For Quick Alerts
  ALLOW NOTIFICATIONS  
  For Daily Alerts

  ಮತ್ತೆ ಮದುವೆ ಆಗ್ತಿದ್ದಾರೆ ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ.!

  |

  ಮೆಗಾಸ್ಟಾರ್ ಚಿರಂಜೀವಿ ಅವರ ಎರಡನೇ ಪುತ್ರಿ ಶ್ರೀಜಾ 2007ರಲ್ಲಿ ಮನೆಯವರನ್ನ ದಿಕ್ಕರಿಸಿ ಸಿರೀಶ್ ಭಾರಧ್ವಜ್ ಎಂಬುವರ ಜೊತೆ ಲವ್ ಮ್ಯಾರೇಜ್ ಆಗಿದ್ದರು. ಬಳಿಕ ಮಗಳ ಪ್ರೀತಿಯನ್ನ ಗೌರವಿಸಿದ ಚಿರಂಜೀವಿ ಕುಟುಂಬ ಅಳಿಯನನ್ನ ಒಪ್ಪಿಕೊಂಡರು.

  ಆಮೇಲೆ ಚೆನ್ನಾಗಿದ್ದ ದಾಂಪತ್ಯ ಸುಮಾರು ಏಳು ವರ್ಷಗಳ 2014ರಲ್ಲಿ ಮುರಿದುಬಿತ್ತು. ಪರಸ್ಪರ ಇಬ್ಬರಲ್ಲಿ ಮನಸ್ತಾಪ ಉಂಟಾದ ಕಾರಣ, ಕಾನೂನಾತ್ಮಕವಾಗಿ ವೈವಾಹಿಕ ಜೀವನವನ್ನ ಕಡಿದುಕೊಂಡರು. ಅದಾದ ಬಳಿಕ ಮೆಗಾಸ್ಟಾರ್ ಚಿರಂಜೀವಿ ತಮ್ಮ ಮಗಳಿಗೆ ಮತ್ತೆ ಮದುವೆ ಮಾಡಿದರು.

  ಮೆಗಾಸ್ಟಾರ್ ಚಿರಂಜೀವಿ ಕುಟುಂಬದಿಂದ ಮತ್ತೋರ್ವ ನಟನ ಎಂಟ್ರಿ.!

  2016ರಲ್ಲಿ ಬೆಂಗಳೂರಿನ ದೇವನಹಳ್ಳಿ ಸಮೀಪದಲ್ಲಿರುವ ಚಿರಂಜೀವಿ ಅವರ ಎಸ್ಟೇಟ್ ನಲ್ಲಿ ಖಾಸಗಿಯಾಗಿ ಕಲ್ಯಾಣ್ ಎಂಬ ಉದ್ಯಮಿ ಜೊತೆ ಮಗಳ ಮದುವೆ ಮಾಡಿದರು. ಇವರಿಬ್ಬರಿಗೆ ಒಂದು ಮಗು ಕೂಡ ಇದೆ. ಇದೀಗ, ಮಗಳಿಂದ ವಿಚ್ಛೇದನ ಪಡದುಕೊಂಡಿದ್ದ ಮಾಜಿ ಅಳಿಯ ಕೂಡ ಇನ್ನೊಂದು ಮದುವೆ ಆಗುತ್ತಿದ್ದಾರೆ. ಯಾರ ಜೊತೆ ಮುಂದೆ ಓದಿ....

  ವೈದ್ಯೆಯ ಕೈ ಹಿಡಿಯಲಿದ್ದಾರೆ ಚಿರು ಮಾಜಿ ಅಳಿಯ

  ವೈದ್ಯೆಯ ಕೈ ಹಿಡಿಯಲಿದ್ದಾರೆ ಚಿರು ಮಾಜಿ ಅಳಿಯ

  ಚಿರಂಜೀವಿ ಮಗಳ ಜೊತೆಗಿನ ವಿಚ್ಛೇದನ ನಂತರ ಒಬ್ಬಂಟಿಯಾಗಿದ್ದ ಮಾಜಿ ಅಳಿಯ ಸಿರೀಶ್ ಭಾರಧ್ವಜ್ ಈಗ ಇನ್ನೊಂದು ಮದುವೆ ಸಿದ್ಧವಾಗಿದ್ದಾರೆ. ಹೈದ್ರಾಬಾದ್ ಮೂಲಕ ವಿಹಾನ ಎಂಬ ವೈದ್ಯೆಯ ಜೊತೆ ಹೊಸ ಜೀವನ ಆರಂಭಿಸುವುದಾಗಿ ಹೇಳಿಕೊಂಡಿದ್ದಾರೆ.

  ಸೋಶಿಯಲ್ ಮೀಡಿಯಾದಲ್ಲಿ ವೈರಲ್

  ಸೋಶಿಯಲ್ ಮೀಡಿಯಾದಲ್ಲಿ ವೈರಲ್

  ಸಿರೀಶ್ ಭಾರಧ್ವಜ್ ಮತ್ತು ಆತನ ಭಾವಿ ಪತಿ ವಿವಾನ ಜೊತೆಯಲ್ಲಿರುವ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೋಗಳನ್ನ ನೋಡಿದ ನೆಟ್ಟಿಗರ ಶುಭ ಕೋರಿದ್ದಾರೆ. ಈ ಬಗ್ಗೆ ಅಧಿಕೃತವಾಗಿ ಘೋಷಣೆ ಮಾಡದ ಸಿರೀಶ್ ಸದ್ಯ ಬಿಜೆಪಿ ಪಕ್ಷದಲ್ಲಿ ತೊಡಗಿಕೊಂಡಿದ್ದಾರೆ ಎನ್ನಲಾಗಿದೆ.

  ಸಿನಿಮಾರಂಗಕ್ಕೆ ಚಿರು ಅಳಿಯ

  ಸಿನಿಮಾರಂಗಕ್ಕೆ ಚಿರು ಅಳಿಯ

  2016ರಲ್ಲಿ ಮೆಗಾಸ್ಟಾರ್ ಪುತ್ರಿ ಶ್ರೀಜಾ ಅವರನ್ನ ವರಿಸಿದ ಕಲ್ಯಾಣ್, ಈಗ ಸಿನಿಮಾ ಇಂಡಸ್ಟ್ರಿಗೆ ಬರುವ ತಯಾರಿ ನಡೆಸಿದ್ದಾರೆ. ಈಗಾಗಲೇ ಆಕ್ಟಿಂಗ್ ತರಬೇತಿ ಪಡೆದುಕೊಂಡಿರುವ ಕಲ್ಯಾಣ್, ಡ್ಯಾನ್ಸ್, ಫೈಟ್, ಡೈಲಾಗ್ ಡಿಲವರಿ ಎಲ್ಲದರ ಬಗ್ಗೆಯೂ ಕಲಿತಿದ್ದಾರೆ ಎನ್ನಲಾಗಿದೆ.

  ಸೈರಾದಲ್ಲಿ ನಟನೆ

  ಸೈರಾದಲ್ಲಿ ನಟನೆ

  ಸದ್ಯ ಮೆಗಾಸ್ಟಾರ್ ಚಿರಂಜೀವಿ ಸೈರಾ ನರಸಿಂಹ ರೆಡ್ಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಅಮಿತಾಬ್ ಬಚ್ಚನ್, ಸುದೀಪ್, ವಿಜಯ್ ಸೇತುಪತಿ, ಜಗಪತಿ ಬಾಬು, ನಯನತಾರ, ತಮನ್ನಾ ಸೇರಿದಂತೆ ಹಲವರು ನಟಿಸಿದ್ದು, ಆಗಸ್ಟ್ ತಿಂಗಳಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.

  English summary
  Telugu megastar Chiranjeevi ex son in law sirish bharadwaj found his new girlfriend. he was divorced from Chiranjeevi daughter shreeja in 2016.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X