For Quick Alerts
  ALLOW NOTIFICATIONS  
  For Daily Alerts

  ಈ ವರ್ಷದ ಸೂಪರ್ ಹಿಟ್ ಚಿತ್ರ ಚಿರು 'ಚಂದ್ರಲೇಖ'

  By Rajendra
  |

  ಚಿತ್ರವೊಂದು ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗೆ ಮಾಡಿ ಮಂದಹಾಸ ಬೀರುವುದೆಂದರೆ ಇದೇ ಏನೋ ನೋಡಿ. ಅಬ್ಬಬ್ಬಾ ಎಂದರೆ ಈ ಚಿತ್ರ ಐವತ್ತು ದಿನ, ಇಲ್ಲ ಸೆಂಚುರಿ ಪೂರೈಸಬಹುದು ಎಂದುಕೊಂಡವರೇ ಹೆಚ್ಚು. ಆದರೆ ಅವರ ಎಲ್ಲಾ ಊಹೆಗಳನ್ನು ಉಲ್ಟಾಪಲ್ಟಾ ಮಾಡಿದೆ 'ಚಂದ್ರಲೇಖ' ಚಿತ್ರ.

  ಈ ಹಾರರ್ ಚಿತ್ರಗಳೇ ಹೀಗೆ. ಆರಂಭದಲ್ಲಿ ಸದ್ದು ಅಷ್ಟಾಗಿ ಇರುವುದಿಲ್ಲ. ದಿನಗಳು ಉರುಳಿದಂತೆ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಾಗುತ್ತಾ ಹೋಗುತ್ತದೆ. ಚಿರಂಜೀವಿ ಸರ್ಜಾ ಅಭಿನಯದ ಚಂದ್ರಲೇಖ ಚಿತ್ರ ಯಶಸ್ವಿ 20ನೇ ವಾರ ಪೂರೈಸಿ ಮುನ್ನುಗ್ಗುತ್ತಿರುವುದೇ ಇದಕ್ಕೆ ನಿದರ್ಶನ. [ಚಂದ್ರಲೇಖ ಚಿತ್ರ ವಿಮರ್ಶೆ]

  ಇಂದಿನ ದಿನಗಳಲ್ಲಿ ಭಾರಿ ಬಜೆಟ್ ಚಿತ್ರಗಳೇ ಸೆಂಚುರಿ ಪೂರೈಸುವುದು ಕಷ್ಟ. ಆದರೆ ಚಂದ್ರಲೇಖ ಮಾತ್ರ ಒಟ್ಟು 13 ಕೇಂದ್ರಗಳಲ್ಲಿ ಯಶಸ್ವಿಯಾಗಿ 20 ವಾರಗಳನ್ನು ಪೂರೈಸಿದೆ. ಈ ಮೂಲಕ ಈ ವರ್ಷದ ಸೂಪರ್ ಹಿಟ್ ಚಿತ್ರವಾಗಿ ಚಂದ್ರಲೇಖ ಹೊರಹೊಮ್ಮಿದೆ.

  ತೆಲುಗಿನ 'ಪ್ರೇಮ ಕಥಾ ಚಿತ್ರಂ' ರೀಮೇಕ್ ಇದು. ಎನ್ ಓಂ ಪ್ರಕಾಶ್ ರಾವ್ ಅವರು ಆಕ್ಷನ್ ಕಟ್ ಹೇಳಿದ್ದು ಕೆ ವಿ ಶ್ರೀಧರ್ ರೆಡ್ಡಿ ನಿರ್ಮಾಪಕರು. ಜೆ.ಬಿ ಸಂಗೀತ ಇರುವ ಚಿತ್ರದ ಪಾತ್ರವರ್ಗದಲ್ಲಿ ಚಿರಂಜೀವಿ ಸರ್ಜಾ, ಸಾನ್ವಿ ಶ್ರೀನಿವಾಸ್, ನಾಗಶೇಖರ್, ಸಾಧು ಕೋಕಿಲ ಮುಂತಾದವ ಅಭಿನಯವಿದೆ. (ಒನ್ಇಂಡಿಯಾ ಕನ್ನಡ)

  English summary
  Kannada horror movie Chandralekha, starrer Chiranjeevi Sarja and Sanvi Srinivas, successfully completes 20 weeks in 13 centres. The film emerges as this year's superhit film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X