ಸ್ಯಾಂಡಲ್ ವುಡ್ ಗೆ 'ಉಪಾಧ್ಯಕ್ಷ'ನಾದ ಕಾಮಿಡಿ ಸ್ಟಾರ್ ಚಿಕ್ಕಣ್ಣ

ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ಚಿಕ್ಕಣ್ಣ ಈಗ ಸ್ಯಾಂಡಲ್ ವುಡ್ ನ 'ಉಪಾಧ್ಯಕ್ಷ'ನ ಪಟ್ಟ ಅಲಂಕರಿಸಿದ್ದಾರೆ. ಚಿಕ್ಕಣ್ಣ ಉಪಾಧ್ಯಕ್ಷನಾದ್ರಾ ಅಂತ ಅಚ್ಚರಿ ಪಡಬೇಡಿ. 'ಉಪಾಧ್ಯಕ್ಷ', ಚಿಕ್ಕಣ್ಣ ಅಭಿನಯದ ಹೊಸ ಸಿನಿಮಾದ ಹೆಸರು. ಈ ಸಿನಿಮಾ ಮೂಲಕ ಚಿಕ್ಕಣ್ಣ ಸೋಲೋ ಹೀರೋ ಲಾಂಚ್ ಆಗುತ್ತಿದ್ದಾರೆ.

Recommended Video

ಉಪಾಧ್ಯಕ್ಷನ ಬೆಂಬಲಕ್ಕೆ ನಿಂತ ರಾಬರ್ಟ್ ನಿರ್ಮಾಪಕ | Upadyaksha | Chikkanna | Umapathy Srinivas

ಇಂದು ಸಿನಿಮಾದ ಟೈಟಲ್ ಅನೌನ್ಸ್ ಮಾಡುವ ಮೂಲಕ ಚಿಕ್ಕಣ್ಣ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದ್ದಾರೆ. ಟೈಟಲ್ ಜೊತೆಗೆ ಚಿತ್ರದ ಹಾಡಿನ ರೆಕಾರ್ಡಿಂಗ್ ಸಹ ಪ್ರಾರಂಭ ಮಾಡಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಸ್ಟುಡಿಯೋದಲ್ಲಿ ಸ್ಕ್ರಿಪ್ಟ್ ಪೂಜೆ ಮಾಡಿ, ರೆಕಾರ್ಡಿಂಗ್ ಪ್ರಾರಂಭ ಮಾಡುವ ಮೂಲಕ ಚಿಕ್ಕಣ್ಣ ಹೊಸ ಸಿನಿಮಾಗೆ ಚಾಲನೆ ನೀಡಲಾಯಿತು.

ಅಂದ್ಹಾಗೆ 'ಉಪಾಧ್ಯಕ್ಷ' ಚಂದ್ರಮೋಹನ್ ಸಾರಥ್ಯದಲ್ಲಿ ಮೂಡಿಬರುತ್ತಿರುವ ಸಿನಿಮಾ. ಈಗಾಗಲೇ ಬಾಂಬೆ ಮಿಠಾಯಿ, ಡಬಲ್ ಇಂಜಿನ್, ಬ್ರಹ್ಮಚಾರಿ ಸಿನಿಮಾಗಳನ್ನು ನಿರ್ದೇಶನ ಮಾಡಿರುವ ಚಂದ್ರಮೋಹನ್ ಇದೀಗ ಚಿಕ್ಕಣ್ಣ ಜೊತೆ ಉಪಾಧ್ಯಕ್ಷ ಸಿನಿಮಾ ಮಾಡಲು ಮುಂದಾಗಿದ್ದಾರೆ. ಚಿತ್ರಕ್ಕೆ ರಾಬರ್ಟ್, ಮದಗಜ ಚಿತ್ರದ ನಿರ್ಮಾಪಕ ಉಮಾಪತಿ ಬಂಡವಾಳ ಹೂಡುತ್ತಿದ್ದಾರೆ.

Chikkannas hero debut movie titled as Upadhyaksha, Directed by Chandramohan

ಚಿಕ್ಕಣ್ಣ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟ. ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿರುವ ಚಿಕ್ಕಣ್ಣ ಸದ್ಯ ಪೊಗರು ಸಿನಿಮಾ ರಿಲೀಸ್ ಗೆ ಕಾಯುತ್ತಿದ್ದಾರೆ. ಸ್ಟಾರ್ ಹೀರೋಗಳ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿಕ್ಕಣ್ಣ ಈಗ ತಾನೆ ಹೀರೋ ಆಗ ಅಭಿಮಾನಿಗಳ ಮುಂದೆ ಬರ್ತಿದ್ದಾರೆ.

More from Filmibeat

English summary
Sandalwood comedy actor Chikkanna's hero debut movie titled as Upadhyaksha. this movie is Directed by Chandramohan.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X