For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ & ಅರ್ಜುನ್ ಫ್ಯಾಮಿಲಿಯ ಚಿತ್ರರಂಗದ ನಂಟು

  By ಜೇಮ್ಸ್ ಮಾರ್ಟಿನ್
  |

  ವಾಯುಪುತ್ರನಾಗಿ ಬೆಳ್ಳಿತೆರೆಯ ಮೇಲೆ ಮೊದಲಿಗೆ ಕಾಣಿಸಿಕೊಂಡ ಚಿರಂಜೀವಿ ಸರ್ಜಾರ ಅಕಾಲಿಕ ನಿಧನದಿಂದ ಅವರ ಆಪ್ತರು, ಬಂಧುಮಿತ್ರರು ಕುಟುಂಬಸ್ಥರು ದುಃಖತಪ್ತರಾಗಿದ್ದಾರೆ. ಕಲಾಸೇವೆ, ಚಿತ್ರರಂಗವನ್ನೇ ನೆಚ್ಚಿಕೊಂಡು ಬದುಕಿದ ಸಿನಿ ಕುಟುಂಬಗಳ ಪೈಕಿ "ಸರ್ಜಾ'' ಫ್ಯಾಮಿಲಿಯೂ ಕೂಡಾ ಒಂದು.

  ದಿವಂಗತ ಶಕ್ತಿ ಪ್ರಸಾದ್ ಅವರ ಮೊಮ್ಮಗ, ಅರ್ಜುನ್ ಸರ್ಜಾ ಅವರ ಸೋದರಳಿಯ, ಧ್ರುವ ಸರ್ಜಾರ ಅಣ್ಣ, ಮೇಘನಾ ರಾಜ್ ಪತಿ, ಐಶ್ವರ್ಯಾ ಸರ್ಜಾ ಕಸಿನ್, ಸುಂದರ್ ರಾಜ್, ಪ್ರಮೀಳಾ ಜೋಷಾಯ್ ಅವರ ಅಳಿಯ, ರಾಜೇಶ್, ಭರತ್ ಸಂಬಂಧಿ ಹೀಗೆ ಚಿತ್ರರಂಗ ಹಲವಾರು ಕಲಾವಿದರ ಕೂಟವನ್ನೆ ಹೊಂದಿದ್ದ ಚಿರಂಜೀವಿ ಎಲ್ಲರ ಪಾಲಿನ ನೆಚ್ಚಿನ ಮನೆಮಗನಾಗಿದ್ದರು. ಚಿತ್ರರಂಗದಲ್ಲೂ ಟಾಪ್ ನಟರ ವೈಮನಸ್ಯದ ನಡುವೆ ಎಲ್ಲರ ಜೊತೆ ಸಲುಗೆ, ಸ್ನೇಹ ಹೊಂದಿದ್ದ ಚಿರಂಜೀವಿ ಸರ್ಜಾ ಅವರು 39ನೇ ವಯಸ್ಸಿಗೆ ಬಣ್ಣದ ಲೋಕ, ಇಹಲೋಕದ ಯಾತ್ರೆ ಮುಗಿಸಿದ್ದಾರೆ.

  ನಟ ಚಿರಂಜೀವಿ ಸರ್ಜಾ ಅಂತ್ಯಕ್ರಿಯೆ ಜೂನ್ 8ರಂದು ಕನಕಕಪುರ ರಸ್ತೆ ನೆಲೆಗುಳಿಯಲ್ಲಿರುವ ಧ್ರುವ ಸರ್ಜಾ ಅವರ ಬೃಂದಾವನ ಫಾರ್ಮ್ ಹೌಸ್ ನಲ್ಲಿ ನೆರವೇರಿತು.

  ಚಿರು ಸೇರಿದಂತೆ ಚಿತ್ರರಂಗದ ''ಶಕ್ತಿ"ಯಾದ ಸರ್ಜಾ ಕುಟುಂಬದ ವಂಶವೃಕ್ಷ ಚಿತ್ರಣ ಇಲ್ಲಿದೆ...

  ಶಕ್ತಿ ಪ್ರಸಾದ್ (1928 – 2 ಆಗಸ್ಟ್ 1986)

  ಶಕ್ತಿ ಪ್ರಸಾದ್ (1928 – 2 ಆಗಸ್ಟ್ 1986)

  ಶಕ್ತಿ ಪ್ರಸಾದ್ (1928 - 2 ಆಗಸ್ಟ್ 1986) -ಚಿರಂಜೀವಿ ಸರ್ಜಾ ಅವರ ಅಜ್ಜ(ತಾಯಿಯ ತಂದೆ)

  ಶಕ್ತಿ ಪ್ರಸಾದ್ ಮೂಲ ಹೆಸರು: ಜೆಸಿ ರಾಮಸ್ವಾಮಿ

  ಜನ್ಮಸ್ಥಳ: ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಜಕ್ಕೇನಹಳ್ಳಿ

  ಪತ್ನಿ: ಲಕ್ಷ್ಮಿ

  ಪುತ್ರರು: ಕಿಶೋರ್ ಸರ್ಜಾ, ಅರ್ಜುನ್ ಸರ್ಜಾ

  ಮೊಮ್ಮಕ್ಕಳು: ಚಿರಂಜೀವಿ ಸರ್ಜಾ, ಧ್ರುವ ಸರ್ಜಾ, ಐಶ್ವರ್ಯಾ ಸರ್ಜಾ, ಅಂಜನಾ ಸರ್ಜಾ, ಸೂರಜ್ ಸರ್ಜಾ

  1967ರಲ್ಲಿ ಡಾ. ರಾಜ್ ಅಭಿನಯದ ಇಮ್ಮಡಿ ಪುಲಿಕೇಶಿ ಮೂಲಕ ಸಿನಿಮಾ ಬದುಕು ಆರಂಭಿಸಿ ಸುಮಾರು 20 ವರ್ಷಗಳಲ್ಲಿ 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದವರು.

  ಇಮ್ಮಡಿ ಪುಲಿಕೇಶಿ, ಬಬ್ರುವಾಹನ, ಮಯೂರ, ಅಂತ, ಚಕ್ರವ್ಯೂಹ ಹೆಸರು ತಂದುಕೊಟ್ಟ ಚಿತ್ರಗಳು

  ಶಕ್ತಿಪ್ರಸಾದ್ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು

  ಶಕ್ತಿಪ್ರಸಾದ್ ಮಕ್ಕಳು, ಮೊಮ್ಮಕ್ಕಳು, ಸಂಬಂಧಿಕರು

  ಕಿಶೋರ್ ಸರ್ಜಾ :

  ಶಕ್ತಿಪ್ರಸಾದ್ ಹಿರಿಯಪುತ್ರ ಕಿಶೋರ್ ಸರ್ಜಾ ನಿರ್ದೇಶಕರಾಗಿ ಹೆಸರು ಗಳಿಸಿದ್ದಾರೆ. ಕಿಶೋರ್ ಸರ್ಜಾ ಕೂಡಾ ಅಕಾಲಿಕ ಮರಣ ಹೊಂದಿದರು. 2009ರಲ್ಲಿ ನಿಧನರಾಗುವುದಕ್ಕೂ ಮುನ್ನ ಸೋದರಳಿಯ ಚಿರಂಜೀವಿ ಸರ್ಜಾರ ಮೊದಲ ಚಿತ್ರ ವಾಯುಪುತ್ರಕ್ಕೆ ನಿರ್ದೇಶಕರಾಗಿದ್ದರು. ಚಿತ್ರ ರೀ ರೆಕಾರ್ಡಿಂಗ್ ಹಂತದಲ್ಲಿದ್ದಾಗ ಕಿಶೋರ್ ಇನ್ನಿಲ್ಲ ಎಂಬ ಸುದ್ದಿ ಅಪ್ಪಳಿಸಿತು. ಅರ್ಜುನ್ ಅಭಿನಯದ ಅಳಿಮಯ್ಯ, ರಮೇಶ್-ಪ್ರೇಮಾ ಅಭಿನಯದ ತುತ್ತಾ ಮುತ್ತಾ, ಶಿವರಾಜ್ -ರಂಭಾ ಅಭಿನಯದ ಬಾವ ಬಾಮೈದ ಹೆಸರು ತಂದುಕೊಟ್ಟ ಚಿತ್ರಗಳು.

  ಡಿ ರಾಜೇಂದ್ರ ಬಾಬು, ವಿ ಸೋಮಶೇಖರ್, ವಿಜಯರೆಡ್ಡಿ, ರಾಜೇಂದ್ರ ಸಿಂಗ್ ಬಾಬು ಅವರ ಬಳಿ ಸಹನಿರ್ದೇಶಕರಾಗಿ ದುಡಿದಿದ್ದರು.

  2009ರ ಜೂನ್ 28ರಂದು ಕಿಶೋರ್ ಸರ್ಜಾ ನಾಲ್ಕುದಿನಗಳ ಕಾಲ ಜೀವನ್ಮರಣ ಹೋರಾಟ ನಡೆಸಿ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಾಗ ಅವರಿಗಿನ್ನೂ 50 ವರ್ಷ. ಪತ್ನಿ ಅಪರ್ಣಾ, 20 ವರ್ಷ ವಯಸ್ಸಿನ ಪುತ್ರ ಸೂರಜ್ ರನ್ನು ಅಗಲಿದ್ದರು. ಅಣ್ಣನ ಅಗಲಿಕೆಯಿಂದ ಅರ್ಜುನ್ ಕೂಡಾ ತೀವ್ರವಾಗಿ ನೊಂದಿದ್ದರು.

  ಶಕ್ತಿಪ್ರಸಾದ್ ಪುತ್ರ ಅರ್ಜುನ್ ಸರ್ಜಾ

  ಶಕ್ತಿಪ್ರಸಾದ್ ಪುತ್ರ ಅರ್ಜುನ್ ಸರ್ಜಾ

  ಅರ್ಜುನ್ ಸರ್ಜಾ

  ಮೂಲ ಹೆಸರು: ಶ್ರೀನಿವಾಸ ಸರ್ಜಾ

  ಜನನ: 15 ಆಗಸ್ಟ್ 1964

  ಜನ್ಮ ಸ್ಥಳ: ಮಧುಗಿರಿ, ತುಮಕೂರು

  ವೃತ್ತಿ: ನಟ, ನಿರ್ದೇಶಕ, ನಿರ್ಮಾಪಕ, ಚಿತ್ರಸಾಹಿತಿ, ವಿತರಕ

  1988ರಲ್ಲಿ ನಿವೇದಿತಾ ಅಲಿಯಾಸ್ ಆಶಾರಾಣಿ ಜೊತೆ ವಿವಾಹ.

  ಮಕ್ಕಳು: ಐಶ್ವರ್ಯಾ ಸರ್ಜಾ, ಅಂಜನಾ ಸರ್ಜಾ

  ಪೊಲೀಸ್ ಅಧಿಕಾರಿಯಾಗಲು ಬಯಸಿದ್ದ ಅರ್ಜುನ್, ತನ್ನ ಮಗ ಚಿತ್ರರಂಗಕ್ಕೆ ಬರುವುದು ಬೇಡ ಎನ್ನುತ್ತಿದ್ದ ಶಕ್ತಿ ಪ್ರಸಾದ್ ನಡುವೆ ಸಿನಿಮಾ ಬದುಕು ಅರ್ಜುನ್ ರನ್ನು 1981ರಿಂದ ಇಲ್ಲಿ ತನಕ ತಂದು ನಿಲ್ಲಿಸಿದೆ. ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಸಿಂಹದ ಮರಿ ಸೈನ್ಯದಲ್ಲಿ ಅಭಿನಯದ ಮೂಲಕ ಅಶೋಕ್ ಬಾಬು ಎಂಬ ಸ್ಕ್ರೀನ್ ನೇಮ್ ನಿಂದ ಬಾಬು ಕೊಟ್ಟ ಅರ್ಜುನ್ ಸರ್ಜಾ ಹೆಸರಿಗೆ ಬದಲಾವಣೆ.

  ಕರ್ನಾಟಕ ಹಾಗೂ ತಮಿಳುನಾಡು ರಾಜ್ಯದಿಂದ ಶ್ರೇಷ್ಠ ನಟ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ,ಹಿಂದಿ ಚಿತ್ರಗಳಲ್ಲಿ ನಟನೆ. ಹೆಚ್ಚಿನ ಸಾಹಸಪ್ರಧಾನ ಪಾತ್ರಗಳಲ್ಲಿ ನಟಿಸಿ Action King ಎನಿಸಿಕೊಂಡಿದ್ದಾರೆ.

  ಅರ್ಜುನ್ ಪತ್ನಿ ಹಾಗೂ ಪುತ್ರಿ

  ಅರ್ಜುನ್ ಪತ್ನಿ ಹಾಗೂ ಪುತ್ರಿ

  ಅರ್ಜುನ್ ಸರ್ಜಾ ಅವರ ಪತ್ನಿ ಆಶಾರಾಣಿ ಅವರು ಕನ್ನಡದಲ್ಲಿ ರಥಸಪ್ತಮಿ ಚಿತ್ರದಲ್ಲಿ ಶಿವರಾಜ್ ಕುಮಾರ್ ಜೊತೆ ನಾಯಕಿಯಾಗಿ ನಟಿಸಿದ್ದರು ಇವರ ತಂದೆ ಹಿರಿಯ ನಟ, ಕಲಾ ತಪಸ್ವಿ ರಾಜೇಶ್. ಅರ್ಜುನ್- ಆಶಾರಾಣಿ ಪುತ್ರಿ ಐಶ್ವರ್ಯಾ ಸರ್ಜಾ 2013ರಲ್ಲಿ ತಮಿಳು ಚಿತ್ರರಂಗ ಪ್ರವೇಶಿಸಿದರು. 2018ರಲ್ಲಿ ಅರ್ಜುನ್ ಸರ್ಜಾ ನಿರ್ದೇಶನದ ಪ್ರೇಮ ಬರಹ ಎಂಬ ಕನ್ನಡ ಹಾಗೂ ತಮಿಳಿನ ಸೊಲ್ಲಿವಿಡಲ ಚಿತ್ರದಲ್ಲಿ ನಟಿಸಿದ್ದಾರೆ. ಐಶ್ವರ್ಯಾ ಕಸಿನ್ಸ್ ಚಿರಂಜೀವಿ ಹಾಗೂ ಧ್ರುವ ಕೂಡಾ ಚಿತ್ರರಂಗದಲ್ಲಿ ಕಲಾವಿದರು.

  ಅರ್ಜುನ್ ಸರ್ಜಾ ಸಂಬಂಧಿ

  ಅರ್ಜುನ್ ಸರ್ಜಾ ಸಂಬಂಧಿ

  ಅರ್ಜುನ್ ಸರ್ಜಾ ತಾಯಿ ಲಕ್ಷ್ಮಿ ಅವರ ತಮ್ಮನ ಮಗ ಭರತ್ ಸರ್ಜಾ ಕೂಡಾ ಕನ್ನಡ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. `ಪ್ರಯಾಣಿಕರ ಗಮನಕ್ಕೆ',`ಪುಲಿಕೇಶಿ' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅರ್ಜುನ್ ಅವರ ಮಾವ ರಾಜೇಶ್ ಕನ್ನಡ ಚಿತ್ರರಂಗದ ಹಿರಿಯ ನಟರಾಗಿದ್ದಾರೆ.

  ****

  ಅರ್ಜುನ್ ಸರ್ಜಾ ಅವರ ಸಂಬಂಧಿ ಪವನ್ ತೇಜ್ 'ಅಥರ್ವ' ಸಿನಿಮಾದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ್ದಾರೆ. ಸಂಬಂಧದಲ್ಲಿ ಪವನ್ ಅವರಿಗೆ ಅರ್ಜುನ್ ಸರ್ಜಾ ಸೋದರ ಮಾವ ಆಗಬೇಕು. ಚಿತ್ರದಲ್ಲಿ ಎಡಬದಿ ಪವನ್ ತೇಜ್ ಬಲಬದಿ ಭರತ್.

  ಚಿರಂಜೀವಿ ಸರ್ಜಾ

  ಚಿರಂಜೀವಿ ಸರ್ಜಾ

  ಚಿರಂಜೀವಿ ಸರ್ಜಾ

  ಜನನ: 17 ಅಕ್ಟೋಬರ್ 1980

  ಮೂಲ ಹೆಸರು: ಚಿರಂಜೀವಿ ವಿಜಯ್ ಕುಮಾರ್

  ತಂದೆ, ತಾಯಿ: ವಿಜಯ್ ಕುಮಾರ್, ಅಮ್ಮಾಜಿ

  ಜನ್ಮ ಸ್ಥಳ: ಬೆಂಗಳೂರು

  ವೃತ್ತಿ: ನಟ, ಸಹಾಯಕ ನಿರ್ದೇಶಕ

  2018ರಲ್ಲಿ ನಟಿ ಮೇಘನಾ ರಾಜ್ ಜೊತೆ ವಿವಾಹ

  ಶಕ್ತಿ ಪ್ರಸಾದ್ ಅವರ ಮೊಮ್ಮಗ ಚಿರಂಜೀವಿ ಸರ್ಜಾ ಅವರು ಬಾಲ್ಡ್ ವೀನ್ ಹೈಸ್ಕೂಲ್, ವಿಜಯ ಕಾಲೇಜಿನಲ್ಲಿ ಓದು ಮುಗಿಸಿದ ಬಳಿಕ ಮಾವ ಅರ್ಜುನ್ ಸರ್ಜಾ ಸಲಹೆಯಂತೆ ಕಿಶೋರ್ ಸರ್ಜಾ ಅವರ ಬಳಿಕ ನಾಲ್ಕು ವರ್ಷ ಸಹಾಯಕರಾಗಿ ನಿರ್ದೇಶನದ ಪಾಠ ಕಲಿತರು. 2009ರಲ್ಲಿ ವಾಯುಪುತ್ರ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ. ಸೋದರ ಮಾವ ಕಿಶೋರ್ ಸರ್ಜಾರೇ ನಿರ್ದೇಶಕ. ಈ ಚಿತ್ರ ಇನ್ನೇನು ಬಿಡುಗಡೆಯಾಗುವಷ್ಟರಲ್ಲೇ ಕಿಶೋರ್ ಸರ್ಜಾ ಅಕಾಲಿಕ ನಿಧನರಾದರು.

  22 ಚಿತ್ರಗಳಲ್ಲಿ ನಟಿಸಿದ್ದ ಚಿರಂಜೀವಿ ಸರ್ಜಾ ಅವರ ನಾಲ್ಕು ಚಿತ್ರಗಳು 2020ರಲ್ಲಿ ಸಿದ್ಧತೆಯಲ್ಲಿತ್ತು. ಜೂನ್ 7, 2020ರಂದು ತೀವ್ರ ಹೃದಯಾಘಾತಕ್ಕೊಳಗಾಗಿ ಬೆಂಗಳೂರಿನ ಜಯನಗರದ ಸಾಗರ್ ಅಪೋಲೋ ಆಸ್ಪತ್ರೆಯಲ್ಲಿ ನಿಧನ.

  ಚಿರಂಜೀವಿ ಪತ್ನಿ ಮೇಘನಾ ರಾಜ್

  ಚಿರಂಜೀವಿ ಪತ್ನಿ ಮೇಘನಾ ರಾಜ್

  1990ರಲ್ಲಿ ಜನಿಸಿದ ಮೇಘನಾರಾಜ್ ತಂದೆ ಸುಂದರ್ ರಾಜ್, ತಾಯಿ ಪ್ರಮೀಳಾ ಜೋಷಾಯ್ ಇಬ್ಬರು ಸಿನಿರಂಗದ ಕಲಾವಿದರು.

  ಬಾಲನಟಿಯಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡ ಬಳಿಕ 2009ರಲ್ಲಿ ತೆಲುಗು ಚಿತ್ರದಲ್ಲಿ ಮೊದಲ ಬಾರಿಗೆ ಪೂರ್ಣ ಪ್ರಮಾಣ ಪಾತ್ರ ನಿರ್ವಹಿಸಿದರು. ನಂತರ ಕನ್ನಡ, ಮಲಯಾಳಂ, ತಮಿಳು ಚಿತ್ರರಂಗಲ್ಲಿ 40ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಚಿರಂಜೀವಿ ಹಾಗೂ ಮೇಘನಾ ಪ್ರೇಮಿಸಿ ಕ್ರೈಸ್ತ ಹಾಗೂ ಹಿಂದೂ ಸಂಪ್ರದಾಯದಂತೆ ವಿವಾಹವಾದರು. ಈ ಮೂಲಕ ಸರ್ಜಾ ತುಂಬು ಕುಟುಂಬದ ಪ್ರೀತಿಯ ಸೊಸೆಯಾದರು.

  ಧ್ರುವ ಸರ್ಜಾ

  ಧ್ರುವ ಸರ್ಜಾ

  ಧ್ರುವ ಸರ್ಜಾ

  1988ರ ಅಕ್ಟೋಬರ್ 6 ರಂದು ಜನ

  ತಂದೆ, ತಾಯಿ: ವಿಜಯ್ ಕುಮಾರ್, ಅಮ್ಮಾಜಿ

  ಜನ್ಮ ಸ್ಥಳ: ಬೆಂಗಳೂರು

  2019ರಲ್ಲಿ ಬಾಲ್ಯದ ಗೆಳತಿ ಪ್ರೇರಣಾ ಶಂಕರ್ ಜೊತೆ ವಿವಾಹವಾದರು.

  ಅದ್ದೂರಿ, ಬಹದ್ದೂರ್, ಭರ್ಜರಿ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸ ಕಿಚ್ಚು ಹಬ್ಬಿಸಿದ ನಟ. ಪೊಗರು ಬಹು ನಿರೀಕ್ಷಿತ ಚಿತ್ರ. ಅಣ್ಣ ಚಿರಂಜೀವಿ ಅಗಲಿಕೆಯ ನೋವಿನಲ್ಲಿ ಧ್ರುವ ಈಗ ಶೋಕ ಸಾಗರದಲ್ಲಿ ಮುಳುಗಿದ್ದಾರೆ.

  English summary
  Kannada actor Chiranjeevi Sarja Family Tree is here. He is Grandson of Late Shakati Prasad, nephew to Multi lingual actor Arjun Sarja.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more
  X