For Quick Alerts
  ALLOW NOTIFICATIONS  
  For Daily Alerts

  ಜೀವನಪೂರ್ತಿ ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ ಮಗನೇ: ಅರ್ಜುನ್ ಸರ್ಜಾ

  |

  'ಒಂದು ವರ್ಷ ಕಳೆಯಿತು. ಜೀವನ ಪೂರ್ತಿ ನಿನ್ನನ್ನು ಮಿಸ್ ಮಾಡಿ ಕೊಳ್ಳುತ್ತೇನೆ ಚಿರು ಮಗನೇ' ಎಂದು ನಟ ಅರ್ಜುನ್ ಸರ್ಜಾ ಭಾವಕರಾಗಿದ್ದಾರೆ. ಚಿರಂಜೀವಿ ಸರ್ಜಾ ನಿಧನಹೊಂದಿ ಇಂದಿಗೆ ಸರಿಯಾಗಿ ಒಂದು ವರ್ಷ. ಇದೇ ದಿನ ಒಂದು ವರ್ಷದ ಹಿಂದೆ ಚಿರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದರು.

  ಚಿರಂಜೀವಿ ಇಲ್ಲದೆ ಕುಟುಂಬದವರು ಒಂದು ವರ್ಷ ಕಳೆದಿದ್ದಾರೆ. ಚಿರು ನೆನಪಿನಲ್ಲೇ ಜೀವನ ನಡೆಯುತ್ತಿದ್ದಾರೆ. ಪ್ರತಿದೀನ, ಪ್ರತಿಕ್ಷಣ ಚಿರು ನೆನಪಾಗುತ್ತಿರುತ್ತಾರೆ ಎಂದು ಕುಟುಂಬದವರು ಭಾವನಾತ್ಮಕ ಪತ್ರ ಹಂಚಿಕೊಂಡಿದ್ದಾರೆ. ಇನ್ನೂ ಚಿರು ಪ್ರೀತಿಯ ಮಾವ ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ಕೂಡ ಭಾವುಕ ಪೋಸ್ಟ್ ಶೇರ್ ಮಾಡಿದ್ದಾರೆ. ಮುಂದೆ ಓದಿ...

  ಅರ್ಜುನ್ ಸರ್ಜಾ ಪೋಸ್ಟ್

  ಅರ್ಜುನ್ ಸರ್ಜಾ ಪೋಸ್ಟ್

  ಅರ್ಜುನ್ ಸರ್ಜಾ ಅಳಿಯ ಚಿರು ಜೊತೆಗಿನ ಸುಂದರ ಫೋಟೋಗಳನ್ನು ಶೇರ್ ಮಾಡಿ ಜೀವನ ಪೂರ್ತಿ ಮಿಸ್ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. 'ಒಂದು ವರ್ಷವಾಗಿದೆ. ಆದರೆ ನಿನ್ನನ್ನು ಜೀವನ ಪೂರ್ತಿ ಮಿಸ್ ಮಾಡಿಕೊಳ್ಳುತ್ತೇನೆ ಚಿರು ಮಗನೇ. ನೀನು ಎಲ್ಲಿದ್ದರೂ ಆ ನಿನ್ನ ನಗು ಜೀವವಂತವಾಗಿರುತ್ತೆ' ಎಂದು ಅರ್ಜುನ್ ಸರ್ಜಾ ಹೇಳಿದ್ದಾರೆ.

  ಚಿರಂಜೀವಿ ಸರ್ಜಾ ಪುಣ್ಯಸ್ಮರಣೆ; ಭಾವುಕ ಪತ್ರ ಹಂಚಿಕೊಂಡ ಸರ್ಜಾ ಕುಟುಂಬಚಿರಂಜೀವಿ ಸರ್ಜಾ ಪುಣ್ಯಸ್ಮರಣೆ; ಭಾವುಕ ಪತ್ರ ಹಂಚಿಕೊಂಡ ಸರ್ಜಾ ಕುಟುಂಬ

  ಸಮಾಧಿಗೆ ತೆರಳಿ ವಿಶೇಷ ಪೂಜೆ

  ಸಮಾಧಿಗೆ ತೆರಳಿ ವಿಶೇಷ ಪೂಜೆ

  ಚಿರುಪುಣ್ಯಸ್ಮರಣೆ ದಿನ ಕುಟುಂಬದವರು ಮತ್ತು ಸ್ನೇಹಿತರ ಜೊತೆಗೆ ಅಭಿಮಾನಿಗಳು ಸಹ ನಮನ ಸಲ್ಲಿಸುತ್ತಿದ್ದಾರೆ. ಇಂದು ಬೆಳಗ್ಗೆ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ಕುಟುಂಬ ಚಿರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಕೊರೊನಾ ಲಾಕ್ ಡೌನ್ ಕಾರಣ ಸರಳವಾಗಿ ಕಾರ್ಯ ಮಾಡಿದ್ದಾರೆ.

  ಮೊದಲ ಬಾರಿಗೆ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಜೂ. ಚಿರು

  ಮೊದಲ ಬಾರಿಗೆ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ ಜೂ. ಚಿರು

  ವಿಶೇಷ ಎಂದರೆ ತಂದೆಯ ಒಂದು ವರ್ಷದ ಪುಣ್ಯತಿಥಿಯ ದಿನ ಜೂ.ಚಿರು ಕೂಡ ಸಮಾಧಿ ಸ್ಥಳಕ್ಕೆ ಆಗಮಿಸಿದ್ದನು. ಮೊದಲ ಬಾರಿಗೆ ಜೂ. ಚಿರು ಅಪ್ಪನ ಸಮಾಧಿ ಬಳಿ ತೆರಳಿ ಪೂಜೆ ಸಲ್ಲಿಸಿದ್ದಾನೆ. ಜೂ. ಚಿರುಗೆ ಸದ್ಯ 7 ತಿಂಗಳಾಗಿದ್ದು, ಫೋಟೋ ನೋಡಿ ತಂದೆಯ ಗುರುತು ಹಿಡಿಯುತ್ತಾನೆ ಎಂದು ಮೇಘನಾ ಹೇಳಿದ್ದಾರೆ.

  ಚಿರಂಜೀವಿ ಸರ್ಜಾ ಇಲ್ಲದ ಒಂದು ವರ್ಷ: ಪತಿಯ ನೆನಪಿನಲ್ಲಿ ಮೇಘನಾ ರಾಜ್ಚಿರಂಜೀವಿ ಸರ್ಜಾ ಇಲ್ಲದ ಒಂದು ವರ್ಷ: ಪತಿಯ ನೆನಪಿನಲ್ಲಿ ಮೇಘನಾ ರಾಜ್

  ಚಿರು ಸಾವಿಗೆ ಒಂದು ವರ್ಷ, ಅಣ್ಣನಿಗೆ ಪತ್ರ ಬರೆದು ನೋವನ್ನು ಹಂಚಿಕೊಂಡ ಧ್ರುವ | Filmibeat Kannada
  ಕುಟುಂಬದವರ ಭಾವುಕ ಪತ್ರ

  ಕುಟುಂಬದವರ ಭಾವುಕ ಪತ್ರ

  ಇನ್ನು ಕುಟುಂಬದವರು, 'ನೀನು ದೇವರ ಮನೆಗೆ ಹೋಗಿ ಒಂದು ವರುಷವಾಯಿತು. ಎಷ್ಟು ಬೇಗ ಒಂದು ವರ್ಷ, ಈ 365 ದಿನಗಳಲ್ಲಿ ನಿನ್ನ ನೆನೆಯದ ದಿನಗಳೇ ಇಲ್ಲ. ಕನಸಿನಲ್ಲಿ ನಿನ್ನ ಕಾಣದ ರಾತ್ರಿಗಳೇ ಇಲ್ಲ. ಮರೆಯಲಾಗದ ಚಿರ ನೆನಪುಗಳು. ಕುಟುಂಬದ ಮೇಲೆ ನಿನಗಿದ್ದ ಅಪಾರವಾದ ಗೌರವ, ಜನಗಳಿಗೆ ನೀನು ತೋರುತ್ತಿದ್ದ ಪ್ರೀತಿ, ಪ್ರೇಮ, ಸ್ನೇಹ ಉದಾರಗುಣ ಮತ್ತು ಅಜಾತ ಶತ್ರುವಾಗಿದ್ದ ನಿನ್ನ ನೆನಪುಗಳೇ ಈಗ ನಮ್ಮ ಕರಗಲಾರದ ಆಸ್ತಿ. ನೀನೆಲ್ಲಿದ್ದರೂ ಅಲ್ಲಿ ನಗು ತುಂಬಿರಬೇಕು' ಎಂದು ಬರೆದಿದ್ದಾರೆ.

  English summary
  Chiranjeevi Death Anniversary: Arjun Sarja Remembers Late Actor Chiranjeevi Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X