For Quick Alerts
  ALLOW NOTIFICATIONS  
  For Daily Alerts

  ಹಾಸ್ಯ ನಟ ಚಿಕ್ಕಣ್ಣ ಹಾಕಿದ ಚಾಲೆಂಜ್ ಸ್ವೀಕರಿಸ್ತಾರಾ ನಟ ಅಜಯ್ ರಾವ್?

  |

  'ಕೃಷ್ಣ' ಖ್ಯಾತಿಯ ಅಜಯ್ ರಾವ್‌ಗೆ ಹಾಸ್ಯ ನಟ ಚಿಕ್ಕಣ್ಣ ಡೈಲಾಗ್ ಚಾಲೆಂಜ್ ಹಾಕಿದ್ದಾರೆ. ಚಿಕ್ಕಣ್ಣ ನಟಿಸಿರುವ 'ಕೃಷ್ಣ ಟಾಕೀಸ್' ಚಿತ್ರದಲ್ಲಿ ಆರ್‌ಸಿಬಿ ಕುರಿತಾದ ಡೈಲಾಗ್‌ವೊಂದಿದೆ. ಇತ್ತೀಚಿಗಷ್ಟೆ ಈ ಡೈಲಾಗ್ ಟೀಸರ್ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ.

  ಕಳೆದ ಮೂರ್ನಾಲ್ಕು ದಿನದಿಂದ ಚಿಕ್ಕಣ್ಣ ಅವರ ಆರ್‌ಸಿಬಿ ಡೈಲಾಗ್ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಐಪಿಎಲ್ ಹೊಸ ಆವೃತ್ತಿ ಶುರುವಾಗುವ ಸಮಯದಲ್ಲಿ ಈ ಡೈಲಾಗ್ ರಿಲೀಸ್ ಮಾಡಲಾಗಿದ್ದು, ಸನ್ನಿವೇಶಕ್ಕೆ ತಕ್ಕಂತೆ ಆರ್‌ಸಿಬಿ ಅಭಿಮಾನಿಗಳು ಡೈಲಾಗ್ ವೈರಲ್ ಮಾಡಿದ್ದಾರೆ.

  ನಟನೆ ಜೊತೆಗೆ ಹೊಸ ವ್ಯವಹಾರ ಆರಂಭಿಸಿದ ನಟ ಚಿಕ್ಕಣ್ಣನಟನೆ ಜೊತೆಗೆ ಹೊಸ ವ್ಯವಹಾರ ಆರಂಭಿಸಿದ ನಟ ಚಿಕ್ಕಣ್ಣ

  ಇದೀಗ, ಚಿಕ್ಕಣ್ಣ ಅವರು ಅಜಯ್ ರಾವ್ ಅವರಿಗೆ ಈ ಡೈಲಾಗ್ ಹೇಳುವಂತೆ ಚಾಲೆಂಜ್ ಮಾಡಿದ್ದಾರೆ. ಚಿಕ್ಕಣ್ಣ ಅವರ ಚಾಲೆಂಜ್‌ನ ನಾಯಕ ನಟ ಅಜಯ್ ರಾವ್ ಸಹ ಸ್ವೀಕರಿಸಿದ್ದಾರೆ. ಸ್ವತಃ ಅಜಯ್ ರಾವ್, ಹಾಸ್ಯ ನಟನ ಚಿಕ್ಕಣ್ಣ ಅವರು ನೀಡಿರುವ ಚಾಲೆಂಜ್‌ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.

  ಯಾವುದು ಆ ಡೈಲಾಗ್?

  ''ಎಬಿಸಿಡಿ ಹೇಳುವುದು ಬೇಕಾದರೆ ಬಿಡ್ತೀವಿ, ಆದರೆ ಎಬಿಡಿ ಎಬಿಡಿ ಅಂತ ಕೂಗುವುದು ಬಿಡಲ್ಲ...

  ಆರ್ ಆರು ಜನ ಹುಡುಗಿರ್ನಾ ಬೇಕಾದ್ರು ಚೇಂಜ್ ಮಾಡ್ತೀವಿ, ಆದರೆ ಆರ್‌ಸಿಬಿ ಫಾರ್ ಲೈಫ್ ಎಂಬ ಸ್ಲೋಗನ್ ಮಾತ್ರ ಬಿಡಲ್ಲ....

  ಕೋಳಿ ತಿನ್ನುವುದು ಬೇಕಾದರೂ ಬಿಡ್ತೀವಿ, ಆದರೆ ಕೊಹ್ಲಿ ಮೇಲಿನ ಅಭಿಮಾನ ಬಿಡಲ್ಲ....

  ಗೆದ್ರು, ಸೋತ್ರು, ಗೋಲಿ ಆಡೋ ಮಕ್ಕಳು ಅವಮಾನ ಮಾಡಿದ್ರು, ಅಕ್ಕ ಪಕ್ಕ ಸ್ಟೇಟ್ಸ್ ಅವರು ಆಡ್ಕೊಂಡ್ರು ಬೆಟ್ಟಿಂಗ್‌ನಲ್ಲಿ ದುಡ್ಡು ಸೋತ್ರು, ಮನೆಯವರು ಮುಖಕ್ಕೆ ಉಗಿದ್ರು, ನಾವು ಕೇರ್ ಮಾಡಲ್ಲ.....

  ಇದು ಗೆಲ್ಲೊ ಕುದುರೆ ಹಿಂದೆ ಬೀಳೋ ಜಗತ್ತು, ಗೆದ್ರು, ಸೋತ್ರು ಆರ್‌ಸಿಬಿಗೆ ನಮ್ಮ ನಿಯತ್ತು ಅಂತ ಸ್ಟೇಟಸ್ ಹಾಕ್ಕೊಂಡು, ನಮ್ಮ ಟೀಂ ಪಾಯಿಂಟ್ಸ್ ಟೇಬಲ್‌ನಲ್ಲಿ ಲಾಸ್ಟ್‌ನಲ್ಲಿದ್ರು, ಪಾಯಿಂಟ್ಸ್ ಟೇಬಲ್‌ನಲ್ಲಿ ನಮ್ಮ ಟೀಂನ ಟಾಪ್‌ನಲ್ಲಿ ಇಟ್ಕೊಂಡು, ಪ್ರತಿ ಸಲ ಐಪಿಎಲ್ ಬಂದಾಗಲೂ ಈ ಸಲ ಕಪ್ ನಮ್ದೆ, ಈ ಸಲ ಕಪ್ ನಮ್ದೆ ಅಂತ ಕಾಲರ್ ಎತ್ಕೊಂಡು ಓಡಾಡೋ ಆರ್‌ಸಿಬಿ ಫ್ಯಾನ್ಸ್ ಕಣೋ ನಾವು.

  40 ಸೆಕೆಂಡ್ ನಾನ್‌ಸ್ಟಾಪ್ ಚಿಕ್ಕಣ್ಣ ಈ ಡೈಲಾಗ್ ಹೊಡೆದಿದ್ದಾರೆ. ಈಗ ಅಜಯ್ ರಾವ್ ತಮ್ಮದೇ ಸ್ಟೈಲ್‌ನಲ್ಲಿ ಈ ಡೈಲಾಗ್ ಹೇಗೆ ಹೇಳ್ತಾರೆ ಎನ್ನುವುದು ಕುತೂಹಲ ಮೂಡಿಸಿದೆ.

  ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿದ ನಟ ಅಜಯ್ ರಾವ್ವಿಜಯನಗರ ಜಿಲ್ಲೆ ರಚನೆ ಬೆಂಬಲಿಸಿದ ನಟ ಅಜಯ್ ರಾವ್

  ಇನ್ನುಳಿದಂತೆ ಕೃಷ್ಣ ಟಾಕೀಸ್ ಸಿನಿಮಾದಲ್ಲಿ ಅಜಯ್ ರಾವ್ ನಾಯಕ ನಟನಾಗಿ ನಟಿಸಿದ್ದು, ಚಿಕ್ಕಣ್ಣ ಹಾಸ್ಯ ಕಲಾವಿದನಾಗಿ ಕಾಣಿಸಿಕೊಂಡಿದ್ದಾರೆ. ವಿಜಯ್ ಆನಂದ್ ಈ ಚಿತ್ರ ನಿರ್ದೇಶಿಸಿದ್ದು, ಇದು ಹಾರರ್ ಥ್ರಿಲ್ಲಿಂಗ್ ಸಿನಿಮಾ ಆಗಿದೆ.

  Recommended Video

  ಕೊರೊನಾ ಸೋಂಕಿಗೆ ಒಳಗಾದ ನಟ ಪ್ರಜ್ವಲ್ ದೇವರಾಜ್ ಮತ್ತು ಪತ್ನಿ ರಾಗಿಣಿ | Filmibeat Kannada

  ಸಿಂಧು ಲೋಕನಾಥ್, ಅಪೂರ್ವ, ಯಶ್ ಶೆಟ್ಟಿ, ನಿರಂತ್, ಶೋಭ್‌ರಾಜ್, ಮಂಡ್ಯ ರಮೇಶ್, ಪ್ರಮೋದ್ ಶೆಟ್ಟಿ ಸೇರಿದಂತೆ ಹಲವರು ಈ ಚಿತ್ರದಲ್ಲಿ ನಟಿಸಿದ್ದಾರೆ. ವಿ ಶ್ರೀಧರ್ ಸಂಭ್ರಮ್ ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಏಪ್ರಿಲ್ 9 ರಂದು ಈ ಚಿತ್ರ ತೆರೆಕಾಣುತ್ತಿದೆ. ಅದೇ ದಿನ ಐಪಿಎಲ್ ಆರಂಭವಾಗುತ್ತಿದೆ.

  English summary
  Kannada comedy actor Chikkanna has Challenge to Actor Ajai Rao.
  Thursday, April 1, 2021, 15:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X