ಚಿಕ್ಕಮಗಳೂರು ಕೋರ್ಟ್ ನಿಂದ ಸುದೀಪ್ ಗೆ ಅರೆಸ್ಟ್ ವಾರೆಂಟ್ ಜಾರಿ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೆ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿ ಬರುತ್ತಿದ್ದ ವಾರಸ್ದಾರ ಧಾರಾವಾಹಿಯ ಶೂಟಿಂಗ್ ಗಾಗಿ ಬಳಸಿದ್ದ ಮನೆ ಬಾಡಿಗೆ ಕಟ್ಟದ ಹಿನ್ನಲೆಯಲ್ಲಿ ಅರೆಸ್ಟ್ ವಾರೆಂಟ್ ಜಾರಿ ಮಾಡಲಾಗಿದೆ.

ನಿನ್ನೆ ಮಂಗಳವಾರ(ಮಾರ್ಚ್ 26) ಕೋರ್ಟ್ ಗೆ ಹಾಜರಾಗದ ಕಾರಣ ಚಿಕ್ಕಮಗಳೂರಿನ ಜೆಎಂಎಫ್ ಸಿ ನ್ಯಾಯಾಲಯದಿಂದ ಅರೆಸ್ಟ್ ವಾರೆಂಟ್ ಜಾರಿಯಾಗಿದೆ. ದೀಪಕ್ ಮಯೂರ್ ಎಂಬುವವರು ಸುದೀಪ್ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ.

ಈ ಹಿಂದೆ ಖಾಸಗಿ ವಾಹಿನಿಯಲ್ಲಿ ಸುದೀಪ್ ನಿರ್ಮಾಣ ಸಂಸ್ಥೆ ಕಿಚ್ಚ ಕ್ರಿಯೇಷನ್ಸ್ ನಲ್ಲಿ ವಾರಸ್ದಾರ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು. ಶೂಟಿಂಗ್ ಗಾಗಿ ದೀಪಕ್ ಮಯೂರ್ ಪಟೇಲ್ ಅವರ ಮನೆ ಹಾಗೂ ತೋಟವನ್ನು ಬಾಡಿಗೆ ಪಡೆದುಕೊಳ್ಳಲಾಗಿತ್ತು. ದೀಪಕ್ ಅವರ ಮನೆ ಹಾಗೂ ತೋಟವನ್ನು ಹಾನಿ ಮಾಡಿದ್ದಲ್ಲದೆ ಬಾಡಿಗೆ ನೀಡಿಲ್ಲ ಎಂದು ದೀಪಕ್, ಸುದೀಪ್ ವಿರುದ್ದ ದೂರು ದಾಖಲಿಸಿದ್ದರು.

Mangalore jmfc court issued arrest warrant to sudeep

ಸದ್ಯ ಧಾರಾವಾಹಿ ಪ್ರಸಾರ ನಿಂತಿದೆ. ಆದ್ರೆ, ಧಾರಾವಾಹಿ ಶೂಟಿಂಗ್ ಸಮಯದಲ್ಲಿ ಕಾಫಿ ತೋಟಕ್ಕೆ ಸಾಕಷ್ಟು ಹಾನಿಯಾಗಿದ್ದು, ಹಾನಿಯಾದ ಹಿನ್ನೆಲೆಯಲ್ಲಿ ಒಟ್ಟು 1.50 ಕೋಟಿ ರೂ. ನಷ್ಟವಾಗಿದೆ. ಈ ಹಣವನ್ನು ನೀಡಬೇಕೆಂದು ದೀಪಕ್ ಮಯೂರ್ ಧಾರಾವಾಹಿ ನಿರ್ಮಾಣ ತಂಡಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಈ ಬೇಡಿಕೆಯನ್ನು ಸುದೀಪ್ ಕ್ರಿಯೇಷನ್ಸ್ ತಿರಸ್ಕರಿಸಿತ್ತು.

More from Filmibeat

English summary
Chikkamagalur jmfc court issued a arrest warrant to kannada actor Sudeep. deepak mayur Complaint filed against kiccha sudeep has not paid Rs 1,50,000 for the house rent.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X