ಗೆಳೆಯರ ಜೊತೆ ಚಿರು ಕೊನೆಯ ವಾಟ್ಸಾಪ್ ಚಾಟ್ ವೈರಲ್: ಮೆಸೇಜ್ ನಲ್ಲಿ ಏನಿದೆ?
ನಟ ಚಿರಂಜೀವಿ ಸರ್ಜಾ ದಿಢೀರ್ ನಿಧನ ಕುಟುಂಬದವರಿಗೆ, ಸ್ನೇಹಿತರಿಗೆ ಮತ್ತು ಅಭಿಮಾನಿಗಳಿಗೆ ದೊಡ್ಡ ಆಘಾತವುಂಟುಮಾಡಿದೆ. ಇನ್ನೂ ಬಾಳಿ ಬದುಕಬೇಕಿದ್ದ ನಟ ಚಿಕ್ಕ ವಯಸ್ಸಿಯೆ ಸಾವನ್ನಪ್ಪಿರುವ ಸತ್ಯವನ್ನು ಅರಗಿಸಿಕೊಳ್ಳಲು ಸಾಧ್ಯಗುತ್ತಿಲ್ಲ. ಚಿರು ನಿಧನಕ್ಕೆ ಇಡೀ ಚಿತ್ರರಂಗ ನಿಧನಕ್ಕೆ ಕಂಬನಿ ಮಿಡಿದಿದೆ.
Recommended Video
ಅಂದ್ಹಾಗೆ ಚಿರು ಸರ್ಜಾ ಅವರ ಒಂದು ಆಪ್ತ ಗೆಳೆಯರ ಬಳಗವಿದೆ. ಚಿರು ಮತ್ತು ಗೆಳೆಯರೆಲ್ಲಾ ಆಗಾಗ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಪ್ರವಾಸಕ್ಕೆ ಹೋಗುವುದು, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಭಾಗಿಯಾಗುವುದು, ಹುಟ್ಟುಹಬ್ಬ ಆಚರಣೆ ಹೀಗೆ ಸ್ನೇಹಿತರೆಲ್ಲ ಒಟ್ಟಿಗೆ ಸೇರಿ ಸಾಕಷ್ಟು ಮಸ್ತಿ ಮಾಡುತ್ತಿದ್ದರು. ಆ ಗುಂಪಿನಲ್ಲಿ ನಟ ಪ್ರಜ್ವಲ್ ದೇವರಾಜ್, ಪನ್ನಗಾಭರಣ ಸೇರಿದ್ದಂತೆ ಅನೇಕರಿದ್ದಾರೆ. ಚಿರು ಈ ಸ್ನೇಹಿತರ ಗ್ರೂಪ್ ನಲ್ಲಿ ಮಾಡಿರುವ ವಾಟ್ಸಾಪ್ ಚಾಟ್ ವೈರಲ್ ಆಗುತ್ತಿದೆ. ಮುಂದೆ ಓದಿ...

ಚಿರು ವ್ಯಕ್ತಪಡಿಸಿದ ಬಯಕೆ ಏನು?
ಲಾಕ್ ಡೌನ್ ನಿಂದ ಸುಮಾರು ಎರಡು ತಿಂಗಳು ಮನೆಯಲ್ಲಿಯೆ ಇದ್ದ ಚಿರು ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ತನ್ನ ಆಸೆಯನ್ನು ಸ್ನೇಹಿತರ ವಾಟ್ಸಾಪ್ ಗ್ರೂಪ್ ನಲ್ಲಿ ಹೇಳಿಕೊಂಡಿದ್ದಾರೆ. ಚಿರು ಮಾಡಿರುವ ಮೆಸೇಜ್ ನ ಸ್ಕ್ರೀನ್ ಶಾಟ್ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಚಿರು ಮಾಡಿರುವ ಮಸೇಜ್ ನಲ್ಲೀದೆ?
ಸ್ನೇಹಿತರ ಜೊತೆ ಚಿರು ಮಾಡಿರುವ ಗ್ರೂಪ್ ಚಾಟ್ ನಲ್ಲಿ ಎಲ್ಲರೂ ಪ್ರವಾಸಕ್ಕೆ ಹೋಗೋಣ ಎಂದು ಗೆಳೆಯರ ಬಳಿ ಕೇಳಿಕೊಂಡಿದ್ದಾರೆ. "ಹಾಯ್ ಫ್ರೆಂಡ್ಸ್ ನಿಮಗೊಂದು ಗೊತ್ತಾ..ನಾನು ನಿಮ್ಮನ್ನು ಪ್ರೀತಿಸುತ್ತೇನೆ...ಒಂದು ವಾರ ಎಲ್ಲಾದರೂ ಪ್ರವಾಸಕ್ಕೆ ಹೋಗೋಣ..ಕಳೆದುಕೊಂಡಿದ್ದನ್ನು ಮತ್ತೆ ಪಡೆಯೋಣ..ನಾಳೆ ನಮ್ಮಲ್ಲಿ ಏನಿದೆ ಎನ್ನುವುದು ನಮನಗೆ ಗೊತ್ತಿಲ್ಲ" ಎಂದು ಗೆಳೆಯರ ಚಾಟ್ ಮಾಡಿದ್ದಾರೆ.

ಚಿರು ಮಾಡಿರುವ ಮೆಸೇಜ್ ಹೌದಾ?
ಸದ್ಯ ವೈರಲ್ ಆಗಿರುವ ಸ್ಕ್ರೀನ್ ಶಾಟ್ ಚಿರು ಸರ್ಜಾ ಅವರೆ ಮಾಡಿರುವ ಮೆಸೇಜ್ ಗಳ ಎನ್ನುವ ಅನುಮಾನ ಕಾಡುತ್ತಿದೆ. ಚಿರು ಸರ್ಜಾ ಅವರ ಮೊಬೈಲ್ ಯಿಂದ ಇಷ್ಟು ಬೇಗ ಸ್ಕ್ರೀನ್ ಶಾಟ್ ತೆಗೆದು ವೈರಲ್ ಮಾಡಿರುವುದ್ಯಾರು? ಇದು ನಿಜಕ್ಕು ಚಿರು ಮಾಡಿರುವ ಮೆಸೇಜ್ ಗಳ ಎನ್ನುವ ಗೊಂದಲ ಸಹ ಇದೆ. ಆದರೆ ಚಿರು ಸರ್ಜಾ ಕೊನೆಯ ಗ್ರೂಪ್ ಚಾಟ್ ಇದು ಎಂದು ಎಲ್ಲಾ ಕಡೆ ವೈರಲ್ ಆಗುತ್ತಿದೆ.

ಅರ್ಜುನ್ ಸರ್ಜಾ ಪೋಸ್ಟ್
ನಟ ಅರ್ಜುನ್ ಸರ್ಜಾ, ಅಳಿಯ ಚಿರಂಜೀವಿ ಸರ್ಜಾ ಜೊತೆಗಿನ ಫೋಟೋ ಶೇರ್ ಮಾಡಿ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ. ವಿಧಿ ಎಷ್ಟು ಕ್ರೂರಿ ಎಂದು ಬರೆದುಕೊಂಡಿದ್ದಾರೆ. ಚಿರು ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅರ್ಜುನ್ ಸರ್ಜಾ ಫೇಸ್ ಬುಕ್ ಡಿಪಿಯನ್ನು ಬದಲಾಯಿಸಿ ಕಪ್ಪು ಬಣ್ಣದ ಡಿಪಿ ಹಾಕಿದ್ದರು. ಆದರೀಗ ಸಿಟ್ಟಿನಿಂದ ಸಿಡಿದೆದ್ದಿರುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ.


Click it and Unblock the Notifications











