For Quick Alerts
  ALLOW NOTIFICATIONS  
  For Daily Alerts

  ದರ್ಶನ್ ಗೆ ಕ್ಯೂಟ್ ಆದ ಉಡುಗೊರೆ ಕೊಟ್ಟ ಚಿಕ್ಕಣ್ಣ

  |

  ನಟ ದರ್ಶನ್‌ ಗೆಳೆಯರ ಬಳಗ ದೊಡ್ಡದು. ಸಿನಿಮಾರಂಗದ ಒಳಗಿನವರು, ಹೊರಗಿನವರು ಸಾಕಷ್ಟು ಜನ ಗೆಳೆಯರಿದ್ದಾರೆ ದರ್ಶನ್‌ಗೆ.

  ಚಿಕ್ಕಣ್ಣನ ಮನೆಗೆ ಭೇಟಿ ನೀಡಿ ಭರ್ಜರಿ ಊಟ ಮಾಡಿದ ದರ್ಶನ್ | Darshan | Chikkanna | Filmibeat Kannada

  ಹಿರಿ ನಟ-ಕಿರಿ ನಟ, ಪೋಷಕ ನಟ-ಹಾಸ್ಯ ನಟ ಎಂಬೆಲ್ಲಾ ಭೇದವಿಲ್ಲದೆ ಎಲ್ಲರೊಂದಿಗೆ ಸ್ನೇಹ ಹೊಂದಿದ್ದಾರೆ ದರ್ಶನ್. ಸ್ಯಾಂಡಲ್‌ವುಡ್‌ನಲ್ಲಿ ದರ್ಶನ್ ರಸ ಆತ್ಮೀಯ ಗೆಳೆಯರಲ್ಲೊಬ್ಬರಾದ ಚಿಕ್ಕಣ್ಣನ ಮನೆಗೆ ಭೇಟಿ ನೀಡಿದ್ದರು.

  ನಟ ಚಿಕ್ಕಣ್ಣ ಮೈಸೂರಿನ ಆರ್‌ಟಿ ನಗರದ ಬಳಿ ಶ್ರೀ ಚಾಮುಂಡೇಶ್ವರಿ ಕೋಳಿ-ಕುರಿ ಫಾರ್ಮ್‌ ಒಂದನ್ನು ಮಾಡಿದ್ದು, ಆ ಫಾರಂ ಗೆ ಸಹ ಭೇಟಿಕೊಟ್ಟು, ಚಿಕ್ಕಣ್ಣನ ಮನೆಯಲ್ಲಿ ಆತಿಥ್ಯವನ್ನು ಸಹ ಸ್ವೀಕರಿಸಿದ್ದಾರೆ. ದರ್ಶನ್ ಜೊತೆಯಲ್ಲಿ ನಟ ಪ್ರಜ್ವಲ್ ದೇವರಾಜ್, ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಸಹ ಜೊತೆಗಿದ್ದರು.

  ಮನೆಗೆ ಬಂದ ಅತಿಥಿಗೆ ಮುದ್ದಾದ ಉಡುಗೊರೆಯೊಂದನ್ನು ನೀಡಿದ್ದಾರೆ ಚಿಕ್ಕಣ್ಣ. ಒಂದು ಕುರಿಮರಿಯನ್ನು ದರ್ಶನ್‌ಗೆ ಪ್ರೀತಿಯಿಂದ ಕೊಟ್ಟಿದ್ದಾರೆ. ಪ್ರಾಣಿ ಪ್ರಿಯ ದರ್ಶನ್, ತಮ್ಮದೇ ಒಂದು ಫಾರಂ ಮಾಡಿಕೊಂಡಿದ್ದು, ಸಾಕಷ್ಟು ಪ್ರಾಣಿಗಳನ್ನು ಸಾಕಿದ್ದಾರೆ, ಈ ಕುರಿಮರಿಯೂ ಆ ಫಾರಂ ಸೇರಲಿದೆ.

  ಈ ಹಿಂದೆ ನಟ ದರ್ಶನ್ ಅವರೊಂದಿಗೆ ಸಫಾರಿಗಳಲ್ಲಿ ಭಾಗವಹಿಸಿದ್ದರು ನಟ ಚಿಕ್ಕಣ್ಣ. ದರ್ಶನ್ ಸೆರೆಹಿಡಿದಿದ್ದ ವನ್ಯ ಜೀವಿಗಳ ಛಾಯಾಚಿತ್ರವನ್ನು ದುಬಾರಿ ಮೊತ್ತ ಖರೀದಿಸಿದ್ದರು. ಛಾಯಾಚಿತ್ರ ಮಾರಿದ ಹಣವನ್ನು ಪ್ರಾಣಿ ರಕ್ಷಣೆ ಸಂಘ-ಸಂಸ್ಥೆಗಳಿಗೆ ದಾನ ಮಾಡುವ ಹವ್ಯಾಸವಿಟ್ಟುಕೊಂಡಿದ್ದಾರೆ ನಟ ದರ್ಶನ್.

  ಇನ್ನು ಚಿಕ್ಕಣ್ಣ ಅವರ ಸಿನಿಮಾಗಳ ವಿಷಯಕ್ಕೆ ಬರುವುದಾದರೆ, ಹಾಸ್ಯ ನಟರಾಗಿದ್ದ ಚಿಕ್ಕಣ್ಣ ಈಗ ನಾಯಕ ನಟರಾಗುತ್ತಿದ್ದಾರೆ. 'ಉಪಾಧ್ಯಕ್ಷ' ಸಿನಿಮಾದಲ್ಲಿ ಪೂರ್ಣ ಪ್ರಮಾಣದ ನಾಯಕರಾಗುತ್ತಿದ್ದಾರೆ ಚಿಕ್ಕಣ್ಣ.

  English summary
  Actor Chikkanna gifted a cute lamb to Darshan. Chikkanna has a farm in Mysuru, Darshan and friends visited Chikkanna's farm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X