»   » ನಟ ಚಿರಂಜೀವಿ ಸರ್ಜಾ ಬಾಯ್ಬಿಟ್ಟ ಸತ್ಯ ಇದು... ಹಾರ್ಟ್ ಬ್ರೇಕಿಂಗ್ ನ್ಯೂಸ್.!

ನಟ ಚಿರಂಜೀವಿ ಸರ್ಜಾ ಬಾಯ್ಬಿಟ್ಟ ಸತ್ಯ ಇದು... ಹಾರ್ಟ್ ಬ್ರೇಕಿಂಗ್ ನ್ಯೂಸ್.!

Posted By:
Subscribe to Filmibeat Kannada
'ಆಟಗಾರ', 'ರಾಮ್ ಲೀಲಾ' ಚಿತ್ರಗಳ ನಂತರ ಸ್ಯಾಂಡಲ್ ವುಡ್ ನಲ್ಲಿ ಹೆಚ್ಚಾಗಿ ಸದ್ದು ಮಾಡದ ನಟ ಚಿರಂಜೀವಿ ಸರ್ಜಾ ಈಗ ಏಕಾಏಕಿ ಎಲ್ಲರಿಗೂ... ಅದರಲ್ಲೂ ಹುಡುಗಿಯರಿಗೆ ಹಾರ್ಟ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.[ಚಿರಂಜೀವಿ ಸರ್ಜಾ ಹೆಸರಿನ ಮುಂದೆ ಹೊಸ ಟೈಟಲ್]

'ಪ್ರೇಮದ ಅಮಲಿನಲ್ಲಿ ನಟ ಚಿರಂಜೀವಿ ಸರ್ಜಾ ತೇಲುತ್ತಿದ್ದಾರೆ' ಎಂಬ ಗುಸು ಗುಸು ಆಗಾಗ ಗಾಂಧಿನಗರದ ಗಲ್ಲಿಗಳಲ್ಲಿ ಕೇಳಿಬರುತ್ತಿತ್ತು. ಈಗ 'ಅದು ಸತ್ಯ' ಅಂತ ಸ್ವತಃ ಚಿರಂಜೀವಿ ಸರ್ಜಾ ಒಪ್ಪಿಕೊಂಡಿದ್ದಾರೆ.

ಚಿರಂಜೀವಿ ಸರ್ಜಾ ಲವ್ ಮಾಡ್ತಿರೋದು ದಿಟ

ಕಳೆದ ಎಂಟು ವರ್ಷಗಳಿಂದ ನಟ ಚಿರಂಜೀವಿ ಸರ್ಜಾ ಲವ್ ಮಾಡ್ತಿದ್ದಾರೆ. ಹಾಗಂತ ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದಾರೆ.[ಚಿರಂಜೀವಿ ಸರ್ಜಾಗೆ ಪುನೀತ್ 'ಲವ್ ಟ್ರೇನಿಂಗ್']

ಚಿರು ಮಾಡಿರುವ ಟ್ವೀಟ್ ಇದು.

''ಕಳೆದ ಎಂಟು ವರ್ಷಗಳಿಂದ ನಾನು ಕಮಿಟ್ ಆಗಿದ್ದೇನೆ ಅಂತ ಇಡೀ ಜಗತ್ತಿಗೆ ಹೇಳಲು ಬಯಸುತ್ತೇನೆ. ನಾನು ಸಿಂಗಲ್ ಅಲ್ಲ'' ಎಂದು ಚಿರಂಜೀವಿ ಸರ್ಜಾ ಟ್ವೀಟ್ ಮಾಡಿದ್ದಾರೆ.

ಹುಡುಗಿ ಯಾರು.?

'ಕಮಿಟ್ ಆಗಿದ್ದೇನೆ' ಎಂದು ಹೇಳಿರುವ ಚಿರಂಜೀವಿ ಸರ್ಜಾ, ತಮ್ಮ ಮನದನ್ನೆ ಯಾರು ಎಂಬ ಗುಟ್ಟನ್ನ ಮಾತ್ರ ಬಿಟ್ಟುಕೊಟ್ಟಿಲ್ಲ.

'ಆಕೆ' ಜೊತೆ ಬಿಜಿ.!

ಸದ್ಯ ಚೈತನ್ಯ ಆಕ್ಷನ್ ಕಟ್ ಹೇಳಿರುವ 'ಆಕೆ' ಚಿತ್ರದಲ್ಲಿ ನಟ ಚಿರಂಜೀವಿ ಸರ್ಜಾ ಬಿಜಿಯಾಗಿದ್ದಾರೆ. 'ಆಕೆ' ಚಿತ್ರದ ಬಿಡುಗಡೆ ದಿನಾಂಕ ಇನ್ನೂ ಅನೌನ್ಸ್ ಆಗಿಲ್ಲ.

English summary
Kannada Actor Chiranjeevi Sarja has taken his twitter account to confirm his relationship status.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada