ಚಿರು ಸರ್ಜಾ ಅಂತ್ಯ ಕ್ರಿಯೆ: ತಮ್ಮನ ಫಾರ್ಮ್ ಹೌಸ್ ನಲ್ಲಿ ಚಿರ ನಿದ್ರೆಗೆ ಜಾರಿದ ಚಿರು
ನಟ ಚಿರಂಜೀವಿ ಸರ್ಜಾ ಇನ್ನೂ ನೆನಪು ಮಾತ್ರ. ಚಿರು ಪ್ರೀತಿಯ ಸಹೋದರ ಧ್ರುವ ಸರ್ಜಾ ಅವರ ಫಾರ್ಮ್ ನಲ್ಲಿಯೇ ಚಿರಂಜೀವಿ ಸರ್ಜಾ ಚಿರನಿದ್ರೆಗೆ ಜಾರಿದ್ದಾರೆ. ಸಂಜೆ 5ಗಂಟೆಗೆ ಚಿರಂಜೀವಿ ಸರ್ಜಾ ಅಂತ್ಯ ಕ್ರಿಯೆ ನೆರವೇರಿದೆ. ಚಿರಂಜೀವಿ ಕುಟುಂಬದವರು ಮತ್ತು ಚಿತ್ರರಂಗದ ಗಣ್ಯರು ಅಂತ್ಯ ಕ್ರಿಯೆಯಲ್ಲಿ ಭಾಗಿಯಾಗಿದ್ದರು.
Recommended Video
ಸಹೋದರ ಧ್ರುವ ಸರ್ಜಾ ಮತ್ತು ಮಾವ ಅರ್ಜುನ್ ಸರ್ಜಾ ಅಂತಿಮ ವಿಧಿವಿದಾನಗಳನ್ನು ನೆರವೇರಿಸಿದ್ದರು. ಫಾರ್ಮ್ ಹೌಸ್ ನಲ್ಲಿ ಚಿರು ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಪತ್ನಿ ಮೇಘನಾ ರಾಜ್ ಕೊನೆಯ ಬಾರಿಗೆ ಪತಿಯ ಮೃತದೇಹವನ್ನು ತಬ್ಬಿಕೊಂಡು ಬಿಕ್ಕಿ ಬಿಕ್ಕಿ ಅಳುವ ದೃಶ್ಯ ಕರಳುಕಿತ್ತುಬರುವಂತ್ತಿತ್ತು. ಕೊನೆಯ ಬಾರಿಗೆ ಹಣೆಗೆ ಮುತ್ತಿಕ್ಕಿ ಅಂತಿಮ ವಿದಾಯ ಹೇಳಿದರು.
ಇಡೀ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಅಣ್ಣನ ಮೃತದೇಹ ತಬ್ಬಿಕೊಂಡು ಧ್ರುವ ಬಕ್ಕಳಿಸಿ ಅಳುತ್ತಿದ್ದರು. ಚಿರು ಅಂತ್ಯಕ್ರಿಯೆಗೆ ಕುಟುಂಬದವರಿಗೆ ಮತ್ತು ಚಿತ್ರರಂಗದ ಗಣ್ಯರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿತ್ತು. ಚಿತ್ರರಂಗದ ಗಣ್ಯರಾದ ತಾರಾ, ನೀನಾಸಂ ಸತೀಶ್, ದುನಿಯ ವಿಜಯ್, ಪ್ರಜ್ವಲ್ ದೇವರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಅಂತಿಮ ದರ್ಶನ ಪಡೆದರು.

ಗೌಡ ಸಂಪ್ರದಾಯದಂತೆ ಚಿರು ಅಂತಿಮ ಕ್ರಿಯೆ ನೆರವೇರಿದೆ. 39ನೇ ವಯಸ್ಸಿಗೆ ಬಾರದ ಲೋಕಕ್ಕೆ ತೆರಳಿದ ಚಿರುಗೆ ಅಪಾರ ಸಂಖ್ಯೆ ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬದವರು ಕಣ್ಣೀರಿನ ವಿದಾಯ ಹೇಳಿದರು. ಚಿಕ್ಕ ವಯಸ್ಸಿನಲ್ಲಿಯೆ ಜೀವನದ ಯಾತ್ರೆ ಮುಗಿಸಿ ಹೊರಟಿರುವ ಚಿರು ಇನ್ನು ನೆನಪು ಮಾತ್ರ.


Click it and Unblock the Notifications











