ಚಿರು ಸರ್ಜಾಗಿತ್ತೆ ದುಶ್ಚಟ? ಕುಟುಂಬದ ಆಪ್ತರು ಕೊಟ್ಟ ಸ್ಪಷ್ಟನೆ
ಸಿನಿಮಾ ಬಣ್ಣದ ಲೋಕ. ಸಿನಿಮಾ ಮಂದಿಯ ಜೀವನದ ಬಗ್ಗೆ ಸಾಮಾನ್ಯ ಜನಕ್ಕೆ ಹಲವು ಊಹೆಗಳಿರುತ್ತವೆ. ಸಿನಿಮಾ ಮಂದಿಯದ್ದು ಐಶಾರಾಮಿ ಬದುಕು, ಜಾಲಿ ಬದುಕು ಎಂದೆಲ್ಲಾ ಕಲ್ಪಿಸಿಕೊಂಡಿರುತ್ತಾರೆ. ಹೀಗೆ ಕಲ್ಪಿಸಿಕೊಳ್ಳಲು ಕೆಲವರು ಬದುಕಿದ್ದ ರೀತಿಯೂ ಕಾರಣ.
Recommended Video
ನಟ ಚಿರಂಜೀವಿ ಸರ್ಜಾ ನಿನ್ನೆ ವಿಧಿವಶರಾಗಿದ್ದಾರೆ. ಅವರಿಗೆ ಕೇವಲ 39 ವರ್ಷ ವಯಸ್ಸು. ಸಾಯುವ ವಯಸ್ಸು ಇದಲ್ಲ. ಆದರೆ ಅವರ ಸಾವಿನ ಬಗ್ಗೆ ಕೆಲವು ವಾಟ್ಸ್‌ಆಪ್ ವಿಶ್ಲೇಷಣೆಗಳು ಹರಿದಾಡುತ್ತಿವೆ.
ಚಿರಂಜೀವಿ ಸರ್ಜಾ ಅವರಿಗೆ ದುಶ್ಚಟಗಳಿದ್ದವು. ಅವೇ ಅವರ ಜೀವ ಇಷ್ಟು ಬೇಗನೆ ಹಾರಿಹೋಗಲು ಕಾರಣ ಎಂಬುದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆದರೆ ಚಿರಂಜೀವಿ ಸರ್ಜಾ ಅವರನ್ನು ಹತ್ತಿರದಿಂದ ನೋಡಿದವರು ಈ ಬಗ್ಗೆ ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.

ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ: ಪ್ರಶಾಂತ್
ಪ್ರಶಾಂತ್ ಸಂಬರ್ಗಿ ಸರ್ಜಾ ಕುಟುಂಬ ಬಹಳ ಆಪ್ತರು. ಇಂದು ಮಾಧ್ಯಮಗಳೊಟ್ಟಿಗೆ ಮಾತನಾಡಿದ ಪ್ರಶಾಂತ್, 'ಚಿರಂಜೀವಿ ಸರ್ಜಾ ಅವರಿಗೆ ಯಾವುದೇ ಕೆಟ್ಟ ಅಭ್ಯಾಸಗಳು ಇರಲಿಲ್ಲ, ದಯವಿಟ್ಟು ಸುಳ್ಳು ಸುದ್ದಿ ಹಬ್ಬಿಸಬೇಡಿ' ಎಂದು ಮನವಿ ಮಾಡಿದ್ದಾರೆ.

ಡ್ರಗ್ಸ್ ಸೇವನೆ, ನಿದ್ದೆ ಮಾತ್ರೆ ಎಲ್ಲಾ ಸುಳ್ಳು
'ಚಿರು ಡ್ರಗ್ಸ್ ತೆಗೆದುಕೊಂಡಿದ್ದರು, ನಿದ್ದೆ ಮಾತ್ರೆ ತೆಗೆದುಕೊಂಡಿದ್ದರು ಇನ್ನೂ ಏನೇನೋ ವಾಟ್ಸ್‌ಆಪ್ ಪೇಸ್‌ಬುಕ್‌ಗಳಲ್ಲಿ ಹರಿದಾಡುತ್ತಿದೆ' ಆದರೆ ಇದಾವುದೂ ನಿಜವಲ್ಲ, ಅವರಿಗೆ ಯಾವುದೇ ದುರಭ್ಯಾಸ ಇರಲಿಲ್ಲ' ಎಂದು ಪ್ರಶಾಂತ್ ಸಂಬರ್ಗಿ ಹೇಳಿದ್ದಾರೆ.

ಕುಡಿತದ ಅಭ್ಯಾಸವಿತ್ತು ಎನ್ನುತ್ತಾರೆ ಕೆಲವರು
ಆದರೆ ಕೆಲವರು ಹೇಳುವಂತೆ ಚಿರು ಸರ್ಜಾ ಗೆ ಕುಡಿತದ ಅಭ್ಯಾಸ ಇತ್ತು, ಆದರೆ ಅತಿಯಾಗಿ ಕುಡಿತದ ಚಟಕ್ಕೆ ದಾಸನಾಗಿರಲಿಲ್ಲವಂತೆ. ಅವರ ಸಿನಿಮಾದ ಗೆಳೆಯರೇ ಒಬ್ಬರು, 'ಮಳೆ ಬಂದ ಸಂಜೆಗಳಲ್ಲಿ ಸಿಗುತ್ತಿದ್ದ, ಇನ್ನು ಮುಂದೆ ಸಿಗುವುದಿಲ್ಲ' ಎಂದು ಮಾರ್ಮಿಕವಾಗಿ ಬರೆದುಕೊಂಡಿದ್ದಾರೆ. ಅವರ ಈ ಹೇಳಿಕೆಯನ್ನು ಕುಡಿತದೊಂದಿಗೆ ಸಮೀಕರಿಸಲಾಗಿದೆ.

ಸರ್ಜಾ ಕುಟುಂಬದ ಆಪ್ತ ಪ್ರಶಾಂತ್ ಸಂಬರ್ಗಿ
ಇನ್ನು ಪ್ರಶಾಂತ್ ಸಂಬರ್ಗಿ ಅವರು ಸರ್ಜಾ ಕುಟುಂಬಕ್ಕೆ ಬಹಳ ಆಪ್ತರಾಗಿದ್ದಾರೆ. ಅರ್ಜುನ್ ಸರ್ಜಾ ವಿರುದ್ಧ ಶ್ರುತಿ ಹರಿಹರನ್ ಮಿಟೂ ಆರೋಪ ಮಾಡಿದ್ದಾಗ, ಪ್ರಶಾಂತ್ ಸಂಬರ್ಗಿ ಕೆಂಡಾಮಂಡಲವಾಗಿ, ಶ್ರುತಿ ಹರಿಹರನ್ ವಿರುದ್ಧ ತೀವ್ರವಾಗಿ ಹೇಳಿಕೆಗಳನ್ನು ನೀಡಿದ್ದರು. ಹಲವು ಟಿವಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸರ್ಜಾ ಪರವಾಗಿ ವಾದಿಸಿದ್ದರು.


Click it and Unblock the Notifications











