For Quick Alerts
  ALLOW NOTIFICATIONS  
  For Daily Alerts

  Children's day Special: ಚಿತ್ರರಂಗ ಪ್ರವೇಶಿಸಿದ ಬಳಿಕ ಬಾಲ್ಯದ ಹೆಸರುಗಳನ್ನು ಬದಲಿಸಿಕೊಂಡ ತಾರೆಯರು!

  |

  ನವೆಂಬರ್ 14ರ ದಿನವನ್ನು ಪ್ರತಿ ವರ್ಷ ಮಕ್ಕಳ ದಿನಾಚರಣೆ ಎಂದು ಆಚರಿಸಲಾಗುತ್ತದೆ. ಭಾರತದ ಮೊಲದ ಪ್ರಧಾನ ಮಂತ್ರಿ ಪಂಡಿತ್ ಜವಹರಲಾಲ್ ಗೌರವಾರ್ಥ ನವೆಂಬರ್ 14ರಂದು ಈ ಆಚರಣೆಯನ್ನು ಮಾಡಲಾಗುತ್ತದೆ. ಇನ್ನು ನಮ್ಮ ನಿಮ್ಮೆಲ್ಲರ ಬಾಲ್ಯಕ್ಕೂ ಚಿತ್ರಗಳಿಗೂ ಸಾಕಷ್ಟು ನಂಟಿದೆ. ಬಾಲ್ಯದಿಂದಲೂ ಸಿನಿಮಾಗಳನ್ನು ನೋಡುತ್ತಾ ಬೆಳೆದಿರುವ ಹಲವಾರು ಮಂದಿ ಇದ್ದೇವೆ.

  ನಾವು ಹೇಗೆ ಬಾಲ್ಯದಿಂದಲೂ ಸಿನಿಮಾ ಕುರಿತು ಆಸಕ್ತಿ ಹೊಂದಿದ್ದೆವೋ ಅದೇ ರೀತಿ ಇಂದಿನ ಹಲವು ಸ್ಟಾರ್ ನಟ ಹಾಗೂ ನಟಿಯರು ಬಾಲ್ಯದಿಂದಲೂ ಚಿತ್ರಗಳಲ್ಲಿ ಅಭಿನಯಿಸಬೇಕು ಎಂಬ ಕನಸನ್ನು ಹೊದಿದ್ದವರೇ. ಈ ರೀತಿ ಕನಸನ್ನು ಹೊತ್ತು ಚಿತ್ರರಂಗಕ್ಕೆ ಕಾಲಿಟ್ಟಿದ್ದ ಬಹುತೇಕರು ಚಿತ್ರರಂಗ ಪ್ರವೇಶಿಸಿದ ನಂತರ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

  ಅಂದಿನ ಮಾಸ್ಟರ್ ಲೋಹಿತ್ ಪುನೀತ್ ರಾಜ್‌ಕುಮಾರ್ ಆಗಿದ್ದರಿಂದ ಹಿಡಿದು ಇಂದು ವಿಶ್ವದಾದ್ಯಂತ ಸದ್ದು ಮಾಡುತ್ತಿರುವ ಕಾಂತಾರ ಚಿತ್ರದ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿವರೆಗೂ ಬಾಲ್ಯದ ಹೆಸರನ್ನು ಹಲವಾರು ನಟ ನಟಿಯರು ಬದಲಿಸಿಕೊಂಡಿದ್ದಾರೆ. ಹೀಗೆ ಬಾಲ್ಯದಲ್ಲಿ ಇಡಲಾಗಿದ್ದ ಹೆಸರನ್ನು ಬದಲಿಸಿಕೊಂಡಿರುವ ಕನ್ನಡ ನಟ, ನಟಿಯರು ನಿರ್ದೇಶಕ ಹಾಗೂ ಸಂಗೀತ ನಿರ್ದೇಶಕರು ಯಾರು ಎಂಬ ವಿವರ ಈ ಕೆಳಕಂಡಂತಿದೆ..

  ಕನ್ನಡದ ನಟರು

  ಕನ್ನಡದ ನಟರು

  ಪುನೀತ್ ರಾಜ್‌ಕುಮಾರ್ - ಲೋಹಿತ್

  ದರ್ಶನ್ - ಹೇಮಂತ್ ಕುಮಾರ್

  ಯಶ್ - ನವೀನ್ ಕುಮಾರ್ ಗೌಡ

  ಶಿವ ರಾಜ್‌ಕುಮಾರ್ - ನಾಗರಾಜು ಶಿವ ಪುಟ್ಟಸ್ವಾಮಿ

  ರಾಜ್‌ಕುಮಾರ್ - ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್

  ವಿಷ್ಣುವರ್ಧನ್ - ಸಂಪತ್ ಕುಮಾರ್

  ಅಂಬರೀಶ್ - ಮಳವಳ್ಳಿ ಹುಚ್ಚೇಗೌಡ ಅಮರನಾಥ್

  ಜಗ್ಗೇಶ್ - ಈಶ್ವರ್ ಗೌಡ

  ವಜ್ರಮುನಿ - ಸದಾನಂದ ಸಾಗರ್

  ಶ್ರೀನಾಥ್ - ನಾರಾಯಣ ಸ್ವಾಮಿ

  ಸತೀಶ್ ನೀನಸಂ - ಶಿವಕುಮಾರ್

  ಕನ್ನಡದ ನಟಿಯರು

  ಕನ್ನಡದ ನಟಿಯರು

  ಜಯಂತಿ - ಕಮಲಾ ಕುಮಾರಿ

  ಸುಧಾರಾಣಿ - ಜಯಶ್ರೀ

  ರಮ್ಯಾ - ದಿವ್ಯ ಸ್ಪಂದನ

  ರಕ್ಷಿತ - ಶ್ವೇತಾ

  ರಚಿತಾ ರಾಮ್ - ಬಿಂದಿಯಾ ರಾಮ್

  ಶೃತಿ - ಪ್ರಿಯದರ್ಶಿನಿ

  ಮಾಲಾಶ್ರೀ - ಶ್ರೀ ದುರ್ಗಾ

  ಮಾನ್ವಿತಾ ಹರೀಶ್ - ಶ್ವೇತಾ ಕಾಮತ್

  ಅಮೂಲ್ಯ - ಮೌಲ್ಯ

  ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು

  ನಿರ್ದೇಶಕರು ಹಾಗೂ ಸಂಗೀತ ನಿರ್ದೇಶಕರು

  ಪುಟ್ಟಣ್ಣ ಕಣಗಾಲ್ - ಶುಭ್ರವೇಷ್ಠಿ ರಾಮಸ್ವಾಮಯ್ಯ ಸೀತಾರಾಮ ಶರ್ಮಾ

  ರಿಷಬ್ ಶೆಟ್ಟಿ - ಪ್ರಶಾಂತ್ ಶೆಟ್ಟಿ

  ಜೋಗಿ ಪ್ರೇಮ್ - ಕಿರಣ್ ಕುಮಾರ್

  ಅರ್ಜುನ್ ಜನ್ಯಾ - ಲೋಕೇಶ್ ಕುಮಾರ್

  ರವಿ ಬಸ್ರೂರು - ಕಿರಣ್

  English summary
  Children's day special: List of kannada stars who have changed their birth name. Take a look
  Monday, November 14, 2022, 18:33
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X