ದರ್ಶನ್ ಸೆರೆಹಿಡಿದ ಗಜನಿಗೆ ಚಿಕ್ಕಣ್ಣ ಕೊಟ್ಟ ಬೆಲೆ ಎಷ್ಟು ಗೊತ್ತಾ?

Recommended Video

ಇದು ಚಿಕ್ಕಣ್ಣನಿಗೆ ದರ್ಶನ್ ಮೇಲಿರುವ ಅಭಿಮಾನ..? | FILMIBEAT KANNADA

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಪ್ರಾಣಿ ಪ್ರೀತಿ ಎಲ್ಲರಿಗೂ ಗೊತ್ತಿರುವುದೆ. ಸಿನಿಮಾ ಬಿಟ್ಟರೆ ಪ್ರಾಣಿ, ಪಕ್ಷಿಗಳ ಜೊತೆ ದಚ್ಚು ಫಾರ್ಮ್ ಹೌಸ್ ನಲ್ಲಿ ಬ್ಯುಸಿಯಾಗಿರುತ್ತಾರೆ. ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿರುವ ದರ್ಶನ್ ಆಗಾಗ ಅರಣ್ಯ ಸಂಚಾರ ಮಾಡುತ್ತಾರೆ.

ಕರ್ನಾಟಕ ಅರಣ್ಯ ಇಲಾಖೆಯ ರಾಯಬಾರಿಯಾಗಿರುವ ಡಿ ಬಾಸ್ ಆಗಾಗ ಅರಣ್ಯ ಸಂಚಾರ ಮಾಡಿ ಪ್ರಾಣಿಗಳನ್ನು ನೋಡಿ ಆನಂದಿಸುವ ಜೊತೆಗೆ ಸುಂದರ ಫೋಟೋಗಳನ್ನು ಸೆರೆಹಿಡಿಯುತ್ತಾರೆ. ವಿಶೇಷ ಅಂದ್ರೆ ದರ್ಶನ್ ಸೆರೆಹಿಡಿದ ಪ್ರಾಣಿಗಳ ಫೋಟೋ ಭಾರಿ ಮೊತ್ತಕ್ಕೆ ಮಾರಾಟವಾಗುತ್ತವೆ.

ವಿಶೇಷ ಅಂದ್ರೆ ಈ ಬಾರಿ ದಚ್ಚು ಕ್ಲಿಕ್ಕಿಸಿದ ಆನೆ ಫೋಟೋವನ್ನು ಹಾಸ್ಯ ನಟ ಚಿಕ್ಕಣ್ಣ ಖರೀದಿಸಿದ್ದಾರೆ. ಅಚ್ಚರಿಕರ ಸಂಗತಿ ಅಂದ್ರೆ ಚಿಕ್ಕಣ್ಣ ಬರೋಬ್ಬರಿ 1ಲಕ್ಷ ಕೊಟ್ಟು ಪಡೆದುಕೊಂಡಿದ್ದಾರೆ. ದರ್ಶನ್ ಸ್ವತಹ ಅವರ ಕೈಯಿಂದನೆ ಈ ಫೋಟೋವನ್ನು ಚಿಕ್ಕಣ್ಣ ಅವರಿಗೆ ನೀಡಿದ್ದಾರೆ.

Chikkanna who bought an elephant photo captured by Darshan

ದರ್ಶನ್ ಸೆರೆಹಿಡಿದ ಫೋಟೋಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತೆ. ಫೋಟೋಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಅರಣ್ಯ ಇಲಾಖೆಕೆ ನೀಡಲಾಗುತ್ತೆ. ಈ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

"ನಮ್ಮ ಚಿಕ್ಕಣ್ಣ ನಾನು ಸೆರೆಹಿಡಿದಿದ್ದ ಆನೆಯ ಫೋಟೋವನ್ನು ಅರಣ್ಯ ಇಲಾಖೆಯ ನೆರವಿಗಾಗಿ 1 ಲಕ್ಷ ರೂಪಾಯಿಗಳನ್ನು ನೀಡಿ ಖರೀದಿ ಮಾಡಿರುವುದು ಶ್ಲಾಘನೀಯ. ಅವರ ಸಾಮಾಜಿಕ ಕಳಕಳಿಯ ಕಾರ್ಯಕ್ಕೆ ನನ್ನ ಕೃತಘ್ನತೆಗಳು" ಎಂದು ಚಿಕ್ಕಣ್ಣ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಅನೇಕರ ನಟರು ದರ್ಶನ್ ಸೆರೆಹಿಡಿದ ಫೋಟೋವನ್ನು ಖರೀದಿ ಮಾಡಿದ್ದಾರೆ. ಇತ್ತೀಚಿಗಷ್ಟೆ ನಿರ್ಮಾಪಕ ಉಮಾಪತಿ ದರ್ಶನ್ ಸೆರೆಹಿಡಿದ ಫೋಟೋವನ್ನು 10ಸಾವಿರ ಕೊಟ್ಟು ಕೊಂಡುಕೊಂಡಿದ್ದರು. ಆ ಫೋಟೋವನ್ನು ನಟ ಶ್ರೀಮುರಳಿ ಅವರಿಗೆ ಗಿಫ್ಟಾಗಿ ನೀಡಿದ್ದರು.

More from Filmibeat

English summary
Kannada actor Chikkanna who bought an elephant photo captured by Darshan. Chikkanna paid to one lakhs for this photo.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X