For Quick Alerts
  ALLOW NOTIFICATIONS  
  For Daily Alerts

  ನಿಮ್ಮ ಅಭಿಮಾನಕ್ಕೊಂದು ಸಣ್ಣ ಸವಾಲು: ಈ ಸ್ಟಾರ್ ನಟರನ್ನ ಗುರುತಿಸಿ

  By Bharath Kumar
  |

  ಸ್ಯಾಂಡಲ್ ವುಡ್ ನ ಸ್ಟಾರ್ ನಟ ನಟಿಯರ ಅಭಿಮಾನಿಗಳು ತಮ್ಮ ನೆಚ್ಚಿನ ಕಲಾವಿದರ ವೈಯಕ್ತಿಕ ಜೀವನದ ಬಗ್ಗೆ ತಿಳಿದುಕೊಳ್ಳುವ ಆಸಕ್ತಿ ಹೊಂದಿರುತ್ತಾರೆ, ಕೆಲವು ಒಂದು ಹೆಜ್ಜೆ ಮುಂದೆ ಹೋಗಿ ತಿಳಿದುಕೊಂಡಿರುತ್ತಾರೆ ಕೂಡ.

  ಅವರ ಬಾಲ್ಯ, ವಿದ್ಯಾಭ್ಯಾಸ, ಮದುವೆ ಹೀಗೆ ಪ್ರತಿಯೊಂದನ್ನ ಫಾಲೋ ಮಾಡಿರುತ್ತಾರೆ. ಇಂತಹ ಅಭಿಮಾನಿಗಳಿಗೆ ನಮ್ಮಿಂದ ಒಂದು ಸಣ್ಣ ಸವಾಲು. ಕನ್ನಡ ಕೆಲವು ಸ್ಟಾರ್ ನಟ-ನಟಿಯರ ಬಾಲ್ಯದ ಫೋಟೋವನ್ನ ಕೆಳಗೆ ನೀಡಲಾಗಿದೆ. ಅದಕ್ಕೆ ತಕ್ಕ ಸುಳಿವು ಕೂಡ ನೀಡಲಾಗಿದೆ. ಅವುಗಳಲ್ಲಿ ಯಾವ ಫೋಟೋ ಯಾವ ನಟರದ್ದು ಎಂದು ಗುರುತಿಸಿ ಕಾಮೆಂಟ್ ಮಾಡಿ.

  ಸ್ಯಾಂಡಲ್ ವುಡ್ ತಾರೆಯರ ಬಾಲ್ಯದ ಫೋಟೋಗಳನ್ನ ನೋಡಲು ಮುಂದೆ ಓದಿ.....

  ಪುನೀತ್ ಜೊತೆ ನಟಿಸಿರುವ ನಟಿ?

  ಪುನೀತ್ ಜೊತೆ ನಟಿಸಿರುವ ನಟಿ?

  ಈ ಫೋಟೋದಲ್ಲಿರುವುದು ಬಹುಭಾಷಾ ನಟಿ. ಕನ್ನಡ, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಪುನೀತ್, ಸುದೀಪ್, ಗಣೇಶ್ ಸೇರಿದಂತೆ ಹಲವು ಸ್ಟಾರ್ ನಟರ ಜೊತೆ ಬಣ್ಣ ಹಚ್ಚಿದ್ದಾರೆ.

  ಕನ್ನಡದ ಈ ಮಕ್ಕಳ ಚಿತ್ರಗಳನ್ನು ಮರೆತರೆ ಹೇಗೆ ಹೇಳಿ ?ಕನ್ನಡದ ಈ ಮಕ್ಕಳ ಚಿತ್ರಗಳನ್ನು ಮರೆತರೆ ಹೇಗೆ ಹೇಳಿ ?

  ಸ್ಯಾಂಡಲ್ ವುಡ್ 'ಸುಂಟರಗಾಳಿ'

  ಸ್ಯಾಂಡಲ್ ವುಡ್ 'ಸುಂಟರಗಾಳಿ'

  ಈ ಫೋಟೋದಲ್ಲಿರುವುದು ಕೂಡ ಕನ್ನಡದ ಓರ್ವ ಖ್ಯಾತ ನಟಿ. ಸ್ಯಾಂಡಲ್ ವುಡ್ ನಲ್ಲಿ ಸುಂಟರಗಾಳಿ ಎಬ್ಬಿಸಿದ ಕಲಾವಿದೆ. ದರ್ಶನ್, ಸುದೀಪ್, ಪುನೀತ್, ರವಿಚಂದ್ರನ್ ಸೇರಿದಂತೆ ತಮಿಳು ಹಾಗೂ ತೆಲುಗಿನಲ್ಲಿ ಅಭಿನಯಿಸಿದ್ದಾರೆ.

  ಸಿನಿಮಾದಿಂದ ರಾಜಕೀಯಕ್ಕೆ ಹೋದ ನಟಿ.!

  ಸಿನಿಮಾದಿಂದ ರಾಜಕೀಯಕ್ಕೆ ಹೋದ ನಟಿ.!

  ಈ ಫೋಟೋದಲ್ಲಿರುವುದು ಕೂಡ ಕನ್ನಡದ ಸ್ಟಾರ್ ನಟಿ. ಸುಮಾರು ವರ್ಷದ ಸ್ಯಾಂಡಲ್ ವುಡ್ ಆಳಿದ ನಂಬರ್ ವನ್ ನಾಯಕಿ. ಆದ್ರೀಗ, ಸಿನಿಮಾರಂಗ ಬಿಟ್ಟು ರಾಜಕೀಯದಲ್ಲಿ ತೊಡಗಿಕೊಂಡಿದ್ದಾರೆ. ಈಕೆ ಕೂಡ ಪುನೀತ್, ದರ್ಶನ್, ಸುದೀಪ್, ಗಣೇಶ್, ಉಪೇಂದ್ರ ಸೇರಿದಂತೆ ಹಲವು ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

  ಇವರು ರಿಯಲ್ ಹೀರೋ

  ಇವರು ರಿಯಲ್ ಹೀರೋ

  ಈ ಫೋಟೋದಲ್ಲರುವ ನಟ ಎಲ್ಲರಿಗಿಂತ ಡಿಫ್ರೆಂಟ್. ಏನೇ ಮಾಡಿದ್ರು ವಿಭಿನ್ನ ಮತ್ತು ವಿಶೇಷ. ಇವರ ಅಭಿನಯಕ್ಕಿಂತ ನಿರ್ದೇಶನಕ್ಕೆ ಹೆಚ್ಚು ಅಭಿಮಾನಿಗಳಿದ್ದಾರೆ. ಇವರು ಕನ್ನಡದ ರಿಯಲ್ ಹೀರೋ ಕೂಡ ಹೌದು.

  ಕನ್ನಡದ ರಾಜರತ್ನ

  ಕನ್ನಡದ ರಾಜರತ್ನ

  ಬಹುಶಃ ಈ ಫೋಟೋ ನೋಡಿದವರಿಗೆ ಇವರ ಬಗ್ಗೆ ಸುಳಿವು ಕೊಡುವುದೇ ಬೇಡ ಅನ್ಸುತ್ತೆ. ಬಾಲ ಕಲಾವಿದನಾಗಿ ರಾಷ್ಟ್ರ ಪ್ರಶಸ್ತಿ ಪಡೆದ ಈ ನಟ ಅಭಿನಯವನ್ನ ಹುಟ್ಟುತ್ತಲೇ ರೂಡಿಸಿಕೊಂಡು ಬಂದಿದ್ದಾರೆ. ಈಗ ಸ್ಯಾಂಡಲ್ ವುಡ್ ಪಾಲಿಗೆ ಇವರು ರಾಜರತ್ನ.

  ಗಡಿಯಾಚೆ ಕನ್ನಡದ ಕೀರ್ತಿ ಹೆಚ್ಚಿಸಿದ ನಟ

  ಗಡಿಯಾಚೆ ಕನ್ನಡದ ಕೀರ್ತಿ ಹೆಚ್ಚಿಸಿದ ನಟ

  ಈ ಫೋಟೋದಲ್ಲಿರುವ ನಟ ಅಭಿಮಾನಿಗಳ ಪಾಲಿನ ಮಾಣಿಕ್ಯ. ಆರಡಿ ಕಟೌಟ್. ಕನ್ನಡದಲ್ಲಿ ಮಾತ್ರವಲ್ಲದೇ ಹೊರರಾಜ್ಯ, ಹೊರದೇಶದಲ್ಲೂ ಸಂಚಲನ ಸೃಷ್ಟಿಸಿರುವ ನಟ.

  ಇವರೂ ಕೂಡ ಸೆಂಚುರಿ ಸ್ಟಾರ್

  ಇವರೂ ಕೂಡ ಸೆಂಚುರಿ ಸ್ಟಾರ್

  ಈ ಫೋಟೋದಲ್ಲಿರುವ ನಟ ಇತ್ತೀಚೆಗಷ್ಟೇ ನೂರು ಸಿನಿಮಾಗಳನ್ನ ಪೂರೈಸಿದ ಸಾಧನೆ ಮಾಡಿದರು. ತಮ್ಮ ಪ್ರೀತಿಯನ್ನ ತ್ಯಾಗ ಮಾಡುವ ಪಾತ್ರಗಳಲ್ಲಿ ಈ ನಟ ಫೇಮಸ್.

  'ಚಾಲೆಂಜಿಂಗ್' ಸಹೋದರರು

  'ಚಾಲೆಂಜಿಂಗ್' ಸಹೋದರರು

  ಈ ಫೋಟೋದಲ್ಲಿರವ ಬಾಲಕರು ಕನ್ನಡದ ಖ್ಯಾತ ಖಳನಾಯಕನ ಮಕ್ಕಳು. ಒಬ್ಬರು ನಿರ್ದೇಶಕರು, ಇನ್ನೊಬ್ಬರು ಸ್ಟಾರ್ ನಟರು. ಇವರಿಬ್ಬರು ಕನ್ನಡದ 'ಚಾಲೆಂಜಿಂಗ್' ಸಹೋದರರು.

  ಈ 'ಮಾಸ್ಟರ್ ಪೀಸ್' ಯಾವುದು?

  ಈ 'ಮಾಸ್ಟರ್ ಪೀಸ್' ಯಾವುದು?

  ಕಿರುತೆರೆಯಿಂದ ಹಿರಿತೆರೆ ಕಾಲಿಟ್ಟು ಅದೃಷ್ಟ ಒಲಿಸಿಕೊಂಡ ನಟ ಇಂದು ಸ್ಯಾಂಡಲ್ ವುಡ್ ನ ಟಾಪ್ ನಟ. ಕನ್ನಡದ ಸ್ಟಾರ್ ನಟಿಯನ್ನ ವಿವಾಹವಾಗಿದ್ದಾರೆ.

  ಸ್ಯಾಂಡಲ್ ವುಡ್ ಪ್ರಿನ್ಸಸ್

  ಸ್ಯಾಂಡಲ್ ವುಡ್ ಪ್ರಿನ್ಸಸ್

  ಈ ಫೋಟೋದಲ್ಲಿರುವ ನಟಿ ಚಂದನವನದ 'ಮೊಗ್ಗಿನ ಮನಸ್ಸು'. ಇತ್ತೀಚೆಗಷ್ಟೆ ಕನ್ನಡದ ಸ್ಟಾರ್ ನಟನನ್ನ ವಿವಾಹವಾಗಿರುವ ಈ ನಟಿ ಸದ್ಯ ಯಾವುದೇ ಸಿನಿಮಾದಲ್ಲಿ ಅಭಿನಯಿಸಿಲ್ಲ.

  ಇಬ್ಬರು ದಿಗ್ಗಜ ಕಲಾವಿದರು

  ಇಬ್ಬರು ದಿಗ್ಗಜ ಕಲಾವಿದರು

  ಈ ಫೋಟೋದಲ್ಲಿರುವವರು ಕನ್ನಡದ ಇಬ್ಬರು ದಿಗ್ಗಜ ಕಲಾವಿದರು. ಒಬ್ಬರ ಕನ್ನಡ ಇಂಡಸ್ಟ್ರಿಯಲ್ಲಿ ಹೊಸ ಸಂಚಲನ ಸೃಷ್ಟಿಸಿದವರು. ಮತ್ತೊಬ್ಬರು ಅಭಿನಯದ ಮೂಲಕ ಹಲವರಿಗೆ ಮಾದರಿಯಾಗಿರುವವರು. ಇವರಿಬ್ಬರು ಸಹೋದರರು.

  ಬಹುಭಾಷೆ ನಾಯಕಿ

  ಬಹುಭಾಷೆ ನಾಯಕಿ

  ಈ ಫೋಟೋದಲ್ಲಿರುವ ಬಾಲಕಿ ಬಾಲ ನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಈಗ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿಕೊಂಡಿದ್ದಾರೆ. ಕನ್ನಡದಲ್ಲಿ ಕೊನೆಯದಾಗಿ ಸುದೀಪ್ ಜೊತೆ ಅಭಿನಯಿಸಿದ್ದರು.

  ಚಾಮಯ್ಯ ಮೇಷ್ಟ್ರ ಶಿಷ್ಯ

  ಚಾಮಯ್ಯ ಮೇಷ್ಟ್ರ ಶಿಷ್ಯ

  ಪುಟ್ಟಣ್ಣ ಕಣಗಾಲ್ ಚಿತ್ರದ ಮೂಲಕ ಆಂಗ್ರಿ ಯಂಗ್ ಮ್ಯಾನ್ ಇಮೇಜ್ ನಲ್ಲಿ ಕನ್ನಡಕ್ಕೆ ಪರಿಚಯವಾದ ನಟ. ಚಾಮಯ್ಯ ಮೇಷ್ಟ್ರ ಅಪ್ಪಟ ಶಿಷ್ಯ. ಹೃದಯವಂತ, ಸಿರಿವಂತ. ಕನ್ನಡ ಸಿನಿಮಾರಂಗದ ಯಜಮಾನ.

  ದಶಮುಖ ಪ್ರತಿಭೆ

  ದಶಮುಖ ಪ್ರತಿಭೆ

  ಈ ನಟ ಕೂಡ ಸೂಪರ್ ಸ್ಟಾರ್. ಕನ್ನಡ, ತಮಿಳು, ತೆಲುಗು, ಹಿಂದಿ ಬಹುಭಾಷೆಯಲ್ಲಿ ನಟಿಸಿರುವ ಕಲಾವಿದ. ತನ್ನ ಅಗಾದ ಪ್ರತಿಭೆಯಿಂದ ಸೂಪರ್ ಸ್ಟಾರ್ ಪಟ್ಟ ಪಡೆದುಕೊಂಡಿರುವ 'ದಶಮುಖ'

  ಭಾರತದ ಸೂಪರ್ ಸ್ಟಾರ್

  ಭಾರತದ ಸೂಪರ್ ಸ್ಟಾರ್

  ಹುಟ್ಟಿದ್ದು, ಬೆಳದಿದ್ದು ಎಲ್ಲವೂ ಕರ್ನಾಟಕದಲ್ಲಿ. ಆದ್ರೆ, ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿಕೊಂಡಿರುವುದು ಮಾತ್ರ ತಮಿಳು ಇಂಡಸ್ಟ್ರಿಯಲ್ಲಿ. ಇವರು ವಿಶ್ವ ಸಿನಿಮಾ ರಂಗ ಕಂಡಿರುವ ಸೂಪರ್ ಸ್ಟಾರ್ ನಟ.

  ದೊಡ್ಮನೆಯ ದೊಡ್ಡ ಹುಡುಗ

  ದೊಡ್ಮನೆಯ ದೊಡ್ಡ ಹುಡುಗ

  ಈ ಫೋಟೋದಲ್ಲಿರುವುದು ಅಣ್ಣಾವ್ರ ಮಗ ಎನ್ನುವುದು ಗೊತ್ತಿರುವ ವಿಚಾರ. ಆದ್ರೆ, ಆ ನಟ ಯಾರು ಎಂಬುದು ಕುತೂಹಲ.

  English summary
  how many of you have seen celebrities childhood photos? Let’s take a look at these childhood photos of Sandalwood actors.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X