For Quick Alerts
  ALLOW NOTIFICATIONS  
  For Daily Alerts

  ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ ಕೈ ಮೇಲೆ ಚಿರು, ರಾಯನ್ ಟ್ಯಾಟು!

  |

  ಚಿರಂಜೀವಿ ಸರ್ಜಾ ಅಗಲಿದ ಬಳಿಕ ಆ ನೋವಿನಿಂದ ಮೇಘನಾ ರಾಜ್ ಹೊಸ ಬದುಕನ್ನು ನಿಧಾನವಾಗಿ ಮತ್ತೆ ಕಟ್ಟುಕೊಳ್ಳುತ್ತಿದ್ದಾರೆ. ನೋವನ್ನು ಮರೆಯುವ ಪ್ರಯತ್ನ ಮಾಡುತ್ತಿದ್ದಾರೆ. ಸಿನಿಮಾ, ಕಿರುತೆರೆ ಅಂತ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಈ ಮಧ್ಯೆ ಮರು ಮದುವೆ ಬಗ್ಗೆನೂ ಸುದ್ದಿ ಹಬ್ಬಿತ್ತು.

  ಕೆಲವು ದಿನಗಳ ಹಿಂದಷ್ಟೇ ಮೇಘನಾ ರಾಜ್ ನೀಡಿದ್ದಾರೆ ಎನ್ನಲಾದ ಸಂದರ್ಶನವೊಂದು ವೈರಲ್ ಆಗಿತ್ತು. ಇದರಲ್ಲಿ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಮಾತಾಡಿದ್ದಾರೆ ಎನ್ನಲಾಗಿತ್ತು. ಈ ಸಂದರ್ಶನ ವೈರಲ್ ಆಗುತ್ತಿದ್ದಂತೆ ಮೇಘನಾ ರಾಜ್ ಎರಡನೇ ಮದುವೆ ಬಗ್ಗೆ ಎದ್ದಿರುವ ಮ್ಯಾಟರ್ ಬಗ್ಗೆ ಸಾಕಷ್ಟು ಚರ್ಚೆಗಳಾಗಿತ್ತು. ಮೇಘನಾ ರಾಜ್ ಏನು ಹೇಳಬೇಕೋ ಅದನ್ನೆಲ್ಲಾ ಹೇಳಿದ್ದರೂ, ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಆಗೋದು ಮಾತ್ರ ನಿಂತಿರಲಿಲ್ಲ.

  2ನೇ ಮದುವೆ ಬಗ್ಗೆ ಮೇಘನಾ ರಾಜ್ ಪ್ರತಿಕ್ರಿಯೆ: ಹೇಳಿದ್ದೇನು?2ನೇ ಮದುವೆ ಬಗ್ಗೆ ಮೇಘನಾ ರಾಜ್ ಪ್ರತಿಕ್ರಿಯೆ: ಹೇಳಿದ್ದೇನು?

  ಈ ಬೆನ್ನಲ್ಲೇ ಮೇಘನಾ ರಾಜ್ ಒಂದು ಫೋಟೊ ಅದೆಲ್ಲದಕ್ಕೂ ಉತ್ತರ ಕೊಟ್ಟಿದೆ. ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಇದೇ ಫೋಟೊ ವೈರಲ್ ಆಗುತಿದೆ. ಮೇಘನಾ ಹಾಗೂ ಚಿರಂಜೀವಿ ಸರ್ಜಾ ಬಗ್ಗೆ ಮತ್ತೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ. ಅಷ್ಟಕ್ಕೂ ಮೇಘನಾ ಶೇರ್ ಮಾಡಿದ ಆ ಫೋಟೊ ಯಾವುದು? ಆ ಫೋಟೊ ವಿಶೇಷತೆಯೇನು ಅನ್ನೋ ಡಿಟೈಲ್ಸ್ ಇಲ್ಲಿದೆ.

  2ನೇ ಮದುವೆ ಬಗ್ಗೆ ಮೇಘನಾ ಹೇಳಿದ್ದೇನು?

  2ನೇ ಮದುವೆ ಬಗ್ಗೆ ಮೇಘನಾ ಹೇಳಿದ್ದೇನು?

  ಮೇಘನಾ ರಾಜ್ ಬಾಲಿವುಡ್‌ ಬಬಲ್ ಅನ್ನೋ ವೆಬ್ ಸೈಟ್‌ಗೆ ಸಂದರ್ಶನ ನೀಡಿದ್ದು, ಅದರಲ್ಲಿ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಮೇಘನಾ ಎರಡನೇ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ ಎನ್ನಲಾದ ಸಂದರ್ಶನದ ತುಣುಕುಗಳ ಬಗ್ಗೆ ಚರ್ಚೆಯಾಗಿತ್ತು. "ತನ್ನ ಸುತ್ತ ಇರುವ ಅದೆಷ್ಟೋ ಜನರು ಮತ್ತೆ ಮದುವೆಯಾಗಲು ಹೇಳುತ್ತಿದ್ದಾರೆ. ಮತ್ತೆ ಕೆಲವರು ಒಂಟಿಯಾಗಿದ್ದುಕೊಂಡು ಮಗ ರಾಯನ್‌ ಅನ್ನು ನೋಡಿಕೊಳ್ಳುವಂತೆ ಸಲಹೆ ನೀಡುತ್ತಿದ್ದಾರೆ. ಎರಡನ್ನೂ ಹೇಳುವ ಜನರೂ ಇದ್ದಾರೆ." ಎಂದು ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು.

  ಚಿರು, ರಾಯನ್ ಟ್ಯಾಟು

  ಚಿರು, ರಾಯನ್ ಟ್ಯಾಟು

  ಎರಡನೇ ಮದುವೆ ಬಗ್ಗೆ ವದಂತಿಗಳು ಹರಿದಾಡುತ್ತಿರೋ ಬೆನ್ನಲ್ಲೇ ಮೇಘನಾ ರಾಜ್ ಪತ್ನಿ ಚಿರಂಜೀವಿ ಸರ್ಜಾ ಹಾಗೂ ರಾಯನ್​ ರಾಜ್​ ಸರ್ಜಾ ಹೆಸರುಗಳನ್ನು ಹಚ್ಚೆ ಹಾಕಿಸಿಕೊಂಡಿದ್ದಾರೆ. ತಮ್ಮ ಬದುಕಿನಲ್ಲಿ ಇವರಿಬ್ಬರೂ ತುಂಬಾನೇ ಮುಖ್ಯ ವ್ಯಕ್ತಿಗಳು ಎಂಬುದನ್ನು ಈ ಮೂಲಕ ಸಾರಿ ಹೇಳಿದ್ದಾರೆ. ಕೈಯಲ್ಲಿ ಚಿರಂಜೀವಿ ಸರ್ಜಾ ಹಾಗೂ ರಾಯನ್ ಟ್ಯೂಟು ವಿಶೇಷವಾಗಿದ್ದು, ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದು ಎರಡನೇ ಮದುವೆ ಕೊಟ್ಟ ಉತ್ತರ ಎಂದು ಹಲವರು ಹೇಳುತ್ತಿದ್ದಾರೆ.

  2ನೇ ಮದುವೆ ಬಗ್ಗೆ ಯೋಚಿಸಿಲ್ಲ ಎಂದಿದ್ದರು

  2ನೇ ಮದುವೆ ಬಗ್ಗೆ ಯೋಚಿಸಿಲ್ಲ ಎಂದಿದ್ದರು

  ಮೇಘನಾ ರಾಜ್ ಬಾಲಿವುಡ್‌ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಎರಡನೇ ಮದುವೆ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದ್ದಾಗಿ ವರದಿಯಾಗಿದೆ. " ನಾಳೆ ಹೇಗಿರುತ್ತೆ ಎಂದು ನಾನು ಯೋಚಿಸುವುದಿಲ್ಲ. ಮುಂದಿನ ಜೀವನ ಹೇಗಿರುತ್ತೆ ಎಂದೂ ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ಈ ವಿಚಾರದ ಬಗ್ಗೆ ಇನ್ನೂ ಯೋಚಿಸಿಲ್ಲ." ಎಂದು ಪ್ರತಿಕ್ರಿಯಿಸಿದ್ದಾರೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿತ್ತು.

  ಅಮೆರಿಕದಲ್ಲಿ ಮೇಘನಾ ರಾಜ್

  ಅಮೆರಿಕದಲ್ಲಿ ಮೇಘನಾ ರಾಜ್

  ಸದ್ಯ ಮೇಘನಾ ರಾಜ್ ಅಮೆರಿಕದಲ್ಲಿದ್ದಾರೆ. ಅಲ್ಲಿನ ಕ್ಯಾಲಿಪೋರ್ನಿಯಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮೇಘನಾ ರಾಜ್ ಭಾಗಿಯಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಮೇಘನಾ ರಾಜ್ ಈ ಟ್ಯಾಟುಗಳ ಮೂಲಕ ಎರಡನೇ ಮದುವೆ ಬಗ್ಗೆ ಸ್ಪಷ್ಟನೆ ನೀಡಿದಂತಿದೆ. ಅಂದ್ಹಾಗೆ ಮೇಘನಾ ರಾಜ್ ಸಿನಿಮಾ ಹಾಗೂ ರಿಯಾಲಿಟಿ ಶೋ ಅಂತ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.

  English summary
  Chiranjeevi Sarja And Raayan Tattoo On Meghana Raj Hand After 2nd Marriage Statement, Know More.
  Friday, August 26, 2022, 18:54
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X