'ಮೀಟೂ' ಆರೋಪ ಮಾಡಿದ್ದಕ್ಕೆ ಗಾಯಕಿ ಚಿನ್ಮಯಿ ಸಿನಿಜೀವನ ಅಂತ್ಯ.!
'ಮೀಟೂ' ಅಭಿಯಾನದಡಿ ಖ್ಯಾತ ಸಾಹಿತಿ ವೈರಮುತ್ತು ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ಗಾಯಕಿ, ಡಬ್ಬಿಂಗ್ ಕಲಾವಿದೆ ಚಿನ್ಮಯಿ ಶ್ರೀಪಾದ್ ಅವರ ಸಿನಿ ಜೀವನ ಬಹುತೇಕ ಅಂತ್ಯವಾಗಿದೆ.
ಖ್ಯಾತನಾಮರ ಮೇಲೆ ಮೀಟೂ ಆರೋಪ ಮಾಡಿ ಇಂಡಸ್ಟ್ರಿಯವರ ಕೆಂಗಣ್ಣಿಗೆ ಗುರಿಯಾಗಿದ್ದ ಚಿನ್ಮಯಿ ಅವರನ್ನ ತಮಿಳು ಡಬ್ಬಿಂಗ್ ಕಲಾವಿದರ ಸಂಘದಿಂದ ತಮ್ಮ ಪ್ರಾಥಮಿಕ ಸದಸ್ಯತ್ವವನ್ನ ರದ್ದು ಮಾಡಲಾಗಿದೆ.
ಪ್ರಾಥಮಿಕ ಸದಸ್ಯತ್ವ ರದ್ದು ಆದ್ರೆ, ಅವರು ಮುಂದಿನ ಯಾವ ಸಿನಿಮಾಗಳಿಗೂ, ಹಾಗೂ ಧಾರಾವಾಹಿಗಳಿಗು ಡಬ್ಬಿಂಗ್ ಮಾಡುವಂತಿಲ್ಲ. ಹೀಗಾಗಿ, ಚಿನ್ಮಯಿ ಅವರ ವೃತ್ತಿ ಜೀವನಕ್ಕೆ ಬ್ರೇಕ್ ಬಿದ್ದಿದೆ.

ಡಬ್ಬಿಂಗ್ ಕಲಾವಿದರ ಸಂಘದ ಅಧ್ಯಕ್ಷ ರಾಧರವಿ ಅವರ ವಿರುದ್ಧ ಚಿನ್ಮಯಿ ಮಾತನಾಡಿದ್ದರು. ಇದರ ಪರಿಣಾಮ ಈಗ ಸದಸ್ಯತ್ವದ ಮಾನ್ಯತೆಯನ್ನ ತೆಗೆದು ಹಾಕಲಾಗಿದೆ ಎನ್ನಲಾಗಿದೆ. ರಾಧರವಿ ಅವರ ಈ ನಡೆಯನ್ನ ತಮಿಳಿನ ಹಲವು ಡಬ್ಬಿಂಗ್ ಕಲಾವಿದರು ಖಂಡಿಸಿದ್ದಾರೆ.
ಚಿನ್ಮಯಿ ಶ್ರೀಪಾದ್ ಅವರು ದಕ್ಷಿಣ ಭಾರತದ ಹಲವು ತಾರೆಯರಿಗೆ ಡಬ್ಬಿಂಗ್ ಮಾಡಿದ್ದಾರೆ. ನನ್ನೊಂದಿಗೆ ಯಾವುದೇ ರೀತಿಯ ಚರ್ಚೆ ನಡೆಸದೆ, ಸಂದೇಶ ಮಾತ್ರ ರವಾನಿಸಿದ್ದಾರೆ ಎಂದು ಸ್ವತಃ ಚಿನ್ಮಯಿ ಅವರೇ ಹೇಳಿಕೊಂಡಿರುವುದು ನಿಜಕ್ಕೂ ಹಲವು ಅನುಮಾನಗಳಿಗೆ ಎಡೆಮಾಡಿದೆ.

ಇನ್ಮುಂದೆ ಚಿನ್ಮಯಿ ಯಾವುದೇ ತಮಿಳು ಸಿನಿಮಾ ಮಾಡುವಾಗಿಲ್ಲ. ಬಹುಶಃ ತ್ರಿಷಾ ಮತ್ತು ವಿಜಯ್ ಸೇತುಪತಿ ಅಭಿನಯದ '96' ಚಿನ್ಮಯಿ ಕೊನೆಯ ಚಿತ್ರವಾಗಬಹುದು. ಈ ಚಿತ್ರದಲ್ಲಿ ಕೊನೆಯ ಭಾರಿಗೆ ಕಂಠದಾನ ಮಾಡಿದ್ದರು. ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಚಿನ್ಮಯಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.


Click it and Unblock the Notifications











