For Quick Alerts
  ALLOW NOTIFICATIONS  
  For Daily Alerts

  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಚಿರಂಜೀವಿ ಸರ್ಜಾ-ಮೇಘನಾ ರಾಜ್

  By Pavithra
  |
  ಹೇಗಿತ್ತು ಗೊತ್ತಾ ಚಿರು ಮೇಘನಾ ಮದುವೆ ? | Oneindia Kannada

  ಸ್ಯಾಂಡಲ್ ವುಡ್ ನ ತಾರಾ ಜೋಡಿಗಳಾದ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಕ್ರಿಶ್ಚಿಯನ್ ಸಂಪ್ರದಾಯದಂತೆ ಇಂದು (ಏ-29)ಬೆಂಗಳೂರಿನಲ್ಲಿ ನಡೆದ ಮದುವೆಯ ಮೂಲಕ ಚಿರು ಹಾಗೂ ಮೇಘನಾ ರಾಜ್ ತಮ್ಮ ಸಾಂಸಾರಿಕ ಜೀವನವನ್ನ ಆರಂಭಿಸಿದರು.

  ವೈಟ್ ಗೌನ್ ಧರಿಸಿ ಕೋರಮಂಗಲದಲ್ಲಿರೋ ಸೇಂಟ್ ಆಂಥೋನಿ ಫ್ರೈರಿ ಚರ್ಚ್ ಗೆ ನಟಿ ಮೇಘನಾ ರಾಜ್ ಆಗಮಿಸಿದ್ರೆ, ನಟ ಚಿರಂಜೀವಿ ಸರ್ಜಾ ಸೂಟ್ ನಲ್ಲಿ ಮಿಂಚಿದರು. ಎರಡು ಕುಟುಂಬಸ್ಥರು ಚರ್ಚ್ ನ ಪ್ರಾರ್ಥನೆಯಲ್ಲಿ ಭಾಗಿ ಆಗಿ, ಫಾದರ್ ಪ್ರವೀಣ್ ಕುಮಾರ್ ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯನ್ನ ನಡೆಸಿಕೊಟ್ಟರು.

  ಚಿರು-ಮೇಘನಾ ಕಲ್ಯಾಣಕ್ಕೆ ಬರುವ ಅತಿಥಿಗಳು ಇವರೇಚಿರು-ಮೇಘನಾ ಕಲ್ಯಾಣಕ್ಕೆ ಬರುವ ಅತಿಥಿಗಳು ಇವರೇ

  ಚಿರು-ಮೇಘನಾ ಮದುವೆ ಸಂಭ್ರಮದಲ್ಲಿ ಚಿತ್ರರಂಗದ ತಾರೆಯರಾದ ಹಿರಿಯ ನಟಿ ತಾರ, ಅರ್ಜುನ್ ಸರ್ಜಾ, ಐಶ್ವರ್ಯ ಸರ್ಜಾ, ಪ್ರಜ್ವಲ್ ದೇವರಾಜ್ ನಿರ್ದೇಶಕ ಪನ್ನಗ ಭರಣ, ದೃವಾ ಸರ್ಜಾ, ಐಶ್ವರ್ಯ ಸರ್ಜಾ, ಆಶಾ ರಾಣಿ ಸೇರಿದಂತೆ ಹಲವರು ಕಾಣಿಸಿಕೊಂಡರು.

  ಫಾದರ್ ಸಮ್ಮುಖದಲ್ಲಿ ಇಬ್ಬರು ಬೈಬಲ್ ಮುಟ್ಟಿ, ಮದುವೆಗೆ ಸಂಪೂರ್ಣ ಒಪ್ಪಿಗೆ ನೀಡಿರುವುದಾಗಿ ಪ್ರಮಾಣ ಮಾಡಿದರು. ನಂತರ ಶಿಲುಬೆ ಗುರುತು ಹಾಕಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಉಂಗುರ ಬದಲಿಸಿಕೊಂಡರು.

  ಅಂದ್ಹಾಗೆ, ನಟಿ ಮೇಘನಾ ರಾಜ್ ಹಾಫ್ ಕ್ರಿಶ್ಚಿಯನ್. ಅರ್ಥಾತ್, ಮೇಘನಾ ರಾಜ್ ತಾಯಿ ಪ್ರಮೀಳಾ ಜೋಷಾಯಿ ಕ್ರಿಶ್ಚಿಯನ್. ಹೀಗಾಗಿ ಕ್ರಿಸ್ತ ಸಂಪ್ರದಾಯದಂತೆ ಮೇಘನಾ ಇಂದು ಹೊಸ ಜೀವನಕ್ಕೆ ಅಡಿಯಿಟ್ಟರು.

  ಚರ್ಚ್ ನಲ್ಲಿ ಮದುವೆ ಮುಗಿಸಿಕೊಂಡಿರುವ ಈ ಜೋಡಿಯ ವಿವಾಹ ಮಹೋತ್ಸವ ಮೇ 2 ರಂದು ಹಿಂದೂ ಸಂಪ್ರದಾಯದಂತೆ ನಡೆಯಲಿದೆ. ಮೇ 2 ರಂದು ನಡೆಯುವ ವಿವಾಹದಲ್ಲಿ ಚಿತ್ರರಂಗದ ಗಣ್ಯರು ಭಾಗಿ ಆಗಲಿದ್ದಾರೆ.

  ಚಿರು-ಮೇಘನಾ ಕಲ್ಯಾಣಕ್ಕೆ ಬರುವ ಅತಿಥಿಗಳು ಇವರೇಚಿರು-ಮೇಘನಾ ಕಲ್ಯಾಣಕ್ಕೆ ಬರುವ ಅತಿಥಿಗಳು ಇವರೇ

  English summary
  Kannada actor Chiranjeevi Sarja and Actress Meghana Raj got married today. Wedding took place at St. Anthony Frery Church in Koramangala according to Christian tradition.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X