For Quick Alerts
  ALLOW NOTIFICATIONS  
  For Daily Alerts

  ಚಿರು ಸರ್ಜಾ ಹುಟ್ಟುಹಬ್ಬ: ದರ್ಶನ್, ಸುದೀಪ್, ಸೃಜನ್ ಶುಭಾಶಯ

  |

  ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ನಮ್ಮಗಲಿ ನಾಲ್ಕು ತಿಂಗಳು ಕಳೆದಿದೆ. ಚಿರು ಸರ್ಜಾ ಅವರನ್ನು ಕಳೆದುಕೊಂಡಿದ್ದೀವಿ ಎಂದು ಊಹಿಸಲು ಸಾಧ್ಯವಿಲ್ಲ. ಅಷ್ಟರಲ್ಲೇ 'ವಾಯುಪತ್ರ'ನ ಹುಟ್ಟುಹಬ್ಬ ಬಂದಿದೆ. ಚಿರು ಸರ್ಜಾ ಅವರ 36ನೇ ವರ್ಷದ ಜನುಮದಿನವನ್ನು ಅಭಿಮಾನಿಗಳು, ಕುಟುಂಬದವರು ಆಚರಿಸುತ್ತಿದ್ದಾರೆ.

  ಸಿನಿ ಇಂಡಸ್ಟ್ರಿಯಲ್ಲಿ ಒಬ್ಬ ಒಳ್ಳೆಯ ಸ್ನೇಹಿತ, ನಟನನ್ನು ಕಳೆದುಕೊಂಡ ಸ್ಟಾರ್ಸ್ ಇಂದು ಅವರ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಚಿರು ಜೊತೆಗಿನ ನೆನಪನ್ನು ಹಂಚಿಕೊಂಡಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್, ಸುದೀಪ್, ಅರ್ಜುನ್ ಸರ್ಜಾ, ಪ್ರಜ್ವಲ್ ದೇವರಾಜ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ. ಮುಂದೆ ಓದಿ....

  ಸಹೋದರನಂತಿದ್ದ ಚಿರು ಸರ್ಜಾರನ್ನು ಸ್ಮರಿಸಿದ ಕಿಚ್ಚ ಸುದೀಪ್ಸಹೋದರನಂತಿದ್ದ ಚಿರು ಸರ್ಜಾರನ್ನು ಸ್ಮರಿಸಿದ ಕಿಚ್ಚ ಸುದೀಪ್

  ಯಾವತ್ತಿಗೂ ನಮ್ಮಲ್ಲಿ ಚಿರಂಜೀವಿಯಾಗಿರುತ್ತಾನೆ

  ಯಾವತ್ತಿಗೂ ನಮ್ಮಲ್ಲಿ ಚಿರಂಜೀವಿಯಾಗಿರುತ್ತಾನೆ

  ''ಇಂದು ನನ್ನ ಪ್ರೀತಿಯ ಆತ್ಮೀಯ ಗೆಳೆಯ, ಸ್ಯಾಂಡಲ್ ವುಡ್ ನ ಯುವ ಸಾಮ್ರಾಟ್ ಚಿರಂಜೀವಿ ಹುಟ್ಟಿದ ದಿನ. ಅವ್ನು ಇವತ್ತು ದೈಹಿಕವಾಗಿ ನಮ್ಮೊಟ್ಟಿಗೆ ಇರದೇ ಇರಬಹುದು. ಆದ್ರೆ ಯಾವತ್ತಿಗೂ ನಮ್ಮಲ್ಲಿ ಚಿರಂಜೀವಿಯಾಗಿರುತ್ತಾನೆ. ಎಂದೆಂದೂ ಚಿರು ಅಮರ...'' - ಸೃಜನ್ ಲೋಕೇಶ್

  ಡಿ ಬಾಸ್ ಶುಭಾಶಯ

  ಡಿ ಬಾಸ್ ಶುಭಾಶಯ

  'ಹುಟ್ಟುಹಬ್ಬದ ಹಾರ್ಧಿಕ ಶುಭಾಶಯಗಳು ಚಿರು' ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶ್ ಮಾಡಿದ್ದು, ''ರಾಜಮಾರ್ತಾಂಡ ಚಿತ್ರದ ಇಂಟ್ರೋ ಸಾಂಗ್ ಇಂದು ಬಿಡುಗಡೆಯಾಗಿದೆ. ನೋಡಿ ಹರಸಿ'' ಎಂದು ಪ್ರಾರ್ಥಿಸಿದ್ದಾರೆ.

  ಚಿರಂಜೀವಿ ಸರ್ಜಾ ಇಲ್ಲದ ಸಮಯದಲ್ಲಿ ಕಾಡುವ 'ದಿ ಬೆಸ್ಟ್' ಹಾಡುಗಳುಚಿರಂಜೀವಿ ಸರ್ಜಾ ಇಲ್ಲದ ಸಮಯದಲ್ಲಿ ಕಾಡುವ 'ದಿ ಬೆಸ್ಟ್' ಹಾಡುಗಳು

  ನನ್ನ ಆಲೋಚನೆಗಳಲ್ಲಿ ನೀನು ಇರ್ತೀಯಾ ಮಗನೇ

  ನನ್ನ ಆಲೋಚನೆಗಳಲ್ಲಿ ನೀನು ಇರ್ತೀಯಾ ಮಗನೇ

  ''36 ವರ್ಷಗಳ ಹಿಂದೆ ನೀವು ಹುಟ್ಟಿದಾಗ ನಾನು ಸಂತೋಷದಿಂದ ಕುಪ್ಪಳಿಸಿದ್ದೆ. ವಿಧಿಯ ಕ್ರೌರ್ಯವನ್ನು ನಾನು ನಂಬಿರಲಿಲ್ಲ ... ನಿಮ್ಮ ಹುಟ್ಟುಹಬ್ಬದಂದು ನಾನು ಈ ಮಾತುಗಳನ್ನು ಬರೆಯುತ್ತೇನೆ ಎಂದು ನನ್ನ ಹುಚ್ಚು ಕನಸಿನಲ್ಲಿ ಎಂದಿಗೂ ಯೋಚಿಸಲಿಲ್ಲ.. ಯಾವಾಗಲೂ ನನ್ನ ಆಲೋಚನೆಗಳಲ್ಲಿ ನೀನು ಇದ್ದೀಯಾ ಮಗನೇ. ನನ್ನ ಮಗುವನ್ನು ತುಂಬಾ ಪ್ರೀತಿಸುತ್ತೇನೆ'' ಎಂದು ಅರ್ಜುನ್ ಸರ್ಜಾ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

  ಲವ್ ಯೂ ಸಹೋದರ

  ಲವ್ ಯೂ ಸಹೋದರ

  ''ಅವರನ್ನು ಪ್ರೀತಿಸುತ್ತಿದ್ದ ಮತ್ತು ಅವರ ಬಗ್ಗೆ ತಿಳಿದಿದ್ದ ಎಲ್ಲರೂ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಸದಾ ನಗುತ್ತಿದ್ದ ವ್ಯಕ್ತಿ ಹಾಗೂ ವಿಷಯಗಳನ್ನು ಬಹಳ ಚೆನ್ನಾಗಿ ಸ್ವೀಕರಿಸುತ್ತಿದ್ದ. ಸ್ವರ್ಗದಲ್ಲಿ ಸ್ಥಾನ ಪಡೆದುಕೊಂಡಿದ್ದು, ಶಾಂತಿಯಿಂದ ನೆಲೆಸಿದ್ದಾನೆ ಎಂದು ನಂಬಿದ್ದೇನೆ. ಲವ್ ಯೂ ಸಹೋದರ'' ಎಂದು ಸುದೀಪ್ ಸ್ಮರಿಸಿಕೊಂಡಿದ್ದಾರೆ.

  ಲವ್ ಯು ಸ್ನೇಹಿತ

  ಲವ್ ಯು ಸ್ನೇಹಿತ

  ಲವ್ ಯು ಸ್ನೇಹಿತ !! ಜನ್ಮದಿನದ ಶುಭಾಶಯಗಳು!! ನೀವು ನನ್ನ ಹೃದಯದಲ್ಲಿ ಮತ್ತು ಇತರ ಹೃದಯಗಳ ಕೋಟಿಯಲ್ಲಿ ಶಾಶ್ವತವಾಗಿ ಜೀವಿಸುವಿರಿ !!

  ನನ್ನ ಮನೆಯಲ್ಲಿ ಚಿರುಗೆ ಒಂದು ದೇಗುಲ ಮಾಡಿ ಅಲ್ಲಿ ಅವನ ಫೋಟೋ ಇಟ್ಟಿದೀನಿ | Pannaga Bharana | Chiranjeevi Sarja
  ಬೆಳ್ಳಿತೆರೆಯಲ್ಲಿ ಎಂದೆಂದಿಗೂ ಜೀವಂತ

  ಬೆಳ್ಳಿತೆರೆಯಲ್ಲಿ ಎಂದೆಂದಿಗೂ ಜೀವಂತ

  "ವಾಯುಪುತ್ರ"ನಾಗಿ ಬಂದು ಎಲ್ಲರ ಮನದಲ್ಲೂ ಹಚ್ಚಹಸಿರಾಗಿ ಉಳಿದಿರುವ "ರಾಜಮಾರ್ತಾಂಡ" ಚಿರು ಸರ್ಜಾ ರವರ ಹುಟ್ಟುಹಬ್ಬದ ನೆನಪುಗಳು ...ನೀವು ಬೆಳ್ಳಿತೆರೆಯಲ್ಲಿ ಎಂದೆಂದಿಗೂ ಜೀವಂತ'' ಎಂದು ನಿರ್ದೇಶನ ಸುನಿ ಟ್ವೀಟ್ ಮಾಡಿದ್ದಾರೆ.

  English summary
  Happy Birthday Chiranjeevi Sarja: Darshan, Srujan lokesh, Sudeep and Other Celebrities remember the late actor on his birthday.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X