ರಾಧಿಕಾ ಪಂಡಿತ್ ಕಂಬ್ಯಾಕ್ ಗೆ ಚಿರು ಸರ್ಜಾ ಎದುರಾಳಿ.!

ರಾಕಿಂಗ್ ಸ್ಟಾರ್ ಯಶ್ ಅವರನ್ನ ಮದುವೆ ಆದ ಬಳಿಕ ಸ್ಯಾಂಡಲ್ ವುಡ್ ಪ್ರಿನ್ಸಸ್ ರಾಧಿಕಾ ಪಂಡಿತ್ ಅಭಿನಯದ ಯಾವ ಸಿನಿಮಾನೂ ಬಿಡುಗಡೆಯಾಗಿಲ್ಲ. 2016 ಅಕ್ಟೋಬರ್ 28ರಲ್ಲಿ ಸಂತು ಸ್ಟ್ರೈಟ್ ಫಾರ್ವಾಡ್ ಚಿತ್ರವೇ ರಾಧಿಕಾ ಅವರ ಕೊನೆ ಚಿತ್ರವಾಗಿತ್ತು.

ಇದೀಗ, ಎರಡೂವರೆ ವರ್ಷದ ನಂತರ ತೆರೆಮೇಲೆ ಬರುವ ಖುಷಿಯಲ್ಲಿದ್ದಾರೆ ರಾಧಿಕಾ ಪಂಡಿತ್. ನಿರೂಪ್ ಭಂಡಾರಿ ಜೊತೆ ನಾಯಕಿಯಾಗಿ ನಟಿಸಿರುವ ಆದಿಲಕ್ಷ್ಮಿ ಪುರಾಣ ಸಿನಿಮಾ ಬಿಡುಗಡೆ ದಿನಾಂಕ ಪ್ರಕಟ ಮಾಡಿದೆ.

ಜುಲೈ 19 ರಂದು ರಾಧಿಕಾ ಪಂಡಿತ್ ಮತ್ತೆ ಬೆಳ್ಳಿತೆರೆ ಮೇಲೆ ಮಿಂಚಲಿದ್ದಾರೆ. ಸುಮಾರು ವರ್ಷದ ನಂತರ ಕಂಬ್ಯಾಕ್ ಕೊಡ್ತಿರುವ ನಟಿಗೆ ಅಭಿಮಾನಿಗಳು ರೆಡ್ ಕಾರ್ಪೆಟ್ ಹಾಕಿ ಸ್ವಾಗತಿಸಲು ಸಜ್ಜಾಗಿದ್ದಾರೆ. ಹೀಗಿರವಾಗಲೇ ಯಶ್ ಪತ್ನಿಗೆ ಚಿರು ಸರ್ಜಾ ಎದುರಾಳಿಯಾಗಿ ನಿಂತಿದ್ದಾರೆ. ಮುಂದೆ ಓದಿ....

ಅದೇ ದಿನ ಬರ್ತಿದೆ ಚಿರು ಸರ್ಜಾ ಚಿತ್ರ

ಅದೇ ದಿನ ಬರ್ತಿದೆ ಚಿರು ಸರ್ಜಾ ಚಿತ್ರ

ರಾಧಿಕಾ ಪಂಡಿತ್ ಅವರ ಆದಿಲಕ್ಷ್ಮಿ ಪುರಾಣ ಸಿನಿಮಾ ತೆರೆಕಾಣಲಿರುವ ದಿನದಂದೇ ಚಿರಂಜೀವಿ ಸರ್ಜಾ ಅಭಿನಯದ ಸಿಂಗ ಸಿನಿಮಾ ರಿಲೀಸ್ ಆಗುತ್ತಿದೆ. ಈ ಮೂಲಕ ಯಶ್ ಪತ್ನಿಯ ಕಂಬ್ಯಾಕ್ ಚಿತ್ರಕ್ಕೆ ಚಿರು ಸರ್ಜಾ ಸಿನಿಮಾ ಎದುರಾಳಿಯಾಗಲಿದೆ.

ಜೂನ್ 14ಕ್ಕೆ ಟ್ರೈಲರ್

ಜೂನ್ 14ಕ್ಕೆ ಟ್ರೈಲರ್

ಶಾನೆ ಟಾಪ್ ಆಗವ್ಳೆ ಹಾಡಿನ ಮೂಲಕ ಸಖತ್ ಸದ್ದು ಮಾಡಿರುವ ಸಿಂಗ ಸಿನಿಮಾದ ಟ್ರೈಲರ್ ಜೂನ್ 14 ರಂದು ಬಿಡುಗಡೆಯಾಗುತ್ತಿದೆ. ಟ್ರೈಲರ್ ಬಂದ ಒಂದು ತಿಂಗಳು ನಂತರ ಸಿನಿಮಾ ರಿಲೀಸ್ ಆಗುತ್ತಿದೆ.

ಅಧಿತಿ ಪ್ರಭುದೇವ ನಾಯಕಿ

ಅಧಿತಿ ಪ್ರಭುದೇವ ನಾಯಕಿ

ಆದಿಲಕ್ಷ್ಮಿ ಪುರಾಣ ಚಿತ್ರದಲ್ಲಿ ನಿರೂಪ್ ಭಂಡಾರಿ ನಾಯಕನಾಗಿದ್ದು, ರಾಧಿಕಾ ಪಂಡಿತ್ ನಾಯಕಿ. ಸಿಂಗ ಚಿತ್ರದಲ್ಲಿ ಚಿರು ಸರ್ಜಾ ನಾಯಕನಾಗಿದ್ದು, ಅಧಿತಿ ಪ್ರಭುದೇವ ನಾಯಕಿಯಾಗಿ ನಟಿಸಿದ್ದಾರೆ. ಆದಿಲಕ್ಷ್ಮಿ ಪುರಾಣ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್ ನಿರ್ಮಾಣ ಮಾಡಿರುವುದು ವಿಶೇಷ.

ಎರಡು ನಿರೀಕ್ಷೆಯ ಚಿತ್ರಗಳು

ಎರಡು ನಿರೀಕ್ಷೆಯ ಚಿತ್ರಗಳು

ಹಾಗ್ನೋಡಿದ್ರೆ, ಈ ಎರಡು ನಿರೀಕ್ಷೆಯ ಚಿತ್ರಗಳೇ. ರಾಧಿಕಾ ಪಂಡಿತ್ ಗೆ ಕಂಬ್ಯಾಕ್ ಸಿನಿಮಾ ಆಗಿದ್ರೆ, ಚಿರು ಸರ್ಜಾಗೂ ಸಿನಿಮಾ ಬಹುಮುಖ್ಯವಾಗಿದೆ. ಒಂದೇ ದಿನ ಈ ಎರಡು ಚಿತ್ರಗಳು ಬರುತ್ತಿರುವುದರಿಂದ ಸಹಜವಾಗಿ ಬಾಕ್ಸ್ ಆಫೀಸ್ ನಲ್ಲಿ ಪರಿಣಾಮ ಬೀರಬಹುದು ಎಂಬ ನಿರೀಕ್ಷೆ ಇದೆ.

More from Filmibeat

English summary
Chiranjeevi sarja and aditi prabhudeva starrer singa and radhika pandith come back movie adilakshmi purana will releasing together on july 19th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X