ಮೆಗಾಸ್ಟಾರ್ ಚಿರಂಜೀವಿಯ 152ನೇ ಚಿತ್ರ ಆರಂಭ

ಮೆಗಾಸ್ಟಾರ್ ಚಿರಂಜೀವಿ ಅವರ 'ಸೈರಾ ನರಸಿಂಹ ರೆಡ್ಡಿ' ಸಿನಿಮಾ ಬಾಕ್ಸ್ ಆಫೀಸ್ ಧೂಳೆಬ್ಬಿಸಿ ಮುನ್ನುಗ್ಗುತ್ತಿದೆ. 151ನೇ ಸಿನಿಮಾ ರಿಲೀಸ್ ಆಗಿ ಏಳನೇ ದಿನಕ್ಕೆ 152ನೇ ಸಿನಿಮಾ ಆರಂಭಿಸಿದ್ದಾರೆ ಮೆಗಾ ಹೀರೋ. ಹೌದು, ಚಿರಂಜೀವಿಯ ಹೊಸ ಸಿನಿಮಾದ ಮುಹೂರ್ತ ನಡೆದಿದೆ.

ವಿಜಯದಶಮಿ ಪ್ರಯುಕ್ತ ಚಿರಂಜೀವಿ ನಟಿಸಲಿರುವ ಮುಂದಿನ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ತೆಲುಗಿನ ಖ್ಯಾತ ನಿರ್ದೇಶಕ ಕೊರಟಲಾ ಶಿವ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ವಿಶೇಷ.

Chiranjeevi 152nd Movie Start

ಮಿರ್ಚಿ, ಶ್ರೀಮಂತಡು, ಜನತಾ ಗ್ಯಾರೇಜ್, ಭರತ್ ಅನೇ ನೇನು ಅಂತಹ ಬ್ಲಾಕ್ ಬಸ್ಟರ್ ಚಿತ್ರಗಳನ್ನ ನೀಡಿರುವ ಕೊರಟಲಾ ಶಿವ ಅವರು ಈಗ ಮೆಗಾಸ್ಟಾರ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದ ನಿರ್ಮಾಣದಲ್ಲೂ ರಾಮ್ ಚರಣ್ ಭಾಗಿಯಾಗಲಿದ್ದಾರೆ.

ಸಾಮಾಜಿಕ ಸಂದೇಶವನ್ನ ನೀಡುವಂತಹ ಸಿನಿಮಾಗಳನ್ನ ಮಾಸ್ ಎಲಿಮೆಂಟ್ಸ್ ಮೂಲಕ ಪ್ರೇಕ್ಷಕರಿಗೆ ತಲುಪಿಸುವಲ್ಲಿ ನಿರ್ದೇಶಕ ಕೊರಟಲಾ ಶಿವ ನಿಪುಣರು. ಭರತ್ ಅನೇ ನೇನು ಯಶಸ್ಸಿನ ಬಳಿಕ ಚಿರಂಜೀವಿ ಅವರಿಗೆ ಕಥೆ ಹೇಳಿದ್ದರು. ಆಗಲೇ ಕಥೆಗೆ ಓಕೆ ಹೇಳಿದ್ದ ಚಿರು, ಸೈರಾ ಸಿನಿಮಾ ಮುಗಿಯುವರೆಗೂ ಕಾಯಲು ಸೂಚಿಸಿದ್ದರು.

Chiranjeevi 152nd Movie Start

ಈಗ ಸೈರಾ ಗೆದ್ದಿದೆ. ಆ ಕಡೆ ಡೈರೆಕ್ಟರ್ ಶಿವ ಅವರು ಕೂಡ ಚಿರು ಚಿತ್ರಕ್ಕಾಗಿ ಎಲ್ಲ ತಯಾರಿ ನಡೆಸಿಕೊಂಡಿದ್ದಾರೆ. ಸಂಪ್ರದಾಯವಾಗಿ ಪೂಜೆ ಮಾಡಿರುವ ಚಿತ್ರತಂಡ ಸದ್ಯದಲ್ಲೇ ಶೂಟಿಂಗ್ ಆರಂಭಿಸಲಿದೆ. ಆದರೆ, ಯಾವ ರೀತಿಯ ಕಥೆ ಹೊಂದಿರುತ್ತೆ, ನಾಯಕಿ ಯಾರಾಗಬಹುದು ಎಂಬ ಕುತೂಹಲ ಮಾತ್ರ ಇನ್ನು ಸ್ವಲ್ಪ ದಿನ ಹಾಗೆ ಉಳಿಯಲಿದೆ.

More from Filmibeat

English summary
Telugu actor Chiranjeevi's 152nd movie has been formally launched. Ram charan in association with matinee enterprises will produce the film. Written & Directed by koratala siva.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X