ಡಾ ವಿಷ್ಣುವರ್ಧನ್ ಅವರನ್ನ ಸ್ಮರಿಸಿದ ರಾಜಕೀಯ ನಾಯಕರು
Recommended Video

ಇಡೀ ಸ್ಯಾಂಡಲ್ ವುಡ್ ಇಂದು ಡಾ ವಿಷ್ಣುವರ್ಧನ್, ನಟ ಉಪೇಂದ್ರ ಹಾಗೂ ನಟಿ ಶ್ರುತಿ ಅವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಳುಗಿದೆ. ವಿಷ್ಣು ಪುಣ್ಯಭೂಮಿಗೆ ಭೇಟಿ ನೀಡಿದ ಅಭಿಮಾನಿಗಳು ಅಗಲಿದ ದಾದಾರನ್ನ ಸ್ಮರಿಸಿದ್ದಾರೆ.
ಮತ್ತೊಂದೆಡೆ ಕರ್ನಾಟಕದ ರಾಜ್ಯದಲ್ಲಿ ರಾಜಕೀಯ ವಿದ್ಯಮಾನಗಳು ಗರಿಗೆದರಿದೆ. ಬಳ್ಳಾರಿ ಶಾಸಕ ಮುನಿಸು ಒಂದು ಕಡೆಯಾದ್ರೆ, ಆಪರೇಷನ್ ಕಮಲದ ಭೀತಿ ಇನ್ನೊಂದು ಕಡೆ. ಹೀಗೆ, ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ರಾಜಕೀಯ ಚದುರಂಗದಾಟ ಬಹಳ ರೋಚಕವಾಗಿದೆ.
ಇದರ ಮಧ್ಯೆ ಕೆಲವು ರಾಜಕಾರಣಿಗಳು ಡಾ ವಿಷ್ಣುವರ್ಧನ್ ಅವರನ್ನ ಸ್ಮರಿಸಿದ್ದಾರೆ. ತಮ್ಮ ರಾಜಕೀಯದ ನಡುವೆ ಬಿಡುವು ಮಾಡಿಕೊಂಡು ಸಾಹಸ ಸಿಂಹ ವಿಷ್ಣುಗೆ ಟ್ವಿಟ್ಟರ್ ಮೂಲಕ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಯಾವೆಲ್ಲಾ ರಾಜಕಾರಣಿಗಳು ವಿಶ್ ಮಾಡಿದ್ದಾರೆ. ಮುಂದೆ ಓದಿ....

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ
ಕರ್ನಾಟಕ ಸರ್ಕಾರದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ವಿಷ್ಣುವರ್ಧನ್ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದಾರೆ. ವಿಶೇಷ ಅಂದ್ರೆ, ವಿಷ್ಣುವರ್ಧನ್ ಅಭಿನಯದ 'ಸೂರ್ಯವಂಶ', 'ಪ್ರೇಮೋತ್ಸವ' ಚಿತ್ರಗಳನ್ನ ಸ್ವತಃ ಕುಮಾರಸ್ವಾಮಿ ಅವರೇ ತಮ್ಮ ನಿರ್ಮಾಣ ಸಂಸ್ಥೆಯಡಿ ನಿರ್ಮಿಸಿದ್ದರು.

ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ಕೂಡ ಕನ್ನಡ ಚಿತ್ರರಂಗದ 'ಯಜಮಾನ'ನ ಜನುಮದಿನಕ್ಕೆ ಟ್ವೀಟ್ ಮಾಡುವ ಮೂಲಕ ಶುಭ ಕೋರಿದ್ದಾರೆ.

ಸಚಿವ ಕೆಜೆ ಜಾರ್ಜ್
ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ಸಚಿವರಾಗಿರುವ ಕೆಜೆ ಜಾರ್ಜ್ ಅವರು ''ಕನ್ನಡ ಚಿತ್ರರಂಗದ ಮೇರು ನಟ, ದಂತಕತೆ, ಅಭಿನಯ ಭಾರ್ಗವ, ಸಾಹಸಸಿಂಹ ಡಾ.ವಿಷ್ಣುವರ್ಧನ್''ಗೆ ವಿಶ್ ಮಾಡಿದ್ದಾರೆ.

ಸಚಿವೆ ಜಯಮಾಲ
ಕನ್ನಡ ಚಿತ್ರರಂಗದ ನಟಿ ಹಾಗೂ ಸಮ್ಮಿಶ್ರ ಸರ್ಕಾರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯಾಗಿರುವ ಡಾ ಜಯಮಾಲ ಅವರು ನಟ ವಿಷ್ಣುವರ್ಧನ್ ಅವರ ಜನುಮದಿನಕ್ಕೆ ವಿಶ್ ಮಾಡಿದ್ದಾರೆ.

ಸೋಮಶೇಖರ್ ರೆಡ್ಡಿ
ಬಳ್ಳಾರಿಯ ಬಿಜೆಪಿ ಶಾಸಕ ಸೋಮಶೇಖರ್ ರೆಡ್ಡಿ ಅವರು ಸ್ಯಾಂಡಲ್ ವುಡ್ ಸಿಂಹ ವಿಷ್ಣು ದಾದಾಗೆ ಟ್ವಿಟ್ಟರ್ ಮೂಲಕ ಬರ್ತಡೇ ವಿಶ್ ಮಾಡಿದ್ದಾರೆ. ''ಡಾ||ವಿಷ್ಣುವರ್ಧನ್ ರವರ ಜನ್ಮದಿನದಂದು ಸ್ಮರಿಸಿ ಕೋಟಿ ನಮನಗಳನ್ನು ಅರ್ಪಿಸುವೆ'' ಎಂದಿದ್ದಾರೆ.


Click it and Unblock the Notifications











