twitter
    For Quick Alerts
    ALLOW NOTIFICATIONS  
    For Daily Alerts

    200 ಜನರಿಗೆ ವಿದ್ಯೆ, 150 ಜನರಿಗೆ ಹೃದಯ ಚಿಕಿತ್ಸೆ: ಈ ನಟನ ಮಹಾನ್ ಕೆಲಸಕ್ಕೆ ಭೇಷ್

    |

    ಸಿನಿಮಾ ನಟರು ಅಂದ್ರೆ ಕೇವಲ ಸಿನಿಮಾಗಳ ಮೂಲಕ ಸಂದೇಶ ಹೇಳಿ, ಭೋದನೆ ಮಾಡಿ, ಒಳ್ಳೆಯದನ್ನ ಮಾಡಿ ಎಂದು ಹೇಳುವುದು ಮಾತ್ರವಲ್ಲ. ನಿಜ ಜೀವನದಲ್ಲಿ ತಾವೂ ಕೂಡ ಅಂತಹ ಕೆಲಸಗಳನ್ನ ಮಾಡಿ ಜನಕ್ಕೆ ಸ್ಫೂರ್ತಿಯಾಗಬೇಕು.

    ಬಡವರಿಗೆ, ವೃದ್ಧರಿಗೆ, ಅನಾಥರಿಗೆ, ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಅನೇಕ ಸಿನಿಮಾ ಕಲಾವಿದರಿದ್ದಾರೆ. ಕೆಲವರು ಯಾರಿಗೂ ಹೇಳದೆ ಒಳ್ಳೆಯ ಕೆಲಸಗಳನ್ನ ಮಾಡ್ತಾರೆ. ಮತ್ತೆ ಕೆಲವರು ತಾವು ಮಾಡುವ ಕೆಲಸ ಮತ್ತಷ್ಟು ಜನರಿಗೆ ಸ್ಫೂರ್ತಿ ಆಗಬೇಕು ಎಂದು ಗೊತ್ತಾಗುವಂತೆ ಮಾಡ್ತಾರೆ.

    ಇಂತವರಲ್ಲಿ ನೃತ್ಯ ಸಂಯೋಜಕ, ನಟ, ನಿರ್ದೇಶಕ, ನಿರ್ಮಾಪಕರೂ ಆಗಿರುವ ರಾಘವ ಲಾರೆನ್ಸ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ನಿಲ್ತಾರೆ ಅಂದ್ರೆ ತಪ್ಪಾಗಲಾರದು. ಯಾಕಂದ್ರೆ, ಅವರು ಮಾಡುತ್ತಿರುವ ಸಾಮಾಜಿಕ ಕೆಲಸಗಳು ಆಗಿವೆ. ಇತ್ತೀಚಿಗಷ್ಟೆ ಕಾಂಚನಾ 3 ಚಿತ್ರದ ಪ್ರಿ-ರಿಲೀಸ್ ಕಾರ್ಯಕ್ರಮದಲ್ಲಿ ಈ ಬಗ್ಗೆ ಸ್ವತಃ ಚಿರಂಜೀವಿ ಕೂಡ ಮಾತನಾಡಿದ್ದಾರೆ. ಅಷ್ಟಕ್ಕೂ, ಲಾರೆನ್ಸ್ ಮಾಡುತ್ತಿರುವ ಕೆಲಸಗಳೇನು? ಮುಂದೆ ಓದಿ.....

    200 ಜನರಿಗೆ ವಿದ್ಯೆ ಕೊಡಿಸುತ್ತಿದ್ದಾರೆ

    200 ಜನರಿಗೆ ವಿದ್ಯೆ ಕೊಡಿಸುತ್ತಿದ್ದಾರೆ

    ನಟ ರಾಘವ ಲಾರೆನ್ಸ್ ಹೆಸರಿನಲ್ಲಿ ಒಂದು ಚಾರಿಟಬಲ್ ಟ್ರಸ್ಟ್ ಸ್ಥಾಪನೆಯಾಗಿದೆ. ಇದಕ್ಕೆ ಲಾರೆನ್ಸ್ ಅವರೇ ಸಂಸ್ಥಾಪಕರು. ಈ ಸಂಸ್ಥೆ ಮೂಲಕ ಅನೇಕ ಬಡ ವಿದ್ಯಾರ್ಥಿಗಳಿಗೆ ನೆರವು ಕೊಟ್ಟಿದ್ದಾರೆ ಮತ್ತು ಕೊಡುತ್ತಿದ್ದಾರೆ. ಸುಮಾರು 200 ವಿದ್ಯಾರ್ಥಿಗಳಿಗೆ ವಿದ್ಯೆ ಕೊಡಿಸುವಂತಹ ಮಹಾನ್ ಕೆಲಸವನ್ನ ಈ ಟ್ರಸ್ಟ್ ಮೂಲಕ ಮಾಡ್ತಿದ್ದಾರೆ.

    ಹೃದಯ ಚಿಕಿತ್ಸೆ ಮಾಡಿಸುತ್ತಿದ್ದಾರೆ

    ಹೃದಯ ಚಿಕಿತ್ಸೆ ಮಾಡಿಸುತ್ತಿದ್ದಾರೆ

    ವಿದ್ಯಾರ್ಥಿಗಳಿಗೆ ವಿದ್ಯಾಬ್ಯಾಸ ಕೊಡಿಸುವುದು ಮಾತ್ರವಲ್ಲ, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಡಜನರಿಗೆ ಹೃದಯ ಚಿಕಿತ್ಸೆ ಕೊಡಿಸುವಂತಹ ಕೆಲಸವೂ ಮಾಡಿದ್ದಾರೆ. ಸುಮಾರು 150 ಜನರಿಗೆ ಸರ್ಜರಿ ಮಾಡಿಸಿ ಜನರ ಮನಸ್ಸು ಗೆದ್ದಿದ್ದಾರೆ. ಜೊತೆಗೆ 60 ಜನರನ್ನ ದತ್ತು ಪಡೆದು ಅವರಿಗೂ ನೆರವಾಗಿದ್ದಾರೆ.

    ಮೆಗಾಸ್ಟಾರ್ ಮೆಚ್ಚುಗೆ

    ಮೆಗಾಸ್ಟಾರ್ ಮೆಚ್ಚುಗೆ

    ಲಾರೆನ್ಸ್ ನೃತ್ಯ ಸಂಯೋಜಕರಾಗಿ ವೃತ್ತಿ ಆರಂಭಿಸಿದಾಗ ನಟ ಚಿರಂಜೀವಿ ಚಿತ್ರಗಳಿಗೆ ಹೆಚ್ಚು ಕೊರಿಯೋಗ್ರಫಿ ಮಾಡಿದ್ದಾರೆ. ಚಿರಂಜೀವಿ ಅಂದ್ರೆ ಲಾರೆನ್ಸ್ ಅವರಿಗೂ ಅಚ್ಚುಮೆಚ್ಚು. ಸಿನಿಮಾ ಕೆಲಸಗಳನ್ನ ಬಿಟ್ಟು ಸಾಮಾಜಿಕ ಕಾರ್ಯಕ್ರಮಗಳನ್ನ ಮಾಡುವ ಲಾರೆನ್ಸ್ ಬಗ್ಗೆ ಚಿರಂಜೀವಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 'ಕಾಂಚನಾ-3' ಸಿನಿಮಾದ ಪ್ರೀ-ರಿಲೀಸ್ ಕಾರ್ಯಕ್ರಮದಲ್ಲಿ ಚಿರು ಮಾತನಾಡಿದ್ದಾರೆ.

    10 ಲಕ್ಷ ಧನಸಹಾಯ ಮಾಡಿದ ಚಿರು

    10 ಲಕ್ಷ ಧನಸಹಾಯ ಮಾಡಿದ ಚಿರು

    ಲಾರೆನ್ಸ್ ಅವರ ಈ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ನಟ ಚಿರಂಜೀವಿ, ಲಾರೆನ್ಸ್ ಚಾರಿಟಬಲ್ ಟ್ರಸ್ಟ್ ಗೆ 10 ಲಕ್ಷ ರೂ ಹಣ ಸಹಾಯ ಮಾಡಿದ್ದಾರೆ. ರಾಜ್ಯದ ಎಲ್ಲಾ ಕಡೆಯೂ ತಮ್ಮ ಟ್ರಸ್ಟ್ ಮೂಲಕ ಜನರಿಗೆ ಸಹಾಯವಾಗಲಿ ಎಂದು ಶುಭಹಾರೈಸಿದ್ದಾರೆ ಮೆಗಾಸ್ಟಾರ್ ಚಿರು.

    English summary
    Telugu megastar chiranjeevi has praised actor choreographer raghava lawrence for his social work.
    Thursday, April 18, 2019, 13:29
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X