ಹೃದಯ ಹಿಂಡುವಂತೆ ಮಾಡುತ್ತದೆ ಚಿರು ಸರ್ಜಾ ಬರೆದಿದ್ದ ಈ ಕಾಮೆಂಟ್
ಚಿರಂಜೀವಿ ಸರ್ಜಾ ಸದಾ ನಗುತ್ತಾ, ಲವಲವಿಕೆಯಿಂದ ಇರುತ್ತಿದ್ದವರು. ಯಾರೊಂದಿಗೂ ವಿರೋಧ ಕಟ್ಟಿಕೊಳ್ಳದ, ಎಲ್ಲರೊಂದಿಗೆ ಆತ್ಮೀಯತೆಯಿಂದ ಬೆರೆಯುವ ವ್ಯಕ್ತಿತ್ವದವರು. ಅವರ ಸಾಮಾಜಿಕ ಜಾಲತಾಣಗಳಲ್ಲಿನ ಚಟುವಟಿಕೆಗಳನ್ನು ಗಮನಿಸಿದರೆ ಅವರ ಸರಳತೆ ಅರ್ಥವಾಗುತ್ತದೆ.
Recommended Video
ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾಗ್ರಾಂಗಳಲ್ಲಿ ಚಿರಂಜೀವಿ ಸಕ್ರಿಯರಾಗಿರುತ್ತಿದ್ದರು. ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದ ಅವರು ಅದಕ್ಕೆ ಪುಟ್ಟದಾಗಿ ಕ್ಯಾಪ್ಷನ್ ಹಾಕುತ್ತಿದ್ದರು. ಹಾಗೆಯೇ ಅದಕ್ಕೆ ಬರುವ ಕಾಮೆಂಟ್‌ಗಳಿಗೆ ಸಾಧ್ಯವಾದಷ್ಟು ಪ್ರತಿಕ್ರಿಯಿಸುತ್ತಿದ್ದರು. ಬೇರೆ ನಟ-ನಟಿಯರ ಪೋಸ್ಟ್‌ಗಳಿಗೂ ಪ್ರತಿಕ್ರಿಯೆ ನೀಡುತ್ತಿದ್ದರು. ಇತ್ತೀಚೆಗೆ ಅವರು ಹಾಕಿದ್ದ ಕೆಲವು ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳು ವೈರಲ್ ಆಗುತ್ತಿವೆ. ಅವರ ಅಗಲುವಿಕೆಯ ದುಃಖದ ನಡುವೆ ಅವರ ಕೆಲವು ಹಳೆಯ ಕಾಮೆಂಟ್‌ಗಳು ನೋವನ್ನು ಮತ್ತಷ್ಟು ಹೆಚ್ಚಿಸುವಂತಿವೆ. ಮುಂದೆ ಓದಿ...

ನಾನೂ ಹುಟ್ಟಿದೆ...
ಎರಡನೆಯ ಮಗು ಜನಿಸುವ ಕೆಲವು ತಿಂಗಳ ಮೊದಲು ರಾಧಿಕಾ ಪಂಡಿತ್, ಮೊದಲ ಮಗು ಐರಾ ಜತೆಗಿನ ಮುದ್ದಾದ ಫೋಟೊವೊಂದನ್ನು ಕಳೆದ ವರ್ಷ ಹಂಚಿಕೊಂಡಿದ್ದರು. 'ಈಕೆ ಹುಟ್ಟಿದ ದಿನ ನಾನೂ ಕೂಡ ಹುಟ್ಟಿದೆ. ಅಮ್ಮನಾಗಿ...' ಎಂಬ ಭಾವುಕ ಸಾಲುಗಳನ್ನು ಅವರು ಬರೆದಿದ್ದರು.

ತಿಂಗಳ ಹಿಂದಷ್ಟೇ ಮದುವೆ
ಈ ಫೋಟೊಗೆ ಚಿರಂಜೀವಿ ಸರ್ಜಾ ಮಾಡಿದ್ದ ಕಾಮೆಂಟ್ ಈಗ ವೈರಲ್ ಆಗಿದೆ. ಟ್ರೋಲ್ ಮತ್ತು ಮೀಮ್ ಪುಟಗಳಲ್ಲಿ ಈ ಕಾಮೆಂಟ್ ಸ್ಕ್ರೀನ್ ಶಾಟ್ ಹರಿದಾಡುತ್ತಿದೆ. ರಾಧಿಕಾ ಪಂಡಿತ್ ಮಗುವಿನ ಜತೆಗಿನ ಈ ಫೋಟೊ ಹಾಕುವ ಒಂದು ತಿಂಗಳ ಹಿಂದಷ್ಟೇ ಚಿರಂಜೀವಿ ಮತ್ತು ಮೇಘನಾ ರಾಜ್ ಮದುವೆಯಾಗಿತ್ತು.

ಖುಷಿಯಾಗುತ್ತಿದೆ ಎಂದಿದ್ದ ಚಿರು
ರಾಧಿಕಾ ಬರೆದಿದ್ದ ಸಾಲುಗಳನ್ನು ಮೆಚ್ಚಿಕೊಂಡಿದ್ದ ಚಿರಂಜೀವಿ, 'ಅದು ಬಹಳ ನಿಜ. ಹೇಗೆ ವಿವರಿಸಬೇಕು ಎನ್ನುವುದು ನನಗೆ ಗೊತ್ತಾಗುತ್ತಿಲ್ಲ. ಆದರೆ ಯಶ್ ಮತ್ತು ನಿಮ್ಮ ಬಗ್ಗೆ ನನಗೆ ತುಂಬಾ ಖುಷಿಯಾಗುತ್ತಿದೆ' ಎಂದು ಹೇಳಿದ್ದರು.

ನಿಮ್ಮ ಸರದಿ ಎಂದಿದ್ದ ರಾಧಿಕಾ
ಅದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ್ದ ರಾಧಿಕಾ, 'ಥ್ಯಾಂಕ್ಯೂ ಚಿರು. ಮುಂದಿನ ಸರದಿ ನಿಮ್ಮಿಬ್ಬರದು' ಎಂದು ಹೇಳಿದ್ದರು. ತಮ್ಮ ಕುಟುಂಬಕ್ಕೆ ಹೊಸ ಸದಸ್ಯ ಬರುತ್ತಿದ್ದಾನೆ ಎಂಬ ಸಂಗತಿ ಚಿರಂಜೀವಿ ಅವರನ್ನು ಎಕ್ಸೈಟ್ ಮಾಡಿತ್ತು. ಅದನ್ನು ಅವರೇ ಆಪ್ತರ ಬಳಿ ಹೇಳಿಕೊಂಡಿದ್ದರಂತೆ. ಆದರೆ ದುರದೃಷ್ಟವಶಾತ್ ಈ ಅನುಭವ ಪಡೆದುಕೊಳ್ಳುವ ಮುನ್ನವೇ ಚಿರು ಎಲ್ಲರನ್ನೂ ಅಗಲಿದ್ದಾರೆ.


Click it and Unblock the Notifications











