»   » 'ಸಂಹಾರ' ಮಾಡಲು ಸಜ್ಜಾದ ಅಡುಗೆ ಭಟ್ಟ ಚಿರು ಸರ್ಜಾ

'ಸಂಹಾರ' ಮಾಡಲು ಸಜ್ಜಾದ ಅಡುಗೆ ಭಟ್ಟ ಚಿರು ಸರ್ಜಾ

Posted By:
Subscribe to Filmibeat Kannada

'ಆಕೆ' ನಂತರ ಯುವ ಸಾಮ್ರಾಟ್ ಚಿರಂಜೀವಿ ಸರ್ಜಾ ಅಭಿನಯಿಸುತ್ತಿರುವ 'ಸಂಹಾರ' ಚಿತ್ರದ ಫಸ್ಟ್ ಲುಕ್ ಬಿಡುಗಡೆ ಆಗಿದೆ. ಜೊತೆಗೆ ಈಗ ಚಿತ್ರದಲ್ಲಿ ಚಿರು ಸರ್ಜಾ ಯಾವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ರಿವೀಲ್ ಆಗಿದೆ.

ಈ ಹಿಂದೆ ಚಿರಂಜೀವಿ ಸರ್ಜಾ ಅಭಿನಯದ 'ರುದ್ರ ತಾಂಡವ' ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ಗುರು ದೇಶಪಾಂಡೆ 'ಸಂಹಾರ' ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಚಿರಂಜೀವಿ ಸರ್ಜಾ ತಮ್ಮ ಈ ಹಿಂದಿನ ಚಿತ್ರಗಳಿಗಿಂತ ಡಿಫರೆಂಟ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಅವರು 'ಚೆಫ್' ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದಲ್ಲಿನ ಅವರ ಲುಕ್ ಸಹ ಹೊರಬಿದ್ದಿದ್ದು, ಚಿರು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅವರ ಲುಕ್ ಅನ್ನು ರಿವೀಲ್ ಮಾಡಿದ್ದಾರೆ.

Chiranjeevi Sarja and Haripriay starrer 'Samhara' movie first look released

'ಸಂಹಾರ'ದಲ್ಲಿ ನಾಯಕಿ ಆಗಿ ನಟಿ ಹರಿಪ್ರಿಯ ಬಣ್ಣಹಚ್ಚಿದ್ದು ಅವರ ಲುಕ್ ಸಹ ಬಿಡುಗಡೆ ಆಗಿದೆ. ವಿಶೇಷ ಅಂದ್ರೆ ಹರಿಪ್ರಿಯ ಖಳನಟಿಯಾಗಿ ಕಾಣಿಸಿಕೊಳ್ಳಲಿದ್ದು, ಅವರ ಖಡಕ್ ಲುಕ್ ಸಹ ಬಿಡುಗಡೆ ಆಗಿದೆ. ಆದರೆ ಖಳನಟಿಯಾಗಿ ಅವರ ಲುಕ್ ನಲ್ಲಿ ಮುಖದಲ್ಲಿ ಮುಗುಳು ನಗುವಿಗಿಂತ ಸೀರಿಯಸ್ ಆಗಿದ್ರೆ ಪಾತ್ರಕ್ಕೆ ತಕ್ಕ ಲುಕ್ ಎಂಬ ಫೀಲ್ ನೀಡುತ್ತಿತ್ತು.

Haripriya

ಗುರು ದೇಶಪಾಂಡೆ ಅವರು ಪ್ರಜ್ವಲ್ ದೇವರಾಜ್ ಮತ್ತು ರವಿಚಂದ್ರನ್ ಅಭಿನಯದ ಸಿನಿಮಾಗೆ ಆಕ್ಷನ್ ಕಟ್ ಹೇಳುವ ಬಗ್ಗೆ ಈ ಹಿಂದೆ ಮಾಹಿತಿ ನೀಡಿದ್ದರು. ಆದರೆ ಈಗ 'ಸಂಹಾರ'ದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರದಲ್ಲಿ ಹರಿಪ್ರಿಯ ಮಾತ್ರವಲ್ಲದೇ ಕಾವ್ಯ ಶೆಟ್ಟಿ ರವರು ಸಹ ಮತ್ತೊಬ್ಬ ನಾಯಕಿ ಆಗಿ ಬಣ್ಣ ಹಚ್ಚಲಿದ್ದಾರೆ. ಅಲ್ಲದೇ ಚಿಕ್ಕಣ್ಣ ಸಹ ಕಾಣಿಸಿಕೊಳ್ಳಲಿದ್ದಾರೆ.

'Samhara' movie first look released

'ಸಂಹಾರ'ಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜನೆ, ಜಗದೀಶ್ ವಾಲಿ ರವರ ಛಾಯಾಗ್ರಹಣ ಇದೆ. 'ರುದ್ರ ತಾಂಡವ' ಚಿತ್ರದಲ್ಲಿ ಕೆಲಸ ಮಾಡಿದ ಹಲವು ತಂತ್ರಜ್ಞರು ಈ ಚಿತ್ರದಲ್ಲಿ ಕೆಲಸ ಮಾಡಲಿದ್ದಾರೆ ಎಂದು ತಿಳಿದಿದೆ. ಚಿತ್ರವನ್ನು ಎ.ವೆಂಕಟೇಶ್ ಮತ್ತು ಆರ್ ಸುಂದರ ಕುಮರಾಜ್ ರವರು ನಿರ್ಮಾಣ ಮಾಡುತ್ತಿದ್ದಾರೆ.

English summary
Chiranjeevi Sarja and Haripriay starrer Kannada Movie 'Samhara' first look released

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada