For Quick Alerts
  ALLOW NOTIFICATIONS  
  For Daily Alerts

  ಯಶ್-ರಾಧಿಕಾರ ಹೊಸ ಚಿತ್ರದ ಶೂಟಿಂಗ್ ಗೆ ಗಂಡಾಂತರ

  By Suneetha
  |

  ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರು ಒಂದಾಗಿ ಕಾಣಿಸಿಕೊಳ್ಳುತ್ತಿರುವ ಹೊಸ ಚಿತ್ರ 'ಸಂತು Straight Forward' ಗೆ ಆರಂಭದಲ್ಲೇ ಗಂಡಾಂತರಗಳು ಕಾಡುತ್ತಿವೆ.

  ಈಗಾಗಲೇ ಚಿತ್ರದ ಶೂಟಿಂಗ್ ಭರ್ಜರಿಯಾಗಿ ಸಾಗುತ್ತಿದ್ದು, ಚಿತ್ರದ ಶೂಟಿಂಗ್ ಗೆ ಅಡ್ಡಿಪಡಿಸಿ ಚಿಕ್ಕಬಳ್ಳಾಪುರದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆ ಇತ್ತೀಚೆಗೆ ನಡೆದಿದೆ.[ಅದು ಬಿಟ್ಟು, ಇದು ಬಿಟ್ಟು, ಮತ್ಯಾವುದು? ಯಶ್-ರಾಧಿಕಾ ಚಿತ್ರದ ಹೆಸರು?]

  ಹೌದು ಇತಿಹಾಸ ಪ್ರಸಿದ್ಧ ನಂದಿ ಗ್ರಾಮದ ಭೋಗನಂದೀಶ್ವರ ದೇವಸ್ಥಾನದಲ್ಲಿ ಸ್ಥಳಿಯರು ಮದುವೆ ಸೇರಿದಂತೆ ಶುಭ ಸಮಾರಂಭ ಮಾಡಿಕೊಳ್ಳಲು ಭಾರತೀಯ ಪುರತತ್ವ ಹಾಗೂ ಸರ್ವೇಕ್ಷಣ ಇಲಾಖೆ ಅಡ್ಡಿಪಡಿಸಿ, ಅನುಮತಿ ನಿರಾಕರಿಸುತ್ತದೆ.

  ಆದರೆ ಯಶ್-ರಾಧಿಕಾ ಪಂಡಿತ್ ನಟನೆಯ 'ಸಂತು Straight Forward' ಚಿತ್ರದ ಚಿತ್ರೀಕರಣಕ್ಕೆ ಕೆಲವು ‍ಷರತ್ತುಗಳನ್ನು ವಿಧಿಸಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದನ್ನು ಖಂಡಿಸಿ ಅಲ್ಲಿನ ಗ್ರಾಮಸ್ಥರು ತೀವ್ರ ಪ್ರತಿಭಟನೆ ನಡೆಸಿದರು.[ಯಶ್-ರಾಧಿಕಾ ಪಂಡಿತ್ ಹೊಸ ಚಿತ್ರಕ್ಕೆ ಸ್ಟೈಲಿಷ್ ವಿಲನ್ ಎಂಟ್ರಿ]

  Chikballapur villagers protests shooting of yash's next

  ಇವರ ಪ್ರತಿಭಟನೆಯಿಂದಾಗಿ ಸುಮಾರು 4 ಘಂಟೆಗಳಿಗೂ ಹೆಚ್ಚು ಕಾಲ ಶೂಟಿಂಗ್ ಸ್ಥಗಿತಗೊಂಡಿದ್ದು, ನಟ ರಾಕಿಂಗ್ ಸ್ಟಾರ್ ಯಶ್ ಅವರು ಸೇರಿ ನಿರ್ಮಾಪಕ ಕೆ.ಮಂಜು ಅವರು ಗ್ರಾಮದ ಜನರಲ್ಲಿ ವಿನಂತಿಸಿಕೊಂಡಿದ್ದರೂ ಜನ ಪ್ರತಿಭಟನೆ ಮುಂದುವರೆಸಿದ್ದರು.['ಅಭಿಮಾನಿಗಳೇ ಏಪ್ರಿಲ್ ಫೂಲ್ ಆಗಬೇಡಿ' ಅಂತ ಯಶ್ ಯಾಕಂದ್ರು?]

  ಚಿತ್ರತಂಡದವರ ಪ್ರಯತ್ನ ವಿಫಲವಾದಾಗ ಕೊನೆಗೆ ಚಿಕ್ಕಬಳ್ಳಾಪುರ ಪೊಲೀಸ್ ವೃತ್ತ ನಿರೀಕ್ಷಕ ಕೆ.ಪಿ ಸತ್ಯನಾರಾಯಣ ನೇತೃತ್ವದಲ್ಲಿ ಸಂಧಾನ ಸಭೆ ನಡೆದು, ಭಾರತೀಯ ಪುರತತ್ವ ಇಲಾಖೆ ಅಧಿಕಾರಿಗಳನ್ನು ಕರೆಸಿ ಮದುವೆಗೆ ಅನುಮತಿ ಕೊಡಿಸಲು ಪ್ರಯತ್ನ ಮಾಡುವುದಾಗಿ ಗ್ರಾಮಸ್ಥರ ಮನವೊಲಿಸಿದ ನಂತರ ದೇವಸ್ಥಾನದಲ್ಲಿ ಚಿತ್ರೀಕರಣ ಆರಂಭಿಸಲಾಯಿತು.

  English summary
  Chikballapur villagers protests shooting of yash and Radhika Pandit starrer 'Santu Strite Forward'. The movie is directed by Mahesh Rao and Produced by K Manju.
  Saturday, April 30, 2016, 14:28
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X