ್ರಕ್ಕೆ ಟಿಕೆಟ್ ನೀಡಿಲ್ಲವೆಂದು ಅಭಿಮಾನಿಗಳು ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

    ಪಾ ರಂಜಿತ್ ನಿರ್ದೇಶಕ 'ಕಾಲಾ' ಜೂನ್ 7 ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ. ರಜನಿಕಾಂತ್ ನಟಿಸಿರುವ ಚಿತ್ರದಲ್ಲಿ ಹುಮಾ ಖುರೇಶಿ ನಾಯಕಿಯಾಗಿದ್ದು, ಧನುಶ್ ನಿರ್ಮಾಣ ಮಾಡಿದ್ದಾರೆ. ಮುಂಬೈನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಈ ಸಿನಿಮಾ ಮಾಡಲಾಗಿದ್ದು, ಸುಮಾರು 140 ಕೋಟಿ ಬಜೆಟ್ ನಲ್ಲಿ ತಯಾರಾಗಿದೆ.

    English summary
    karnataka film chamber president Sa ra Govinda and karave president Praveen Shetty met Chief Minister hd Kumaraswamy and requested him not to release Kaala in karnataka.
    Wednesday, June 6, 2018, 10:26
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X