ಬೇರೆ ಹೀರೋಗಳಿಗೆ ಫ್ಯಾನ್ಸ್ ಇರ್ತಾರೆ ಆದರೆ ದೊಡ್ಮನೆಗೆ ಭಕ್ತರು ಇರ್ತಾರೆ ;ಪ್ರದೀಪ್ ಈಶ್ವರ್..!
ಚಿಕ್ಕಬಳ್ಳಾಪುರದ ಶಾಸಕ ಪ್ರದೀಪ್ ಈಶ್ವರ್ ಅವರ ಬಗ್ಗೆ ಒಬ್ಬೊಬ್ಬರಲ್ಲಿ ಒಂದೊಂದು ಅಭಿಪ್ರಾಯಗಳಿವೆ. ಈ ಅಭಿಪ್ರಾಯಗಳು ಏನೇ ಇರಲಿ ಅದರಾಚೆ ಪ್ರದೀಪ್ ಈಶ್ವರ್ ಅವರದ್ದು ವರ್ಣರಂಜಿತ ವ್ಯಕ್ತಿತ್ವ ಎನ್ನುವುದರಲ್ಲಿ ಎರಡು ಮಾತಿಲ್ಲ.
ತಮ್ಮೆದುರು ಯಾರೇ ಇರಲಿ ತಮ್ಮ ಮಾತುಗಳಿಂದ ಮೋಡಿ ಮಾಡುವ ಸಾಮರ್ಥ್ಯ ಹೊಂದಿರುವ ಪ್ರದೀಪ್ ಈಶ್ವರ್, ಮೊನ್ನೆ ಆರ್.ಚಂದ್ರು ನಿರ್ಮಾಣದಡಿ ಸಿದ್ಧವಾಗ್ತಿರುವ ಫಾದರ್ ಚಿತ್ರದ ಮುಹೂರ್ತ ಸಮಾರಂಭಕ್ಕೆ ಆಗಮಿಸಿದ್ದರು. ಚಿತ್ರತಂಡಕ್ಕೆ ಶುಭ ಕೋರಿದರು. ಇದೇ ಸಮಯದಲ್ಲಿ ಕನ್ನಡ ಚಿತ್ರರಂಗದ ದೊಡ್ಮನೆಯ ಮೇಲೆ ತಮಗೆ ಇರುವ ಪ್ರೀತಿಯನ್ನು ಜಗಜ್ಜಾಹೀರು ಮಾಡಿದರು ಪ್ರದೀಪ್ ಈಶ್ವರ್

ಹೌದು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರದೀಪ್ ಈಶ್ವರ್, ಬೇರೆ ಹೀರೋಗಳಿಗೆ ಫ್ಯಾನ್ಸ್ ಇರ್ತಾರೆ ಆದರೆ ದೊಡ್ಮನೆಗೆ ಭಕ್ತರು ಇರ್ತಾರೆ ಎಂದರು. ಅದು ದೊಡ್ಮನೆಯ ತಾಖತ್ತು ಎಂದರು. ಮುಂದುವರೆದು ಮಾತನಾಡಿದ ಶಾಸಕರು ಕರ್ನಾಟಕದಲ್ಲಿ ನನಗೆ ಇಬ್ಬರು ಇಷ್ಟ ಶಿವಣ್ಣ ಸರ್ ಒಬ್ಬರು ನನಗೆ ಜನ್ಮ ಕೊಟ್ಟ ಅಪ್ಪ ನಾನು ಇಷ್ಟ ಪಟ್ಟ ಅಪ್ಪು ಇವರಿಬ್ಬರೂ ನನಗೆ ತುಂಬಾ ಇಷ್ಟ ಸರ್ ಅಂದರು
ಇದೇ ಸಮಯದಲ್ಲಿ ಆರ್ ಚಂದ್ರು ಶ್ರಮವನ್ನು ಕೊಂಡಾಡಿದ ಪ್ರದೀಪ್ ಈಶ್ವರ್, ಫ್ಯಾಮಿಲಿಗೆ ಹೊಸ ವ್ಯಾಖ್ಯಾನ ನೀಡಿದರು. ಫ್ಯಾಮಿಲಿ ಅಂದರೆ ಫಾದರ್ ಆಂಡ್ ಮದರ್ ಐ ಲವ್ ಯೂ ಅಂದರು.

ಇನ್ನೂ ಕರ್ನಾಟಕದಲ್ಲಿರುವ ಹುಡುಗಿಯರಿಗೆ ಇದೇ ಸಮಯದಲ್ಲಿ ತಂದೆಯ ಮಹತ್ವವನ್ನು ತಿಳಿಸಿಕೊಡುವ ಪ್ರಯತ್ನ ಮಾಡಿದ ಪ್ರದೀಪ್ ಈಶ್ವರ್, ಚಿಕ್ಕ ವಯಸ್ಸಿನಲ್ಲಿ ತಂದೆ ತಮ್ಮ ಮಗಳನ್ನ ಗಾಡಿಯ ಮುಂಭಾಗದಲ್ಲಿ ಕೂರಿಸಿಕೊಳ್ತಾರೆ ಯಾಕೆಂದರೆ ತಂದೆಗೆ ತನ್ನ ಮಗಳು ಯಾವತ್ತೂ ಮುಂದೆ ಇರಬೇಕು ಎನ್ನುವ ಆಸೆ ಇರುತ್ತೆ ಆದರೆ ಅದೇ ಬಾಯ್ ಫ್ರೆಂಡ್ ಹುಡುಗಿಯನ್ನ ಹಿಂದೆ ಕೂರಿಸಿಕೊಂಡು ಬೈಕ್ ಚಲಾಯಿಸುತ್ತಾನೆ. ಯಾಕೆಂದರೆ ಅವನಿಗೆ ಹುಡುಗಿ ಯಾವತ್ತೂ ತನ್ನ ಹಿಂದೆ ಇರಬೇಕು ಎಂಬ ಆಸೆ ಇರುತ್ತೆ ಎಂದರು. ತಂದೆ ಮತ್ತು ಬಾಯ್ ಫ್ರೆಂಡ್ ನಡುವೆ ಇರುವ ವ್ಯತ್ಯಾಸ ಇದೆ ಅಂದರು.
ಪ್ರದೀಪ್ ಈಶ್ವರ್ ಅವರ ಈ ಮಾತುಗಳಿಗೆ ಸಹಜವಾಗಿ ಸಭಾಂಗಣ ನಗೆಗಡಲಲ್ಲಿ ತೇಲಿತ್ತು. ಶಿವಣ್ಣ ಮತ್ತು ಗೀತಾ ಶಿವರಾಜ್ ಕುಮಾರ್ ಅವರಿಗೂ ಕೂಡ ನಗು ತಡೆದುಕೊಳ್ಳಲು ಸಾಧ್ಯವಾಗಲಿಲ್ಲ.
ಇನ್ನೂ ಇದೇ ಸಮಯದಲ್ಲಿ ಹಿಟ್ಟು ಪ್ಲಾಫ್ ಜೊತೆ ಸಂಬಂಧ ಬೇಡ, ನೀವೂ ನಾನು ಬೆಂಗಳೂರಿಗೆ ಸೋಲೋಕೆ ಎಂದೇ ಬಂದಿದ್ದು, ಹೀಗಾಗಿ ಗೆಲುವು ನಮಗೆ ಕಾಂಪ್ಲಿಮೆಂಟರಿ ಅಂದರು.ಗೆಲ್ಲೋಕೆ ಬಂದವರೆಲ್ಲ ಬೆಂಗಳೂರಿನಲ್ಲಿ ಸೋಲ್ತಿದ್ದಾರೆ ನಾವು ಸೋಲೋಕೆ ಬಂದು ಗೆಲ್ತಿದ್ದೀವಿ, ಗೆಲ್ಲಬೇಕು ಎಂದಾಗ ಭಯ ಬರುತ್ತೆ.. ಭಯ ಬಂದರೆ ಸೋತು ಹೋಗ್ತೀವಿ, ಸೋಲೋಕೆ ರೆಡಿ ಇದ್ದಾಗ ಭಯ ಬರಲ್ಲ ಗೆದ್ದು ಬಿಡ್ತೀವಿ ನಾನು ಹಂಗೆ ಅಲ್ಲವಾ ಗೆದ್ದಿದ್ದು ಎಂದರು. ಧೈರ್ಯವಾಗಿರಿ ನೀವು ಗೆದ್ದೇ ಗೆಲ್ತೀರಾ ಎಂದು ಆರ್.ಚಂದ್ರು ಅವರಿಗೆ ಹೇಳಿದರು
ಮಾತು ಮುಗಿಸುವ ಮುನ್ನ, ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ಎರಡು ಮನೆ ಇರುತ್ತೆ ಒಂದು ಅವರ ಮನೆ ಮತ್ತೊಂದು ದೊಡ್ಮನೆ ಎಂದು ಹೇಳಿದ ಪ್ರದೀಪ್ ಈಶ್ವರ್, ಇದೇ ವೇಳೆ ಗೀತಾ ಶಿವರಾಜ್ ಕುಮಾರ್ ಅವರು ಎಂ.ಪಿ ಆಗುವುದು ಖಚಿತ..ನಿಶ್ಚಿತ.. ಎಂಬ ಭವಿಷ್ಯವಾಣಿಯನ್ನು ಕೂಡ ಹೇಳಿದರು


Click it and Unblock the Notifications











