ಚಿರಂಜೀವಿ ಸರ್ಜಾ 11ನೇ ದಿನದ ಪುಣ್ಯತಿಥಿ: ಕುಟುಂಬದಿಂದ ಮಾಧ್ಯಮಗಳಿಗೆ ಮನವಿ

ಚಿರಂಜೀವಿ ಸರ್ಜಾ ಹೃದಯಾಘಾತದಿಂದ ನಿಧನ ಹೊಂದಿ ಇಂದಿಗೆ ಹನ್ನೊಂದು ದಿನ. ಹಾಗಾಗಿ ಹಲವು ಕಾರ್ಯಗಳನ್ನು ಇಂದು ನೆರವೇರಿಸಲಾಗುತ್ತದೆ.

Recommended Video

Case filed against 8 people including Karan Johar, Sanjay Leela Bhansali, Salman Khan | Filmibeat

ಪುಣ್ಯತಿಥಿ ಕಾರ್ಯವನ್ನು ಕನಕಪುರ ರಸ್ತೆಯ ಬೃಂದಾವನ ಫಾರಂ ಹೌಸ್‌ನಲ್ಲಿ ಬೆಳಿಗ್ಗೆ 10:30 ಮಾಡಲಾಗುತ್ತದೆ. ಸರ್ಜಾ ಕುಟುಂಬಸ್ಥರು, ಮೇಘನಾ ರಾಜ್ ಕುಟುಂಬ ಸದಸ್ಯರು, ಕುಟುಂಬ ಆಪ್ತರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ವಿಧಿಯಾಟದ ಮುಂದೆ ಏನೂ ಇಲ್ಲ ಎಂಬುದು ಚಿರಂಜೀವಿ ಸರ್ಜಾ ಅಕಾಲಿಕ ಮರಣದಿಂದ ಮನದಟ್ಟಾಗಿದೆ. ನಮ್ಮ ಕುಟುಂಬದಲ್ಲಿ ಇಂಥಾದ್ದೊಂದು ಸಂದರ್ಭ ಬರುತ್ತೆ ಎಂದು ನಾವು ಕನಸಿನಲ್ಲೂ ಅಂದುಕೊಂಡಿರಲಿಲ್ಲ ಎಂದಿರುವ ಧ್ರುವ ಸರ್ಜಾ ಪುಣ್ಯತಿಥಿ ಕಾರ್ಯಕ್ಕೆ ಆಹ್ವಾನ ನೀಡಿದ್ದಾರೆ.

ಮಾಧ್ಯಮಗಳಿಗೆ ಮನವಿ

ಮಾಧ್ಯಮಗಳಿಗೆ ಮನವಿ

11 ನೇ ದಿನದ ಪುಣ್ಯತಿಥಿ ಕಾರ್ಯವು ಕುಟುಂಬದ ಖಾಸಗಿ ಕಾರ್ಯಕ್ರಮವಾದ್ದರಿಂದ ಮಾಧ್ಯಮಗಳವರು ಕ್ಯಾಮೆರಾ ತರಬಾರದು ಎಂದು ಮನವಿ ಮಾಡಲಾಗಿದೆ. ಕ್ಯಾಮೆರಾ ಇಲ್ಲದೆ ಹಾಗೆಯೇ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಆಹ್ವಾನಿಸಲಾಗಿದೆ.

ಭವ್ಯ ಮಂಟಪ ನಿರ್ಮಿಸಲಿರುವ ಧ್ರುವ ಸರ್ಜಾ

ಭವ್ಯ ಮಂಟಪ ನಿರ್ಮಿಸಲಿರುವ ಧ್ರುವ ಸರ್ಜಾ

ಚಿರು ಸರ್ಜಾ ಸಮಾಧಿ ಸ್ಥಳದಲ್ಲಿ ಈಗಾಗಲೆ ಸಣ್ಣ ಮಂಟಪ ನಿರ್ಮಿಸಲಾಗಿದೆಯಂತೆ. ಅದೇ ಸ್ಥಳದಲ್ಲಿ ಭವ್ಯವಾದ ಮಂಟಪವನ್ನು ಕಟ್ಟುವ ಇರಾದೆ ಧ್ರುವ ಸರ್ಜಾ ಅವರಿಗಿದೆ.

ರಾಘವೇಂದ್ರ ರಾಜ್‌ಕುಮಾರ್ ಭೇಟಿ

ರಾಘವೇಂದ್ರ ರಾಜ್‌ಕುಮಾರ್ ಭೇಟಿ

ಕೆಲವು ದಿನಗಳ ಹಿಂದಷ್ಟೆ ರಾಘವೇಂದ್ರ ರಾಜ್‌ಕುಮಾರ್ ಅವರು ಚಿರು ಸರ್ಜಾ ಮನೆಗೆ ಭೇಟಿ ನೀಡಿ ಧೈರ್ಯತುಂಬುವ ಕಾರ್ಯ ಮಾಡಿದ್ದರು. ಮೇಘನಾ ರಾಜ್ ಕುಟುಂಬವನ್ನೂ ಸಹ ಅವರು ಭೇಟಿ ಮಾಡಿ ಮಾತನಾಡಿದ್ದರು.

ಜೂನ್ 7 ರಂದು ಹೃದಯಾಘಾತದಿಂದ ಸಾವು

ಜೂನ್ 7 ರಂದು ಹೃದಯಾಘಾತದಿಂದ ಸಾವು

ಚಿರಂಜೀವಿ ಸರ್ಜಾ ಅವರು ಕಳೆದ ಭಾನುವಾರ (ಜೂನ್ 7) ರಂದು ತೀವ್ರ ಹೃದಯಾಘಾತದಿಂದ ಮರಣ ಹೊಂದಿದರು. ಅವರಿಗೆ ಕೇವಲ 34 ವರ್ಷ ವಯಸ್ಸಾಗಿತ್ತು. ಮೇಘನಾ ರಾಜ್ ಅವರನ್ನು ಎರಡು ವರ್ಷದ ಹಿಂದಷ್ಟೆ ಮದುವೆಯಾಗಿದ್ದರು. ಮಗುವಿನ ನಿರೀಕ್ಷೆಯಲ್ಲಿದ್ದರು ಅವರು.

More from Filmibeat

English summary
Chiranjeevi Sarja's 11th day pooja organized today. Sarja family requested media that do not camera to program.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X