ಹಾಸ್ಯ ನಟ ಚಿಕ್ಕಣ್ಣ ಈಗ ಸಿನಿಮಾ ನಿರ್ಮಾಪಕ!

By Naveen

ಹಾಸ್ಯ ನಟ ಚಿಕ್ಕಣ್ಣ ಈಗ ಸಿನಿಮಾ ನಿರ್ಮಾಪಕ ಆಗಿದ್ದಾರೆ. ಈ ಸುದ್ದಿ ಕೇಳುತ್ತಿದ್ದ ಹಾಗೆ ಅನೇಕರಿಗೆ ಆಶ್ಚರ್ಯ ಆಗಬಹುದು. ಆದರೂ ಈ ಸುದ್ದಿ ನಿಜ. ಹಾಸ್ಯ ಪಾತ್ರಗಳಿಲ್ಲಿ ನಟಿಸಿ ಎಲ್ಲರನ್ನು ನಗಿಸುತ್ತಿದ್ದ ಚಿಕ್ಕಣ್ಣ ಈಗ ಪ್ರೊಡ್ಯೂಸರ್ ಆಗಿದ್ದಾರೆ.

ಕನ್ನಡದ ಸ್ಟಾರ್ ನಟರಾದ ಯಶ್, ಸುದೀಪ್, ದರ್ಶನ್, ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್ ಸೇರಿದಂತೆ ಅನೇಕರ ಸಿನಿಮಾಗಳಲ್ಲಿ ಚಿಕ್ಕಣ್ಣ ನಟಿಸಿದ್ದರು. ತಿಂಗಳಿಗೆ ಚಿಕ್ಕಣ್ಣ ಅವರ ನಾಲ್ಕೈದು ಸಿನಿಮಾಗಳು ರಿಲೀಸ್ ಆಗುವ ಮಟ್ಟಿಗೆ ಬಿಜಿ ಆದರು. ಆ ಬಳಿಕ ಎಲ್ಲ ಹಾಸ್ಯ ನಟನರಂತೆ ಚಿಕ್ಕಣ್ಣ ಕೂಡ ಹೀರೋ ಆಗುತ್ತಾರೆ ಎಂಬ ಸುದ್ದಿ ಸಹ ಕೇಳಿ ಬಂದಿತ್ತು. ಆದರೆ ಈಗ ಹೀರೋ ಬದಲು ಅವರು ನಿರ್ಮಾಪಕ ಆಗಿದ್ದಾರೆ. ಮುಂದೆ ಓದಿ...

'ರಾಂಬೋ 2'

'ರಾಂಬೋ 2'

ಶರಣ್ ಅಭಿನಯದ 'ರಾಂಬೋ 2' ಸಿನಿಮಾದ ಮೂಲಕ ನಟ ಚಿಕ್ಕಣ್ಣ ನಿರ್ಮಾಪಕ ಆಗಿದ್ದಾರೆ. ಈ ಚಿತ್ರದ ನಿರ್ಮಾಪಕರ ಪೈಕಿ ಅವರು ಒಬ್ಬರಾಗಿದ್ದಾರೆ.

ತಂತ್ರಜ್ಞರ ಸಿನಿಮಾ

ತಂತ್ರಜ್ಞರ ಸಿನಿಮಾ

ಚಿಕ್ಕಣ್ಣ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಕೆಲಸ ಮಾಡಿರುವ ಅನೇಕ ತಂತ್ರಜ್ಞರು ಸಿನಿಮಾಗೆ ಬಂಡವಾಳ ಹಾಕಿದ್ದಾರೆ. ಎಲ್ಲ ಸೇರಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.

ಶರಣ್ ಮತ್ತು ಆಶಿಕಾ ಜೋಡಿ

ಶರಣ್ ಮತ್ತು ಆಶಿಕಾ ಜೋಡಿ

'ರಾಂಬೋ 2' ಸಿನಿಮಾ ಒಂದು ಕಾಮಿಡಿ ಸಿನಿಮಾವಾಗಿದೆ. ಅನಿಲ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಮೊದಲ ಬಾರಿಗೆ ಶರಣ್ ಮತ್ತು ಆಶಿಕಾ ಜೋಡಿಯಾಗಿದ್ದಾರೆ. ಚಿಕ್ಕಣ್ಣ ಕೂಡ ಚಿತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಇನ್ನೊಂದು ಹಾಡನ್ನು ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ಹಾಡಿದ್ದಾರೆ.

'ಯವ್ವ ಯವ್ವ..' ಹಾಡು

'ಯವ್ವ ಯವ್ವ..' ಹಾಡು

ನಿನ್ನೆ ಶರಣ್ ಹುಟ್ಟುಹಬ್ಬದ ವಿಶೇಷವಾಗಿ 'ರಾಂಬೋ 2' ಸಿನಿಮಾದ 'ಯವ್ವ ಯವ್ವ..' ಎಂಬ ಒಂದು ಹಾಡಿನ ಟೀಸರ್ ರಿಲೀಸ್ ಆಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಈ ಹಾಡು ದೊಡ್ಡ ಜನಪ್ರಿಯತೆ ಗಳಿಸುತ್ತಿದೆ.

ಚಿಕ್ಕಣ್ಣ ಮಾತು

ಚಿಕ್ಕಣ್ಣ ಮಾತು

ತಮ್ಮ 'ರಾಂಬೋ 2' ಸಿನಿಮಾದ ಬಗ್ಗೆ ಮಾತನಾಡಿರುವ ಚಿಕ್ಕಣ್ಣ ''ಶರಣ್ ಸರ್ ಮತ್ತು ನಾನು ಈ ಹಿಂದೆ ಮಾಡಿದ ಸಿನಿಮಾಗಳು ಹಳ್ಳಿಯ ಹಿನ್ನಲೆಯ ಕಥೆ ಹೊಂದಿತ್ತು. ಆದರೆ ಈ ಸಿನಿಮಾ ಜರ್ನಿಯಲ್ಲಿ ನಡೆಯುತ್ತದೆ. ಸಿನಿಮಾದ ಚಿತ್ರೀಕರಣವನ್ನು ರಾಮೇಶ್ವರ, ರಾಜಸ್ಥಾನ, ಗೋವದಲ್ಲಿ ಮಾಡಿದ್ದೇವೆ'' ಎಂದು ತಮ್ಮ ಅನುಭವವನ್ನು ಹಂಚಿಕೊಂಡರು.

More from Filmibeat

English summary
Kannada comedy actor Chikkanna is one of the producer for 'Rambo 2' kannada movie. 'Rambo 2' movie staring Kannada actor Sharan and actress Ashika Ranganath.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X